ಮುಂಬಯಿ: ಇದೇ ಜುಲೈ 6 ರಿಂದ ಶುರುವಾಗುತ್ತಿರುವ ಭಾರತ, ಜಿಂಬಾಂಬೆ ನಡುವಿನ 5 T20 ಪಂದ್ಯಗಳನ್ನು ಶುಭನ್ ಗಿಲ್ ನಾಯಕತ್ವದಲ್ಲಿ ಮುನ್ನಡೆಸಲಿದ್ದಾರೆ. ಈಗ ತಂಡದಲ್ಲಿ 3 ಬದಲಾವಣೆಯನ್ನು ಮಾಡಲಾಗಿದೆ.
T20 ವಿಶ್ವ ಕಪ್ ನ ಬೆನ್ನಲ್ಲೇ ಭಾರತ ಸದ್ಯಕ್ಕೆ ತವರಿಗೆ ಇನ್ನು ಮರಳಲು ಸಾಧ್ಯವಾಗಿಲ್ಲ. ಆದ್ದರಿಂದ ತಂಡದಲ್ಲಿ ಇದ್ದ ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್, ಹಾಗೂ ಶಿವಂ ದುಬೆ ರವರ ಬದಲಿಗೆ ಜಿತೇಶ್ ಶರ್ಮಾ, ಸಾಯಿ ಸುದರ್ಶನ್ ಹಾಗೂ ಹರ್ಷಿತ್ ರಾಣ ರವರನ್ನು ಮೊದಲ ಎರಡು ಪಂದ್ಯಗಳಿಗೆ ಆಯ್ಕೆ ಮಾಡಿದೆ.
ಈ ಮೂವರು ಆಟಗಾರರು ಈ ಬಾರಿಯ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಹರ್ಷಿತ್ ರಾಣ ಉತ್ತಮ ಬೌಲಿಂಗ್ ಮಾಡಿ 19 ವಿಕೆಟ್ ಪಡೆದಿದ್ದಾರೆ. ಇದೇ ಮೊದಲ ಬಾರಿಗೆ ಅಂತರಾಷ್ಟ್ರೀಯ T20 ಪಂದ್ಯಗಳನ್ನು ಅಭಿಷೇಕ್ ಶರ್ಮಾ, ರಿಯಾನ್ ಪರಾಗ್ ಹಾಗು ನಿತೀಶ್ ರೆಡ್ಡಿಯ ಮೊದಲ ಪಂದ್ಯವಾಗಲಿದೆ. ರಿಯಾನ್ ಅಸ್ಸಾಂ ನಿಂದ ಪ್ರತಿನಿಧಿಸಿದ ಮೊದಲ ಕ್ರಿಕೆಟಿಗ ಎಂಬ ಹೆಮ್ಮೆ ಪಡೆದಿದ್ದಾರೆ.
ಪಂದ್ಯದ ಸಮಯ
1ನೇ ಟಿ20: ಜುಲೈ 6, ಹರಾರೆ, ಸಂಜೆ 4.30
2ನೇ ಟಿ20: ಜುಲೈ 7, ಹರಾರೆ, ಸಂಜೆ 4.30
3ನೇ T20: ಜುಲೈ 10, ಹರಾರೆ, ಸಂಜೆ 4.30
4ನೇ T20: ಜುಲೈ 13, ಹರಾರೆ, ಸಂಜೆ 4.30
5 ನೇ T20: ಜುಲೈ 14, ಹರಾರೆ, ಸಂಜೆ 4.30