ಮರೆಮಾಚುತ್ತಿರುವ ಸಂಪ್ರದಾಯಕ ಚಿಣ್ಹರ ಹಬ್ಬ
ಕಾರಹುಣ್ಣಿಮೆ ನಿಮಿತ್ಯ ಚಿಣ್ಣರ ಮದುವೆಯ ಸಂಭ್ರಮ
ಹುಣಸಗಿ: ಸಂಪ್ರದಾಯದಂತೆ ಕಾರಹುಣ್ಣಿಮೆ ದಿನದಂದು ಪಟ್ಟಣದಲ್ಲಿ ಎತ್ತುಗಳನ್ನು ಮೆರವಣಿಗೆ ಮಾಡಿ ಕರಿ ಹರಿದ ನಂತರದ ಮರುದಿಬ ಚಿಣ್ಣರೆಲ್ಲರೂ ಕೂಡಿಕೊಂಡು ಕೊಬ್ಬರಿ ಚಿಪ್ಪಿನಲ್ಲಿ ಹಾಕಿದ ಗೋದಿ, ಜೋಳ, ಹಾಗೂ ಇತರೆ ದಿನಸಿಗಳ ಸಸಿಗಳನ್ನು ಬೆಳೆಸಿ ಅವುಗಳನ್ನು ತಡಗದುಕೊಂಡು ಹೋಗಿ ಹಳ್ಳಕ್ಕೆ ಅಥವಾ ದೇವಸ್ಥಾನದಲ್ಲಿ ಇಟ್ಟು ಪೂಜೆ ಮಾಡಿ ನಂತರ ಮಕ್ಕಳಲ್ಲಿ ಇಬ್ಬರಿಗೆ ಗಂಡು ಹೆಣ್ಣು ಅಂತ ಮದು ಮಕ್ಕಳನ್ನಾಗಿ ಮಾಡಿ ಅವರಿಬ್ರರಿಗೂ ಮದುವೆ ಮಾಡಿ ಸಂಭಮಿಸುವ ದಿನವೇ ಈ ಕಾರಹುಣ್ಣಿಮೆ.
ಇಂತಹ ಸಂಪ್ರದಾಯಕ ಹಬ್ಬವನ್ನು ಇಂದು ಪಟ್ಟಣದ ಲಕ್ಷ್ಮೀ ದೇವಿ ದೇವಸ್ಥಾನದಲ್ಲಿ ಕಾರಹುಣ್ಣಿಮೆ ಅಂಗವಾಗಿ ಸಸಿ ಹಬ್ಬ ಹಾಡುವ ಮೂಲಕ ಚಿಣ್ಣರಿಗೆ ಮದುವೆ ಮಾಡಿ ಸಂಭ್ರಮಿಸಲಾಯಿತು. ಇತರೆ ಮಕ್ಕಳು ಸಂಭ್ರಮಿಸಿದರು.
:
ಇತ್ತಿಚೇಗೆ ಮಕ್ಕಳಿಗೆ ಸಂಪ್ರದಾಯಕ ಹಬ್ಬಗಳನ್ನು ಪರಿಚಯಿಸುವುದು ಕಡಿಮೆ ಆಗುತ್ತಿದ್ದು ಮಕ್ಕಳಲ್ಲಿ ತಲತಲಾಂತರದಿಂದ ಆಚರಿಸಿಕೊಂಡು ಬರುತ್ತಿರುವ ಚಿಣ್ಣರ ಹಬ್ಬಗಳನ್ನು ತಿಳಿಸುವುದು ಅತ್ಯವಶ್ಯಕವಾಗಿರುವುದಂತು ಸತ್ಯ ಸಂಗತಿಯಾಗಿದೆ.
ಈ ವೇಳೆ ಚಿಣ್ಣರೊಂದಿಗೆ ಊರಿನ ಗಣ್ಯರಾದ ಬಸವರಾಜ ಬಳಿ ಹಾಗೂ ಇತರರು ಸಹಕರಿಸುವ ಮೂಲಕ ಹಬ್ಬವನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ವರದಿ: ಬಾಪುಗೌಡ ಮೇಟಿ ಹುಣಸಗಿ

