ನಿಟ್ ಪರೀಕ್ಷೆ ವಿಚಾರವಾಗಿ ಎನ್ ಡಿ ಎ ನೇತೃತ್ವದ ಸರ್ಕಾರ ದುರಾಡಳಿತ ನಡೆಸಿದೆ:ಡಿಸಿಎಂ ಡಿಕೆ ಶಿವಕುಮಾರ್
ಬೆಂಗಳೂರು :ಪಕ್ಷ ಸಂಘಟನೆ ಪಕ್ಷದ ಬಲವರ್ಧನೆ ಹಿನ್ನಲೆಯಲ್ಲಿ ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನದಲ್ಲಿ ಇಂದು ಕೆಪಿಸಿಸಿ ರಾಜ್ಯ ಪದಾಧಿಕಾರಿಗಳ ಸಭೆಯನ್ನು ಕೆಪಿಸಿಸಿ ರಾಜ್ಯಾಧ್ಯಕ್ಷರು ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಏರ್ಪಡಿಸಲಾಗಿತ್ತು.
ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ ಅವರು ದೇಶದಲ್ಲಿ ಬಿಜೆಪಿ ಸರ್ಕಾರ ದುರಾಡಳಿತವನ್ನು ನಡೆಸುತ್ತಿದೆ ಇತ್ತೀಚಿಗೆ ಬೆಳಕಿಗೆ ಬಂದಂತಹ ನೆಟ್ ಪರೀಕ್ಷೆ ಪ್ರಕರಣ ಕೇಂದ್ರ ಸರ್ಕಾರಕ್ಕೆ ಬಹಳ ಮುಜುಗರ ತಂದಿದೆ ಅಲ್ಲದೆ ಇತ್ತೀಚಿನ ಸಂಸತ್ ನಲ್ಲಿ ನಮ್ಮ ನಾಯಕರಾದ ರಾಹುಲ್ ಗಾಂಧಿಯವರು ನಿಟ್ ಪರೀಕ್ಷೆ ಬಗ್ಗೆ ಮಾತನಾಡುವ ವೇಳೆ ಅವರ ಮೈಕ್ ಅನ್ನು ಆಫ್ ಮಾಡಿ ತೀವ್ರವಾದ ಚರ್ಚೆಗೆ ಗುರಿಯಾಗಿದ್ದರೂ. ಇಲ್ಲಿ ನಾವು ನೋಡಬಹುದು ಅವರ ಆಲೋಚನೆಗಳು ಯಾವ ಮಟ್ಟಿಗೆ ಎದೆ ಎಂದು ಅಲ್ಲದೆ ಕೇಂದ್ರ ಸರ್ಕಾರ ಶಿಕ್ಷಣಕ್ಕೆ ಯಾವುದೇ ಮಹತ್ವವನ್ನು ಕೊಡುತ್ತಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದರು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಂದುಕೊಂಡಂತೆ ತನ್ನ ಗುರಿಯನ್ನು ತಲುಪಿದೆ ಅಲ್ಲದೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಮ್ಮ ಸಂಸದರಿಗೆ ಬೆನ್ನೆಲುಬಾಗಿ ನಿಂತಿದ್ದ ಕಾರ್ಯಕರ್ತರಿಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ ನಿಮ್ಮ ಸಹಕಾರ ನಮಗೆ ಬಹಳ ಮುಖ್ಯವಾಗಿತ್ತು ಎಂದರು.
ಈ ವೇಳೆ ಕಾರ್ಯಾಧ್ಯಕ್ಷರಾದ ಡಾ ಜಿ ಸಿ ಚಂದ್ರಶೇಖರ್, ವಿನಯ್ ಕುಲಕರ್ಣಿ, ವಸಂತಕುಮಾರ್, ಖಜಾಂಚಿ ವಿನಯ್ ಕಾರ್ತಿಕ್ ಮತ್ತಿತರರು ಭಾಗವಹಿಸಿದ್ದರು.


