ಸಿನಿಮಾ ಸುದ್ದಿ

Kannda new movie: ಕೆಲವೇ ದಿನಗಳಲ್ಲಿ ‘ಕಡಲೂರ ಕಣ್ಮಣಿ’ ನಿಮ್ಮ ಮುಂದೆ!

Share It

ಬೆಂಗಳೂರು : ಕಡಲೂರ ಕಣ್ಮಣಿ ಎಂಬ ಸಿನಿಮಾವು ಕೆಲವೇ ದಿನಗಳಲ್ಲಿ ನಿಮ್ಮ ಮುಂದೆ ಬರಲಿದೆ. ರಾಮ್ ಪ್ರೋಡೆಕ್ಷನ್ ನಡಿ ರಾಮ್ ಪ್ರಸಾದ್ ಹುಣಸೂರ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

ಕೊಳ ಶೈಲೇಶ್ ಆರ್. ಪೂಜಾರಿ, ಬಸವರಾಜ್ ಗಚ್ಚಿ ಹಾಗೂ ವಿನೋದ್ ರಾಮ್, ಹೊಳೆನರಸಿಪುರ ಮತ್ತು ಮಹೇಶ್ ಕುಮಾರ್ ಎಂ. ನಿರ್ಮಾಣದಲ್ಲಿ ಕಾಣಿಸಿಕೊಂಡಿದ್ದಾರೆ.

ಶಿರಸಿಯ ಅರ್ಜುನ್‌ ನಗರ್ಕರ್‌ ಎಂಬುವವರು ನಾಯಕನಾಗಿ ಈ ಚಿತ್ರದ ಮೂಲಕ ಕನ್ನಡ ಸಿನಿ ಜಗತ್ತಿಗೆ ಕಾಲಿಡುತ್ತಿದ್ದಾರೆ. ನಿಶಾ ಯಾಲಿನಿ ಅಂಜು ಎಂಬ ಪಾತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ರವಿ ರಾಮ್ ಕ್ಯಾಮರಾದಲ್ಲಿ ತಮ್ಮ ಕೈ ಚಳಕ ತೋರಿಸಿದ್ದಾರೆ.

ಇದೊಂದು ಪ್ರೇಮ ಕತೆಯನ್ನು ಆಧಾರಿಸಿದ ಚಿತ್ರವಾಗಿದ್ದು , ಕಡಲ ತೀರದ ಹುಡುಗಿ ಹಾಗೂ ನಗರ ಪ್ರದೇಶದ ಹುಡುಗ ನ ನಡುವೆ ಕಥೆ ನಡೆಯುತ್ತದೆ. ಕೊನೆಯ 20 ನಿಮಿಷಗಳು ನಿಮ್ಮನ್ನು ಭಾವುಕತೆ ಮಾಡುತ್ತವೆ.

ಸಂಕಲನವನ್ನು ನಿಶಿತ್ ಪೂಜಾರಿ ಮಾಡಿದ್ದಾರೆ. ಬಂಡೆ ಚಂದ್ರು ಸಾಹಸ ಮಾಡಿದ್ದಾರೆ.


Share It

You cannot copy content of this page