ಬಾಣಸವಾಡಿಯಲ್ಲಿ ಹೊಸ ಎಕ್ಸ್ ಪೀರಿಯನ್ಸ್ ಸೆಂಟರ್ ಉದ್ಘಾಟಿಸಿದ ರೆಸ್ಟೊಲೆಕ್ಸ್

Share It

ಬೆಂಗಳೂರು: ಸ್ಪ್ರಿಂಗ್, ಕಾಯಿರ್ ಮತ್ತು ಫೋಮ್‌ನಾದ್ಯಂತ ಗುಣಮಟ್ಟದ ಹಾಸಿಗೆಗಳ ಶ್ರೇಣಿಗೆ ಹೆಸರುವಾಸಿಯಾಗಿರುವ ಹಾಸಿಗೆ ಕಂಪನಿ ರೆಸ್ಟೊಲೆಕ್ಸ್ ಇಂದು ಬೆಂಗಳೂರಿನ ಬಾಣಸವಾಡಿಯಲ್ಲಿ ತನ್ನ ಏಳನೇ ಎಕ್ಸ್ ಪೀರಿಯನ್ಸ್ ಸೆಂಟರ್ ಅನ್ನು ಉದ್ಘಾಟಿಸಿತು.

ಪ್ರತೀ ಗ್ರಾಹಕರು ಉತ್ಪನ್ನಗಳನ್ನು ನೋಡಿ ವಿವೇಚಯುಕ್ತ ನಿರ್ಧಾರ ತೆಗೆದುಕೊಳ್ಳಲು ನೆರವಾಗಲು ಈ ಎಕ್ಸ್ ಪೀರಿಯನ್ಸ್ ಸೆಂಟರ್ ಅನ್ನು ವೈಜ್ಞಾನಿಕವಾಗಿ ವಿನ್ಯಾಸಗೊಳಿಸಲಾಗಿದೆ. ಈ ಎಕ್ಸ್ ಪೀರಿಯನ್ಸ್ ಸೆಂಟರ್ ನಲ್ಲಿ ರೆಸ್ಟೊಲೆಕ್ಸ್ ನ ಎಲ್ಲಾ ಉತ್ಪನ್ನಗಳನ್ನು ಪ್ರದರ್ಶಿಸಲಾಗುತ್ತದೆ. ಅದರ ಜೊತೆಗೆ ಬೆಲೆ ಮತ್ತು ಸರ್ವೀಸ್ ಕುರಿತಾದ ಆಫರ್ ಗಳನ್ನು ಒದಗಿಸಲಾಗುತ್ತದೆ.

1750 ಚದರ ಅಡಿ ವಿಸ್ತೀರ್ಣದ ಈ ಎಕ್ಸ್ ಪೀರಿಯನ್ಸ್ ಸೆಂಟರ್ ಅನ್ನು ರೆಸ್ಟೊಲೆಕ್ಸ್‌ ನ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಕುರುವಿಲ್ಲ, ನಿರ್ದೇಶಕ ದವೀದ್ ಕುರುವಿಲ್ಲ, ರೆಸ್ಟೊಲೆಕ್ಸ್‌ ನ ಸಿಇಓ ಸುರೇಶ್ ಬಾಬು ಮತ್ತು ರೆಸ್ಟೊಲೆಕ್ಸ್‌ ನ ಮಾರ್ಕೆಟಿಂಗ್ ಹೆಡ್ ಸೋನಾಕ್ಷಿ ದವೀದ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ದವೀದ್ ಕುರುವಿಲ್ಲಾ, “ಕಳೆದ 40 ವರ್ಷಗಳಿಂದ ರೆಸ್ಟೊಲೆಕ್ಸ್ ಗ್ರಾಹಕ ಸ್ನೇಹಿ ನಿರ್ಧಾರಗಳನ್ನು ಕೈಗೊಳ್ಳುತ್ತಾ ಬಂದಿದೆ. ಈ ಹೊಸ ಎಕ್ಸ್ ಪೀರಿಯನ್ಸ್ ಸೆಂಟರ್ ಸೇರ್ಪಡೆಯು ನಮ್ಮ ಪಾಲುದಾರರ ಜೊತೆಗಿನ ಬದ್ಧತೆಯನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ” ಎಂದು ಹೇಳಿದರು.

ರೆಸ್ಟೊಲೆಕ್ಸ್‌ ನ ಸಿಇಓ ಸುರೇಶ್ ಬಾಬು, “ಉತ್ತಮ ಹಾಸಿಗೆಗಾಗಿ ಹೆಚ್ಚುತ್ತಿರುವ ಗ್ರಾಹಕರ ಬೇಡಿಕೆಯನ್ನು ಪೂರೈಸಲು ನಾವು ನಮ್ಮ ಉಪಸ್ಥಿತಿಯನ್ನು ಹೆಚ್ಚು ಸ್ಥಳಗಳಿಗೆ ವಿಸ್ತರಿಸುತ್ತಿದ್ದೇವೆ. ನಮ್ಮ ಉತ್ಪನ್ನಗಳು ಎಲ್ಲಾ ಕಡೆ ಲಭ್ಯವಿರುವಂತೆ ನೋಡಿಕೊಳ್ಳುತ್ತಿದ್ದೇವೆ. ಆನ್ ಲೈನ್ ಖರೀದಿ ಹೆಚ್ಚಾಗಿರುವುದನ್ನು ಗಮನಿಸಿ, ನಮ್ಮ ಇ ಕಾಮರ್ಸ್ ವಿಭಾಗ ಮತ್ತು ಪೂರೈಕೆ ವಿಭಾಗವನ್ನು ಗಟ್ಟಿಗೊಳಿಸಿದ್ದೇವೆ” ಎಂದು ಹೇಳಿದರು.

ರೆಸ್ಟೊಲೆಕ್ಸ್ ಗ್ರಾಹಕರ ಅಗತ್ಯಗಳಿಗೆ ತಕ್ಕಂತೆ 10 ವಿಭಾಗಗಳಲ್ಲಿ 28 ವೇರಿಯಂಟ್ ಗಳ ಹಾಸಿಗೆಗಳನ್ನು ಅಭಿವೃದ್ಧಿಪಡಿಸಿದೆ.


Share It

You May Have Missed

You cannot copy content of this page