Happy tips: ವಯಸ್ಸಾದ ಮೇಲೆ ಖುಷಿಯಾಗಿರಬೇಕಾ? ಆಗಿದ್ರೆ ಈ ಅಭ್ಯಾಸಗಳಿಂದ ದೂರ ಇರಿ
ವಯಸ್ಸು ಕಳೆದಂತೆ ಬದುಕಿನ ಪ್ರತಿ ಕ್ಷಣವನ್ನು ಅನುಭವಿಸಬೇಕು. ಸಂತೋಷದಿಂದ ಕಾಲ ಕಳೆಯಬೇಕು. ನೀವು ಖುಷಿಯಾಗಿರಬೇಕು ಎಂದ್ರೆ ಕೆಲವು ಕೆಟ್ಟ ಅಭ್ಯಾಸಗಳನ್ನ ಕೈ ಬಿಡಬೇಕು. ಆ ಅಭ್ಯಾಸಗಳು ಯಾವುವು ಎಂದು ನೋಡೋಣ ಬನ್ನಿ.
ಹ್ಯಾಕ್ ಸ್ಪಿರಿಟ್‌ನ ಸಂಸ್ಥಾಪಕರಾದ ಲಾಚ್ಲಾನ್ ಬ್ರೌನ್ ಅವರು ವಯಸ್ಸಾಗುತ್ತ ಹೋದಂತೆ ಸಂತೋಷದ ಜೀವನ ನಡೆಸಬೇಕೆಂದರೆ ಈ ಅಭ್ಯಾಸಗಳಿಗೆ ಗುಡ್ ಬೈ ಹೇಳಿ ಎಂದು ಹೇಳುತ್ತಾರೆ.
- ಕಳೆದ ದಿನಗಳ ನೆನಪಲ್ಲಿ ಕಾಲ ಕಳೆಯುವುದು.
ಬಹಳ ಮಂದಿ ಈ ತಪ್ಪನ್ನು ಮಾಡುತ್ತಾರೆ. ತಮ್ಮ ಉತ್ತುಂಗದ ಕಾಲವನ್ನು ನೆನೆದು ಪ್ರಸ್ತುತದೊಂದಿಗೆ ಹೋಲಿಸಿಕೊಂಡು ಕೊರಗುತ್ತಾರೆ. ಕಳೆದ ದಿನಗಳ ನೆನಪಿನಲ್ಲಿ ಇರುವುದನ್ನು ಬಿಟ್ಟು ಪ್ರಸ್ತುತಕ್ಕೆ ಹೊಂದಿಕೊಳ್ಳಬೇಕು.
- ಸ್ವ ಆರೈಕೆಗೆ ಗಮನ ಕೊಡಿ.
ವಯಸ್ಸಾದ ಮೇಲೆ ನಿಮ್ಮ ಆರೋಗ್ಯವನ್ನು ನೀವೇ ನೋಡಿಕೊಳ್ಳುವುದು ಉತ್ತಮ. ಉತ್ತಮ ಆಹಾರ ಸೇವನೆ, ಸಾಕಾಗುವಷ್ಟು ನಿದ್ದೆ ಮಾಡುವುದು, ಮಾನಸಿಕವಾಗಿ ಸದೃಢವಾಗಿರುವುದು ಇವೆಲ್ಲವೂ ತಾನಾಗಿ ತಾನೇ ರೂಢಿಸಿಕೊಳ್ಳಬೇಕು.
- ಭೌತಿಕ ಆಸ್ತಿಗೆ ಗಮನ ಕೊಡಬೇಡಿ.
ಆನಂದ ಎಂಬುದು ನಾವು ಕೂಡಿಟ್ಟ ಹಣದಿಂದ , ಖರೀದಿ ಮಾಡಿದ ಮನೆಯಿಂದ ಬರುವುದಿಲ್ಲ. ಸಂಬಂಧಗಳಿಂದ ನೆರೆ ಹೊರೆಯವರಿಂದ ಸಂತೋಷ್ ಸಿಗುತ್ತದೆ. ಎಲ್ಲರೊಂದಿಗೆ ಸಂತೋಷದಿಂದ ಕಾಲ ಕಳೆಯಿರಿ.
- ಅಹಂಕಾರ ಬಿಡುವುದು
ನಾವು ನಮ್ಮ ಅಹಂಕಾರ ಬಿಟ್ಟರೆ ಎಲ್ಲರೂ ನಮ್ಮ ಬಳಿ ಧನಾತ್ಮಕವಾಗಿ ವರ್ತಿಸುತ್ತಾರೆ. ಇದರಿಂದ ನಮ್ಮ ಆರೋಗ್ಯಕ್ಕೂ ಒಳ್ಳೆಯದಾಗುತ್ತದೆ. ವಯಸ್ಸಾದಂತೆ ಅಹಂಕಾರ ಹೆಚ್ಚಾದರೂ ಅದನ್ನು ಹಿತಮಿತ ಇಟ್ಟುಕೊಳ್ಳಬೇಕು.
- ದ್ವೇಷ ಸಾಧಿಸುವುದು.
ಮನುಷ್ಯನ ರಕ್ತಗತ ಗುಣಗಳಲ್ಲಿ ಇದು ಒಂದು. ನೀವು ಹಳೆಯ ದ್ವೇಷವನ್ನು ಇಟ್ಟುಕೊಂಡಿದ್ದರೆ ಅದನ್ನು ಮರೆತು ಬಿಡಿ. ಸಾದ್ಯವಾದರೆ ಅವರೊಂದಿಗೆ ಎರಡು ಮಾತನಾಡಿ. ಕ್ಷಮಿಸುವ ಗುಣವನ್ನು ಹೊಂದಬೇಕು. ಆಗ ಸಂತೋಷ ತಾನಾಗಿಯೇ ಬರುತ್ತದೆ.


