ಅಪರಾಧ ರಾಜಕೀಯ ಸುದ್ದಿ

ವಾಲ್ಮೀಕಿ ನಿಗಮದ ಹಗರಣ: 10 ಕೋಟಿ ರೂ. ಎಸ್ಐಟಿ ವಶಕ್ಕೆ

Share It

ಬೆಂಗಳೂರು : ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಬಹುಕೋಟಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿ SIT ಅಧಿಕಾರಿಗಳು ಮತ್ತೆ 10 ಕೋಟಿ ನಗದು ವಶಕ್ಕೆ ಪಡೆದಿದ್ದಾರೆ. ಬಾರ್, ಚಿನ್ನದ ಅಂಗಡಿ ಖಾತೆಗಳಿಗೆ ವರ್ಗಾವಣೆ ಆಗಿದ್ದ 10 ಕೋಟಿ ಹಣವನ್ನು ವಶಕ್ಕೆ ಪಡೆಯಲಾಗಿದೆ.

ಬೆಂಗಳೂರಿನಲ್ಲಿ SIT ಅಧಿಕಾರಿಗಳು 193 ಬ್ಯಾಂಕ್ ಖಾತೆಗಳಿಂದ 10 ಕೋಟಿ ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಬಾರ್, ಚಿನ್ನದ ಅಂಗಡಿ ಖಾತೆಗಳಿಗೆ ವರ್ಗಾವಣೆ ಮಾಡಿ ವಿತ್ ಡ್ರಾ ಮಾಡಿಕೊಂಡಿದ್ದ ಹಣವನ್ನು ವಶಕ್ಕೆ ಪಡೆಯಲಾಗಿದೆ. ಇದುವರೆಗೆ ಒಟ್ಟು 28 ಕೋಟಿ ಹಣ ವಶಕ್ಕೆ ಪಡೆಯಲಾಗಿದೆ.

ರಾಜ್ಯದ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಸೇರಿದ ಒಟ್ಟು 187.33 ಕೋಟಿ ರೂಪಾಯಿ ಅನುದಾನದ ಹಣದಲ್ಲಿ 89 ಕೋಟಿ ರೂಪಾಯಿ ಅನುದಾನವನ್ನು ಹಿಂದೆ ಸಚಿವ ರಾಗಿದ್ದ ಬಿ.ನಾಗೇಂದ್ರ ಅವರು ಭಾಗಿಯಾಗಿದ್ದರು ಎನ್ನಲಾದ ಈ ಹಗರಣದಲ್ಲಿ ಸ್ವತಃ ಸಿಎಂ ಸಿದ್ದರಾಮಯ್ಯ ಅವರು 80% ಅನುದಾನವನ್ನು ದುರುಪಯೋಗ ಮಾಡಿಕೊಂಡಿದ್ದಾರೆ, ಈ ಪೈಕಿ ಶೇ.20 ರಷ್ಟು ವಾಲ್ಮೀಕಿ ನಿಗಮದ ಅನುದಾನ ಹಿಂದೆ ಸಚಿವರಾಗಿದ್ದ ಬಿ.ನಾಗೇಂದ್ರ ಅವರಿಗೆ ಹೋಗಿದೆ ಎಂದು ಬಿಜೆಪಿ ಆರೋಪಿಸಿದೆ.‌

ಈವರೆಗೆ ಒಟ್ಟು 50 ಕೋಟಿ ರೂ. ನಿಗಮದ ಹಣ ವಶ!
ಹೌದು, ಈವರೆಗೆ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬರೋಬ್ಬರಿ 50 ಕೋಟಿ ರೂಪಾಯಿ ಹಣವನ್ನು ಎಸ್ಐಟಿ ವಶಪಡಿಸಿಕೊಂಡಿದೆ. ಆದರೆ ವಾಲ್ಮೀಕಿ ನಿಗಮದ ಇನ್ನೂ 49 ಕೋಟಿ ರೂಪಾಯಿ ಹಣವನ್ನು ಎಸ್ಐಟಿ ವಶಪಡಿಸಿಕೊಳ್ಳಲು ತನಿಖೆ ಮುಂದುವರೆಸಿದೆ.

ಒಟ್ಟಾರೆ ವಾಲ್ಮೀಕಿ ನಿಗಮದ 89 ಕೋಟಿ ರೂಪಾಯಿ ಹಣವನ್ನು ಅಧಿಕಾರಿಗಳ ನೆರವಿನಿಂದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮೂಲಕ ಹಣ ದುರುಪಯೋಗ ಮಾಡಿಕೊಂಡ ಆರೋಪ ಬಗ್ಗೆ ಎಸ್ಐಟಿ ತನಿಖಾ ತಂಡಕ್ಕೆ ಖಚಿತ ಮಾಹಿತಿ ಸಿಕ್ಕಿದೆ. ಈ ಹಗರಣದಲ್ಲಿ ಈಗಾಗಲೇ ನಿಗಮದ ಅಧೀಕ್ಷಕ ಚಂದ್ರಶೇಖರನ್ ಆತ್ಮಹತ್ಯೆ ಮಾಡಿಕೊಂಡಿದ್ದರು.

ಈ ಹಗರಣದ ಸೂತ್ರದಾರ ಆಂಧ್ರಪ್ರದೇಶದ ಸೂರ್ಯನಾರಾಯಣ ರಾವ್ ಎಂದು ಬಿಜೆಪಿ ಆರೋಪಿಸಿ ಪ್ರತಿಭಟನೆ ನಡೆಸಿತ್ತು. ಅಲ್ಲದೆ ಹಗರಣದಲ್ಲಿ ಸ್ವತಃ ನಿಗಮದ MD ಪದ್ಮನಾಭ ಅವರೇ ಭಾಗಿಯಾಗಿ ಹಿಂದೆ ಸಚಿವರಾಗಿದ್ದ ಬಿ‌.ನಾಗೇಂದ್ರ ಅವರಿಗೆ ನೆರವಾಗಿ ಒಟ್ಟು 89 ಕೋಟಿ ರೂಪಾಯಿ ನಿಗಮದ ಅನುದಾನ ದುರುಪಯೋಗವಾಗಿದೆ.

ಈ ಹಗರಣದಲ್ಲಿ ಹಿಂದೆ ಸಚಿವರಾಗಿದ್ದ ಬಿ.ನಾಗೇಂದ್ರ ಅವರಿಗೆ ಶೇ.20 ರಷ್ಟು ಹಾಗೂ ಸಿಎಂ ಸಿದ್ದರಾಮಯ್ಯ ಅವರಿಗೆ ಶೇ.80 ರಷ್ಟು ನಿಗಮದ ಹಣ ಹೋಗಿದೆ ಎಂದು ಬಿಜೆಪಿ ಈಗಲೂ ಪ್ರತಿಭಟನೆ ಮುಂದುವರೆಸಿದೆ.

ಮೊದಲು ವಾಲ್ಮೀಕಿ ನಿಗಮದ ಅಧೀಕ್ಷಕರಾಗಿದ್ದ ಚಂದ್ರಶೇಖರನ್ ಅವರು ಆತ್ಮಹತ್ಯೆ ಮಾಡಿಕೊಂಡ ನಂತರ ನಿಗಮದ MD ಪದ್ಮನಾಭ ಅವರೇ ಹಗರಣದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿದ್ದಾರೆ. ಈ ಹಗರಣದಲ್ಲಿ ಇನ್ನೂ ಅನೇಕ ನಿಗಮದ ಅಧಿಕಾರಿಗಳು ಭಾಗಿಯಾದ ಆರೋಪಗಳನ್ನು ಎದುರಿಸುತ್ತಿದ್ದಾರೆ.


Share It

You cannot copy content of this page