ನವಲಗುಂದ : ಶುಕ್ರವಾರವಾದ ಇಂದು ಮಣ್ಣೆತ್ತಿನ ಅಮವಾಸ್ಯೆಯನ್ನು ರೈತರು ಉತ್ಸುಕರಾಗಿಯೆ ಆಚರಿಸುತ್ತಿದ್ದಾರೆ.
ಮಣ್ಣೆತ್ತಿನ ಅಮವಾಸ್ಯೆಯ ಈ ದಿನದಂದು ಮಣ್ಣಿನಿಂದ ಎತ್ತು ಮಾಡಿ ಪೂಜಿಸುವ ಸಂಪ್ರದಾಯವಿದೆ. ಕಾರ ಹುಣ್ಣಿಮೆ ನಂತರ ಬರುವ ಈ ಹಬ್ಬ ರೈತಾಪಿ ಜನರು ತಮ್ಮ ಬದುಕಿಗೆ ಆಸರೆಯಾಗಿರುವ ಎತ್ತುಗಳನ್ನು ಪೂಜಿಸಿ ಸಂಭ್ರಮ ಪಡುವ ಹಬ್ಬ.
ಈ ಅಮಾವಾಸ್ಯೆ ಸಂದರ್ಭದಲ್ಲಿ ಮಣ್ಣಿನಿಂದ ತಯಾರಿಸಲ್ಪಟ್ಟ ಎತ್ತುಗಳಿಗೆ ಭಾರೀ ಬೇಡಿಕೆ ಇತ್ತು.
ಆದರೆ ಪಟ್ಟಣದ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಬಣ್ಣ ಬಣ್ಣದ ಎತ್ತಿನ ಮೂರ್ತಿ ಖರೀದಿಸುವ ಜತೆ ಜತೆಗೆ ಹೂವು, ಹಣ್ಣು, ಬಾಳಿಕಂಬ ಸೇರಿದಂತೆ ಪೂಜಾ ಸಾಮಗ್ರಿಗಳ ಖರೀದಿಗೆ ಜನರು ಮುಗಿಬಿದ್ದ ದೃಶ್ಯಗಳು ಕಂಡುಬಂದವು.
ಸ್ವಾವಲಂಬಿ ಬದುಕು ನಡೆಸುವ ಕೃಷಿಕರು ಬಸವಣ್ಣನ ಸ್ವರೂಪಿಯಾದ ಎತ್ತುಗಳನ್ನು ತಮ್ಮ ಹೊಲದ ಮಣ್ಣಿನಿಂದಲೇ ತಾವೇ ರಚಿಸಿ ಪೂಜಿಸಿದರೆ. ಇನ್ನೂ ಕೆಲವು ನಗರವಾಸಿಗಳಿಗೆ ಮಣ್ಣಿನ ಎತ್ತುಗಳನ್ನು ಮಾರುಕಟ್ಟೆಯಿಂದ ತಂದು ಪೂಜಿಸುವುದು ಅನಿವಾರ್ಯವಾಗಿದೆ.
ಒಟ್ಟಾರೆ ಮಣ್ಣೆತ್ತಿನ ಅಮಾವಾಸ್ಯೆಯ ವೇಳೆ ಮಾರುಕಟ್ಟೆಯಲ್ಲಿ ಬಣ್ಣ-ಬಣ್ಣದ ಎತ್ತಿನ ಮೂರ್ತಿಗಳು ಎಲ್ಲರನ್ನೂ ಆಕರ್ಷಿಸುತ್ತಿರುವುದು ಸತ್ಯ