ಬೆಂಗಳೂರು: 18 ನೇ ಲೋಕಸಭೆಯ ಮೊದಲ ಅಧಿವೇಶನ ಇಂದಿನಿಂದ ಆರಂಭವಾಗಲಿದ್ದು, ಸರಳ ಬಹುಮತದ ಮೂಲಕ ಅಧಿಕಾರ ಪಡೆದಿರುವ ಎನ್ ಡಿಎನ್ಎ ಪಾಲಿಗೆ ನಿಜ ಸವಾಲು ಎದುರಾಗಲಿದೆ.
ಭಾರಿ ಗೆಲುವಿನ ನಿರೀಕ್ಷೆಯಲ್ಲಿದ್ದ ಬಿಜೆಪಿ, ಸರಳ ಬಹುಮತವನ್ನಷ್ಟೇ ಪಡೆದು, ಮಿತ್ರಪಕ್ಷಗಳ ಸಹಕಾರದಿಂದ ಸರಕಾರ ರಚನೆ ಮಾಡಿದೆ. ಆದರೆ, ಚಂದ್ರಬಾಬು ನಾಯ್ಡು ಮತ್ತು ನಿತೀಶ್ ಕುಮಾರ್ ಅವರ ಬೆಂಬಲ ಹೆಚ್ಚು ಕಾಲ ಉಳಿಯುವುದಿಲ್ಲ ಎಂಬ ಮಾತುಗಳಿವೆ. ಹೀಗಾಗಿ, ಬಿಜೆಪಿಗೆ ಇದು ಬಿಸಿತುಪ್ಪವಾಗಿದೆ. ಜತೆಗೆ ಈ ಬಾರಿ ಪ್ರತಿಪಕ್ಷಗಳ ಬಲ ಹೆಚ್ಚಾಗಿದ್ದು, ಅವರನ್ನು ಲೋಖಸಭೆ ಕಲಾಪದಲ್ಲಿ ಎದುರಿಸುವುದು ಅಷ್ಟು ಸುಲಭದ ಮಾತಲ್ಲ.
ಈ ನಡುವೆ ಹಂಗಾಮಿ ಸ್ಪೀಕರ್ ಆಯ್ಕೆಯಲ್ಲಿ ಬಿಜೆಪಿ ನಿಯಮ ಪಾಲನೆ ಮಾಡಿಲ್ಲ ಎಂಬ ಆರೋಪವನ್ನು ಕಾಂಗ್ರೆಸ್ ಮತ್ತು ಇತರೆ ಪಕ್ಷಗಳು ಮಾಡುತ್ತಿವೆ. ಎಂಟು ಬಾರಿ ಆಯ್ಕೆಯಾಗಿರುವ ಕಾಂಗ್ರೆಸ್ ನ ಕೋಡಿಕ್ಕಲ್ ಏಳು ಬಾರಿ ಗೆದ್ದಿರುವ ಬಿಜೆಪಿಯ ಮಹತಾಬ್ ರನ್ನು ಹಂಗಾಮಿ ಸ್ಫೀಕರ್ ಆಗಿ ಆಯ್ಕೆ ಮಾಡಲಾಗಿದೆ. ಇದು ಗದ್ದಲಕ್ಕೆ ಕಾರಣವಾಗುವ ಸಾಧ್ಯತೆಗಳಿವೆ.
ಇಂದಿನಿಂದ ಆರಂಭವಾಗಲಿರುವ ಕಲಾಪದಲ್ಲಿ ಮೊದಲಿಗೆ ನರೇಂದ್ರ ಮೋದಿ ನೇತೃತ್ವದ ಸಂಪುಟ ಸಚಿವರುವಪೃಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಎರಡು ದಿನಗಳ ಕಾಲ ಸಂಸದರ ಪ್ರಮಾಣ ವಚನ ಸಮಾರಂಭವೇ ನಡೆಯಲಿದೆ. ಮೊದಲ ದಿನ ಹಂಗಾಮಿ ಸ್ಪೀಕರ್ ಹಾಗೂ ದಿನ 280 ಸಂಸದರಿಗೆ ಪ್ರಮಾಣ ವಚನ ಬೋಧನೆ ಮಾಡಲಾಗುತ್ತದೆ. ಉಳಿದ ಸಂಸದರಿಗೆ ಮಂಗಳವಾರ ಪ್ರಮಾಣವಚನ ಬೋಧನೆ ನಡೆಯಲಿದೆ.

