ಕಾಶಿ ಯಾತ್ರೆಗೆ ರಾಜ್ಯದ ಸಹಾಯ ಧನ ಬಿಡುಗಡೆ! ಇಂದೇ ಅರ್ಜಿ ಸಲ್ಲಿಸಿ
ಬೆಂಗಳೂರು : ರಾಜ್ಯದಿಂದ ಕೈಲಾಸ ಮಾನಸ ಸರೋವರ ಹಾಗೂ ಚಾರ್ಧಾಮ್ ಯಾತ್ರೆಗೆ ಅನುದಾನ ನೀಡಲು ರಾಜ್ಯ ಸರ್ಕಾರ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಮುಜರಾಯಿ ಇಲಾಖೆಯು ಮಾನಸ ಸರೋವರ ಯಾತ್ರಾರ್ಥಿಗಳಿಗೆ ತಲಾ 30,000 ರೂ., ಚಾರ್ಧಾಮ್ (ಗಂಗೋತ್ರಿ ಯ-ಮುನೋತ್ರಿ, ಕೇದಾರನಾಥ, ಬದರಿನಾಥ) ಯಾತ್ರಾರ್ಥಿಗಳಿಗೆ 20,000 ರೂ. ಮತ್ತು ಕಾಶಿ ಯಾತ್ರಾರ್ಥಿಗಳಿಗೆ 30,000 ಯಾತ್ರಿಗಳಿಗೆ ತಲಾ 5,000 ರೂ.ಗಳನ್ನು ಪಾವತಿಸಲು ಸೂಚನೆ ನೀಡಿದೆ.
ಮುಜರಾಯಿ ಮತ್ತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿ, ಕರ್ನಾಟಕದ ಖಾಯಂ ನಿವಾಸಿಗಳು ಮಾತ್ರ ಈ ಆರ್ಥಿಕ ಸಹಾಯವನ್ನು ಪಡೆಯಲು ಅರ್ಹರಾಗಿರುತ್ತಾರೆ. ಯಾತ್ರೆಗೆ ಸರ್ಕಾರದ ಸಬ್ಸಿಡಿ ಸಿಗಬೇಕೆಂದರೆ, ಅವರು ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಸಂಬಂಧಿತ ವೆಬ್‌ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್ ಮೂಲಕ ರೂ 25 ಶುಲ್ಕವನ್ನು ಪಾವತಿಸಿ ಅರ್ಜಿ ಸಲ್ಲಿಸಬೇಕು.
ಚಾರ್ಧಾಮ್ ಯಾತ್ರೆಯ ಮಾರ್ಗಸೂಚಿಗಳು :
ಕರ್ನಾಟಕದ ಖಾಯಂ ನಿವಾಸಿಗಳಿಗೆ ಮಾತ್ರ
ಚುನಾವಣಾ ಗುರುತಿನ ಚೀಟಿ ಮತ್ತು ಆಧಾರ್ ಕಾರ್ಡ್‌ನ ಅಪ್‌ಲೋಡ್ ಮಾಡಬೇಕು.
ಈ ಯೋಜನೆಯಡಿಯಲ್ಲಿ 45 ವರ್ಷ ಮೇಲ್ಪಟ್ಟ ಯಾತ್ರಿಕರು ಮಾತ್ರ ಸಹಾಯಧನಕ್ಕೆ ಅರ್ಹರಾಗಿರುತ್ತಾರೆ.
45 ವರ್ಷ ಮೇಲ್ಪಟ್ಟ ಯಾತ್ರಿಕರು ವಯಸ್ಸಿಗೆ ಸಂಬಂಧಿಸಿದ ಸೂಕ್ತ ದಾಖಲೆಯನ್ನು ಅಪ್‌ಲೋಡ್ ಮಾಡಬೇಕು.
ಯಾತ್ರಾರ್ಥಿಗಳು ಒಮ್ಮೆ ಮಾತ್ರ ಅನುದಾನ ಪಡೆಯಬಹುದು.
ಕಾಶಿ ಯಾತ್ರೆ ಮಾರ್ಗಸೂಚಿಗಳು :
ಕರ್ನಾಟಕದ ಖಾಯಂ ನಿವಾಸಿಗಳು ಮಾತ್ರ ಈ ಆರ್ಥಿಕ ನೆರವು ಸೌಲಭ್ಯವನ್ನು ಪಡೆಯಲು ಅರ್ಹರಾಗಿರುತ್ತಾರೆ.
ಆಯಾ ಹಣಕಾಸು ವರ್ಷದ ಮೊದಲ ದಿನದಂದು ಅನ್ವಯವಾಗುವಂತೆ ಏಪ್ರಿಲ್ 1 ರಂದು ಕರ್ನಾಟಕ ರಾಜ್ಯದ ಅನ್ವಯ 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು.
18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. 18 ವರ್ಷ ಮೇಲ್ಪಟ್ಟ ಯಾತ್ರಾರ್ಥಿಗಳು ಸೂಕ್ತವಾದ ವಯಸ್ಸಿನ ಪುರಾವೆ ದಾಖಲೆಯನ್ನು ನೀಡಬೇಕು.
ಒಮ್ಮೆ ಯಾತ್ರಾರ್ಥಿಗಳು ಸಬ್ಸಿಡಿಯನ್ನು ಪಡೆದರೆ, ಅದೇ ವ್ಯಕ್ತಿಯನ್ನು ಎರಡನೇ ಅನುದಾನಕ್ಕೆ ಪರಿಗಣಿಸಲಾಗುವುದಿಲ್ಲ.
ಮಾರ್ಗಸೂಚಿಗಳನ್ನು ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟ ಮಾಡಲಾಗುವುದು.


