ಅಪರಾಧ ಸಿನಿಮಾ ಸುದ್ದಿ

ರೇಣುಕಾ ಸ್ವಾಮಿ ಕೊಲೆ ಪ್ರಕರಣ: ಕೊಲೆ ಜಾಗಕ್ಕೆ ಬಂದಿದ್ದ ನಿಗೂಢ ವ್ಯಕ್ತಿ ಪತ್ತೆ

Share It

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆಯಾದ ಜಾಗಕ್ಕೆ ದರ್ಶನ್ ಮತ್ತು ಬಂಧಿತರಾಗಿರುವ ಆರೋಪಿಗಳಲ್ಲದೆ ನಿಗೂಢ ವ್ಯಕ್ತಿಯೊಬ್ಬ ಬಂದಿದ್ದು, ಆತ ಯಾರು ಎಂಬುದು ಇದೀಗ ಪತ್ತೆಯಾಗಿದೆ.

ಆ ಕೊಲೆಯ ಸಂದರ್ಭದಲ್ಲಿ ಸ್ಥಳಕ್ಕೆ ಬಂದಿದ್ದ ವ್ಯಕ್ತಿಯ ಬಗ್ಗೆ ಪ್ರದೋಷ್ ಗೆ ಮಾತ್ರವೇ ಗೊತ್ತಿತ್ತು. ಆದರೆ, ಈ ಬಗ್ಗೆ ಆತನ ಪೊಲೀಸರ ಮುಂದೆ ಬಾಯ್ಬಿಟ್ಟಿರಲಿಲ್ಲ. ಇದೀಗ ಆತ ಪ್ರದೋಷ್ ಸೂಚನೆ ಮೇರೆಗೆ ಸ್ಥಳಕ್ಕೆ ಬಂದು, ಆತನನ್ನು ಕರೆದೊಯ್ದಿದ್ದ ಎಂದು ಹೇಳಲಾಗುತ್ತಿದೆ.

ಪೊಲೀಸರು, ಈ ಸಂಬಂಧ ವಿಚಾರಣೆ ನಡೆಸಿ, ಆತನನ್ನು ಪತ್ತೆ ಹಚ್ಚಿ ಆತನಿಗೆ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಿದ್ದಾರೆ. ನೋಟೀಸ್ ನೀಡುತ್ತಿದ್ದಂತೆ ಆತ ತಲೆಮರೆಸಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಶಾಸಕ ರವಿಸುಬ್ರಮಣ್ಯಂ ಕಚೇರಿ ಸಿಬ್ಬಂದಿ: ಪ್ರದೋಷ್ ಕರೆತರುವ ಸಲುವಾಗಿ ಕೊಲೆಯಾದ ಸಂದರ್ಭದಲ್ಲಿ, ಕೊಲೆಯಾದ ಸ್ಥಳಕ್ಕೆ ಆಗಮಿಸಿದ್ದ ಕಾರ್ತಿಕ್ ಪುರೋಹಿತ್ ಎಂಬ ವ್ಯಕ್ತಿ ಬಸವನಗುಡಿ ಶಾಸಕ ರವಿಸುಬ್ರಮಣ್ಯ ಅವರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.


Share It

You cannot copy content of this page