ಬೆಂಗಳೂರು : ಚಿಕ್ಕಣ್ಣ ಹಾಗೂ ಸಂಘಟಿಕರ ಸಿನಿಮಾ ವಾದ ಫಾರೆಸ್ಟ್ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ.
ಚಿತ್ರದಲ್ಲಿ ಹೆಚ್ಚು ಭಾಗ ಕಾಡಿನಲ್ಲಿಯೇ ಸುತ್ತುತ್ತದೆ. ಆದ್ದರಿಂದ ಚಿತ್ರಕ್ಕೆ ಫಾರೆಸ್ಟ್ ಎಂದು ಟೈಟಲ್ ಕೊಡಲಾಗಿದೆ. ಓಡೋ, ಓಡೋ ಎಂದು ಈ ಹಾಡು ಆರಂಭವಾಗುತ್ತದೆ. ಈ ಹಾಡಿಗೆ ಪುನೀತ್ ಆರ್ಯ ಲಿರಿಕ್ಸ್ ಬರೆದಿದ್ದಾರೆ. ಹಾಗೆ ಕೈಲಾಸ್ ಖೇರ್ ಹಾಗೂ ಹರ್ಷ ಉಪ್ಪಾರ್ ಈ ಹಾಡಿಗೆ ಧ್ವನಿಯಾಗಿದ್ದಾರೆ. ಸಂಗೀತವನ್ನು ಧರ್ಮ ವಿಶ್ ಒದಗಿಸಿದ್ದಾರೆ. ಈ ಮೊದಲ ಹಾಡಿನಲ್ಲಿ ಚಿಕ್ಕಣ್ಣನ ಜೊತೆ ರಂಗಾಯಣ ರಘು, ಫಸ್ಟ್ ರಾಂಕ್ ರಾಜು, ಅನೀಶ್ ತೇಜೇಶ್ವರ್ ಹಾಗೂ ಅರ್ಚನಾ ಕೊಟ್ಟಿಗೆ ಅಭಿನಯಿಸಿದ್ದಾರೆ.
ಈಗಾಗಲೇ ಬಾಂಬೆ ಮಿಠಾಯಿ, ಬ್ರಹ್ಮಚಾರಿ ಮತ್ತು ಡಬಲ್ ಇಂಜಿನ್ ಎಂಬ ಚಿತ್ರಗಳನ್ನು ನಿರ್ದೇಶನ ಮಾಡಿರುವ ಚಂದ್ರ ಮೋಹನ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಅವಿನಾಶ್,ಅರ್ಚನಾ ಕೊಟ್ಟಿಗೆ ಪ್ರಕಾಶ್ ತುಮ್ಮಿನಾಡ್ ಶರಣ್ಯ ಶೆಟ್ಟಿ, ಅರ್ಚನಾ ಕೊಟ್ಟಿಗೆ, ದೀಪಕ್ ರೈ ಪಾಣಾಜೆ, ಸೂರಜ್ ಪಾಪ್ಸ್ ಸುನಿಲ್ ಕುಮಾರ್ ತಾರಾ ಗ್ರಹಣದಲ್ಲಿ ಇದ್ದಾರೆ.
ಫಾರೆಸ್ಟ್ ಸಿನಿಮಾವು ಎನ್ ಎಂ ಕೆ ಸಿನಿಮಾಸ್ ಬ್ಯಾನರ್ ಅಡಿ ನಿರ್ಮಾಣವಾಗುತ್ತಿದ್ದು ಇದೊಂದು ಅಡ್ವೆಂಚರಸ್ ಸಿನೆಮಾ ವಾಗಿದೆ. ಕಾಂತರಾಜು ಈ ಸಿನಿಮಾಕ್ಕೆ ಬಂಡವಾಲ ಹೂಡಿದ್ದಾರೆ. ರವಿಕುಮಾರ್ ಛಾಯಾಗ್ರಹಣ, ಸಂಕಲನ ಅರ್ಜುನ್ ಕಿಟ್ಟು, ಧರ್ಮ ವೀರ್ ಸಂಗೀತವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಒಂದಷ್ಟು ಚಿತ್ರೀಕರಣ ಮುಗಿದಿದ್ದು , ಉಳಿದ ಭಾಗವನ್ನು ಚಿಕ್ಕಮಗಳೂರು, ಬೆಂಗಳೂರು, ಮಡಿಕೇರಿ ಯಲ್ಲಿ ಚಿತ್ರೀಕರಣ ಮಾಡುತ್ತಿದೆ. ಆಗಸ್ಟ್ ನಲ್ಲಿ ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆ.