ಕಳೆದ ಹತ್ತು ವರ್ಷದಲ್ಲಿ ಬಡತನ ಪ್ರಮಾಣ ಗಣನೀಯ ಇಳಿಕೆ
ನವದೆಹಲಿ: ಭಾರತದಲ್ಲಿ ಬಡವರ ಸಂಖ್ಯೆ ಶೇ. 8.5 ರಷ್ಟು ಗಣೀಯವಾಗಿ ಕಡಿಮೆಯಾಗಿದೆ ಎಂದು ರಾಷ್ಟೀಯ ಅನ್ವಯಿಕ ಆರ್ಥಿಕ ಸಂಶೋಧನಾ ಮಂಡಳಿ ತನ್ನ ವರದಿಯಲ್ಲಿ ತಿಳಿಸಿದೆ.
ಈ ಹಿಂದೆ ಅಂದರೆ 2011 ಮತ್ತು 2012 ನೆಯ ಬಡತನ ಶೇ. 21 ರಷ್ಟು ಇತ್ತು. ಇದು ಈಗ ಶೇ. 8.5 ಕ್ಕೆ ಇಳಿಕೆಯಾಗಿದೆ. ಆದರೆ ಸ್ವಲ್ಪ ಏರು ಪೇರು ಆದರೂ ಮತ್ತೆ ಬಡವರ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ.
ವರದಿಯ ಪ್ರಮುಖ ಅಂಶಗಳು
2011 ರ ವರದಿಯ ಅನ್ವಯ ಗ್ರಾಮೀಣ ಭಾಗದ ಬಡವರ ಸಂಖ್ಯೆ ಶೇಕಡಾ 24.8 ರಷ್ಟು ಇತ್ತು. ಸದ್ಯ 8.6 ಕ್ಕೆ ಇಳಿಕೆಯಾಗಿದೆ.
ನಗರ ಪ್ರದೇಶದಲ್ಲಿ ಕಳೆದ ಬಾರಿ ಬಡತನ ಶೇ. 21 ರಷ್ಟು ಇತ್ತು. ಈಗ 8.5 ಕ್ಕೆ ಇಳಿಕೆಯಾಗಿದೆ.
ಬಡತನದ ಕಡಿಮೆಯಾಗಲು ಮುಖ್ಯ ಕಾರಣ ಸರ್ಕಾರಗಳ ಆಹಾರ ಸಬ್ಸಿಡಿ ಹಾಗೂ ಸಹಾಯ ಕಾರಣ.
ಸಾಮಜಿಕ ಭದ್ರತೆಗೆ ಸರ್ಕಾರ ಒತ್ತು ನೀಡಬೇಕು. ಇಲ್ಲದಿದ್ದರೆ ಮತ್ತೆ ಬಡತನ ಹೆಚ್ಚುವ ಸಾಧ್ಯತೆ ಇದೆ.
ನಂದನ್ ನಿಲೇಕಣಿ ಈ ಸಮಿತಿಯ ಅಧ್ಯಕ್ಷರು. ತೆಂಡೂಲ್ಕರ್ ಸಮಿತಿಯ ಮಾನದಂಡವನ್ನು ಈ ವರದಿಯಲ್ಲಿ ಅಳವಡಿಸಿಕೊಳ್ಳಲಾಗಿದೆ.