ಉಪಯುಕ್ತ ಸುದ್ದಿ

ಇಂದು ಕರಾವಳಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ!

Share It

ಬೆಂಗಳೂರು: ಮುಂದಿನ 4 ದಿನಗಳ ಕಾಲ ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಧಾರವಾಡ, ಹಾವೇರಿ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗದಲ್ಲಿ ಭಾರಿ ಮಳೆಯಾಗಲಿದೆ.

ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಹಾಸನ, ದಾವಣಗೆರೆ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರದಲ್ಲೂ ಮಳೆಯಾಗಲಿದೆ. ಕೊಲ್ಲೂರು, ಸಿದ್ದಾಪುರ, ಕೊಟ್ಟಿಗೆಹಾರ, ಕೋಟ, ಆಗುಂಬೆ, ಧರ್ಮಸ್ಥಳ, ಉಡುಪಿ, ಲಿಂಗನಮಕ್ಕಿಯಲ್ಲಿ ಹೆಚ್ಚು ಮಳೆಯಾಗಿದೆ.

ಭಾಗಮಂಡಲ, ಉಪ್ಪಿನಂಗಡಿ, ಕದ್ರಾ, ಸಿದ್ದಾಪುರ, ಮಂಗಳೂರು, ಶಿರಾಲಿ, ಕುಂದಾಪುರ, ಮಾಣಿ, ಕಾರ್ಕಳ, ನಾಪೊಕ್ಲು, ಪೊನ್ನಂಪೇಟೆ, ಗೇರುಸೊಪ್ಪ, ಬೆಳ್ತಂಗಡಿ, ಮಂಕಿ, ಪುತ್ತೂರು, ಕಿರವತ್ತಿ, ಯಲ್ಲಾಪುರ, ಕಮ್ಮರಡಿ, ಕಳಸ, ಹುಂಚದಕಟ್ಟೆ, ಕೊಪ್ಪ, ಶೃಂಗೇರಿ, ತಾಳಗುಪ್ಪ, ಮೂರ್ನಾಡು, ಗೋಕರ್ಣ, ಬನವಾಸಿ, ಅಂಕೋಲಾ, ಹೊನ್ನಾವರದಲ್ಲಿ ಮಳೆಯಾಗಿದೆ.

ಶಿಗ್ಗಾಂವ್, ಸವಣೂರು, ಜಯಪುರ, ಸೋಮವಾರಪೇಟೆ, ಗೌರಿಬಿದನೂರು, ಬಂಡೀಪುರ, ಅರಕಲಗೂಡು, ಕುಶಾಲನಗರ, ಕುಮಟಾ, ಮುಲ್ಕಿ, ಹಳಿಯಾಳ, ಹಿರೇಕೆರೂರು, ಸುಳ್ಯ, ಹಗರಿಬೊಮ್ಮನಹಳ್ಳಿ, ಹಾರಂಗಿ, ಕೊಟ್ಟೂರು, ಎನ್​ಆರ್​ಪುರ, ಚಿತ್ರದುರ್ಗ, ಮಾಗಡಿಯಲ್ಲಿ ಮಳೆಯಾಗಿದೆ.

ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ವಿರಲಿದ್ದು, ತುಂತುರು ಮಳೆಯಾಗುವ ನಿರೀಕ್ಷೆ ಇದೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಕೊನೆಗೂ ಮುಂಗಾರು ಮಳೆ-ರೈತರು ಹರ್ಷ ಹೌದು, ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ, ಹೊಸದುರ್ಗ, ಚಿತ್ರದುರ್ಗ, ಚಳ್ಳಕೆರೆ, ಮೊಳಕಾಲ್ಮೂರು ತಾಲ್ಲೂಕುಗಳಲ್ಲಿ ಈ ಬಾರಿ ಮುಂಗಾರು ಮಳೆ ಸಕಾಲಕ್ಕೆ ಬರದೆ ಬಿತ್ತಿದ್ದ ಬೀಜಗಳು ಒಣಗಲು ಆರಂಭಿಸಿದ್ದವು.

ಆದರೆ ಬಿತ್ತಿದ್ದ ಬೀಜ ಒಣಗಲು ಈ ಬಾರಿ ಮುಂಗಾರು ಮಳೆ ಅವಕಾಶ ಕೊಡದೆ ಕಡೆಗೂ ರೈತರಿಗೆ ನಿಟ್ಟುಸಿರು ಬಿಡುವಂತೆ ಆಗಿದೆ. ಇದರಿಂದ ಹೊಳಲ್ಕೆರೆ, ಹೊಸದುರ್ಗ, ಚಿತ್ರದುರ್ಗ, ಚಳ್ಳಕೆರೆ, ಮೊಳಕಾಲ್ಮೂರು ತಾಲ್ಲೂಕುಗಳಲ್ಲಿ ರೈತರು ಈಗ ಕುಂಟೆ ಹೊಡೆಯಲು ಪ್ರಾರಂಭಿಸಿದ್ದಾರೆ.


Share It

You cannot copy content of this page