ಬೆಂಗಳೂರು: ಟೀಮ್ ಇಂಡಿಯಾ ಟಿ 20 ವಿಶ್ವ ಕಪ್ ಗೆದ್ದ ಬೆನ್ನಲ್ಲೇ ಟೀಮ್ ಇಂಡಿಯಾದ ಹೆಡ್ ಕೋಚ್ ಹುದ್ದೆಕೆ ಕನ್ನಡಿಗ ರಾಹುಲ್ ದ್ರಾವಿಡ್ ವಿದಾಯ ಹೇಳಿದ್ದಾರೆ. ಇದರಿಂದ ಭಾರತೀಯ ತಂಡಕ್ಕೆ ಹೊಸ ಹೆಡ್ ಕೋಚ್ ಹುದ್ದೆಗೆ ಬಿಸಿಸಿಐ ನ ಸೆಕ್ರೆಟರಿ ಜಯ ಶಾ ಇಬ್ಬರ ಹೆಸರನ್ನು ಶಾರ್ಟ್ ಲಿಸ್ಟ್ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ರಾಹುಲ್ ದ್ರಾವಿಡ್ ಮತ್ತು ಬಿಸಿಸಿಐ ನಡುವಿನ ಒಪ್ಪಂದ ಮುಗಿದ ಬಳಿಕ ಟೀಮ್ ಇಂಡಿಯಾದ ಹೆಡ್ ಕೋಚ್ ಹುದ್ದೆಗೆ ಹೊಸ ಅರ್ಜಿಯನ್ನು ಜೂನ್ 13 ರಂದು ಆಹ್ವಾನಿಸಲಾಗಿತ್ತು. ಈ ಅರ್ಜಿಗಳನ್ನು ಸ್ವೀಕರಿಸಿದ ಬಿಸಿಸಿಐ ಆ ಅರ್ಜಿಗಳಲ್ಲಿ ಎರಡು ಅರ್ಜಿಗಳನ್ನು ಫೈನಲ್ ಮಾಡಲಾಗಿದೆ ಎಂದರು.
ಐಪಿಎಲ್ ಮುಗಿದ ಬೆನ್ನಲ್ಲೇ ಕೆಕೆಆರ್ ತಂಡಕ್ಕೆ ಮೂರನೇ ಕಪ್ ಗೆಲ್ಲಿಸಿದ ಮೆಂಟರ್ ಗೌತಮ್ ಗಂಭೀರ್ ಅವರು ದ್ರಾವಿಡ್ ಬಳಿಕ ಹೆಡ್ ಕೋಚ್ ಅಗಲಿದ್ದಾರೆ ಎಂಬ ವರದಿಗಳು ಎಲ್ಲೆಡೆ ಹರಿದಾಡುತ್ತಿದ್ದವು. ಈಗ ಆ ವದಂತಿ ನಿಜವಾಗಿದೆ.
ಹೌದು, ಬಿಸಿಸಿಐ ನ ಕಾರ್ಯದರ್ಶಿ ಜಯ ಶಾ ಹೇಳಿರುವ ಪ್ರಕಾರ ಟೀಮ್ ಇಂಡಿಯಾದ ಹೆಡ್ ಕೋಚ್ ಹುದ್ದೆಗೆ ಇಬ್ಬರನ್ನು ಆಯ್ಕೆ ಮಾಡಲಾಗಿದೆ ಯಾರೆಂದರೆ ಭಾರತ ತಂಡದ ಮಾಜಿ ಎಡಗೈ ಬ್ಯಾಟರ್ ಗೌತಮ್ ಗಂಭೀರ್ ಜೊತೆಗೆ ಡಬ್ಲ್ಯೂ ವಿ ರಾಮನ್ ಅವರ ಹೆಸರನ್ನು ಶಾರ್ಟ್ ಲಿಸ್ಟ್ ಮಾಡಲಾಗಿದೆ. ಇವರಿಬ್ಬರಲ್ಲಿ ಒಬ್ಬರನ್ನು ನೇಮಕ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.