ನೀವು ಗೋಲ್ಡ್ ಫೇಷಿಯಸ್ ಅನ್ನು ಬಳಕೆ ಮಾಡುತ್ತೀರಾ . ನಿಮ್ಮ ಮನೆಯಲ್ಲಿಯೇ ಸಿಗುವ ವಸ್ತುಗಳಿಂದ ಗೋಲ್ಡ್ ಫೇಷಿಯಸ್ ಅನ್ನು ತಯಾರಿ ಮಾಡಿಕೊಳ್ಳಬಹುದು. ತಯಾರಿ ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ ಬನ್ನಿ.
ಫೇಷಿಯಸ್ ಗಳು ನಮ್ಮ ತ್ವಚೆಯನ್ನು ಕಾಂತಿಯುಕ್ತ ಮಾಡುತ್ತವೆ. ಬ್ಯೂಟಿ ಪಾರ್ಲರ್ ಗಳಲ್ಲಿ ಹೆಚ್ಚು ಹಣವನ್ನು ಕೊಟ್ಟು ಮಸಾಜ್ ಮಾಡಿಸಿಕೊಳ್ಳಬೇಕು. ಇದನ್ನು ಮುಖಕ್ಕೆ ಹಚ್ಚುವುದರಿಂದ ಮೊಡವೆಗಳು ಹಾಗೂ ಕಲೆಗಳು ಮಾಯವಾಗುತ್ತವೆ. ಮನೆಯಲ್ಲಿ ತಯಾರಿಸಿದರೆ ಕೆಮಿಕಲ್ ನಿಂದ ದೂರ ಇರಬಹುದು.
ಮೊದಲನೆಯದಾಗಿ ಒಂದು ಬಟ್ಟಲಲ್ಲಿ 4 ಚಮಚ ದಷ್ಟು ಹಸಿ ಹಾಲನ್ನು ತೆಗೆದುಕೊಳ್ಳಿ. ಹತ್ತಿಯಿಂದ ಮುಖಕ್ಕೆ ಚೆನ್ನಾಗಿ ಮಸಾಜ್ ಮಾಡಿ. ಬಳಿಕ ಮುಖವನ್ನು ನೀರಿನಿಂದ ಸ್ವಚ್ಛಗೊಳಿಸಿ. ಬಳಿಕ ಮುಖಕ್ಕೆ 2 ನಿಮಿಷಗಳ ಕಾಲ ಸ್ಟ್ರೀಮ್ ಕೊಡಿ. ಬಳಿಕ ಮುಖವನ್ನು ಬಟ್ಟೆಯಿಂದ ಒರೆಸಿ.
ಒಂದು ಬಟ್ಟಲಿಗೆ ಸಕ್ಕರೆ ಯನ್ನು ಹಾಕಿ ಅದಕ್ಕೆ ನಿಂಬೆಯ ರಸವನ್ನು ಹಾಗೂ ಜೇನು ತುಪ್ಪವನ್ನು ಸೇರಿಸಿ ಪೇಸ್ಟ್ ತಯಾರಿಸಿ. ಬಳಿಕ ಮುಖಕ್ಕೆ ಲೇಪನ ಮಾಡಿ ತಣ್ಣನೆಯ ನೀರಿಂದ ಮುಖ ತೊಳೆಯಿರಿ.
ಒಂದು ಬಟ್ಟಲಿಗೆ ಕಾಲು ಚಮಚ ದಷ್ಟು ಅರಿಶಿನವನ್ನು ಹಾಕಿ. ಕಡಲೇ ಹಿಟ್ಟು ಜೊತೆಗೆ 2 ಚಮಚ ಹಾಲನ್ನು ಹಾಕಿ. ರೋಸ್ ವಾಟರ್ 1 ಚಮಚ ಹಾಗೂ ಜೇನು ತುಪ್ಪ 1 ಚಮಚ ಸೇರಿಸಿ. ಮಿಶ್ರಣ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ . 10 ನಿಮಿಷದ ಬಳಿಕ ಮುಖವನ್ನು ಸ್ವಚ್ಚಗೊಳಿಸಿ. ನಿಮ್ಮ ಮುಖ ಗ್ಲೋ ಆಗಿ ಕಾಣುತ್ತದೆ. ಇದರಿಂದ ಹಣವನ್ನು ಉಳಿತಾಯ ಮಾಡಬಹುದು.