ಯೋಗ ಮಾಡುವುದರಿಂದ ನಮ್ಮ ದೇಹವನ್ನು ಸದೃಢವಾಗಿ ಇರಿಸುವುದರ ಜೊತೆ ಜೊತೆಗೆ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಅಷ್ಟೇ ಅಲ್ಲದೆ ನಾವು ನಿಯಮಿತವಾಗಿ ಕೆಲವೊಂದು ಆಸನಗಳನ್ನು ಮಾಡುವುದರಿಂದ ನಮ್ಮ ದೇಹದಲ್ಲಿನ ಬೊಜ್ಜು ಕರಗುತ್ತದೆ ಎಂದು ಅಕ್ಷರ ಯೋಗ ಕೇಂದ್ರದ ಸಂಸ್ಥಾಪಕರಾದ ಹಿಮಾಲಯನ್ ಸಿದ್ದ ಅಕ್ಷರ್ ಹೇಳುತ್ತಾರೆ.
ಹಾಗಿದ್ರೆ ಬನ್ನಿ ಆ ಆಸನಗಳ ಯಾವುವು ಮತ್ತು ಮಾಡುವ ವಿಧಾನವನ್ನು ತಿಳಿಯೋಣ.
ನೌಕಾಸನ
ನಮ್ಮ ಹೊಟ್ಟೆಯ ಭಾಗದಲ್ಲಿ ಇರುವ ಕೊಬ್ಬನ್ನು ಕರಗಿಸಲು ಈ ಆಸನವು ಸಹಕಾರಿಯಾಗಿದೆ. ನೌಕೆಯ ಆಕಾರದಲ್ಲಿ ಆಸನವನ್ನು ಮಾಡಬಹುದು. ಮೊದಲಿಗೆ ನಿಮ್ಮ ಕಾಲುಗಳನ್ನು ಚಾಚಿಕೊಂಡು ಕುಳಿತುಕೊಳ್ಳಿ. ಬಳಿಕ ನಿಮ್ಮ ಬೆನ್ನು ಮೂಳೆಯನ್ನು ನೇರವಾಗಿ ಇಡಿ. ನೀವು ಕುಳಿತುಕೊಂಡಿರುವುದರಿಂದ ನಿಮ್ಮ ಪಾದಗಳನ್ನು ಮೇಲಕ್ಕೆ ಎತ್ತಿ. ಈಗ ಕೆಲ ಸೆಕೆಂಡುಗಳ ಕಾಲ ಇದ್ದು ನಿಮ್ಮ ಉಸಿರಾಟವನ್ನು ಗಮನಿಸಿ.
ಸಂತೋಲನಾಸನ
ಇದೊಂದು ಸಮತಲವಾದ ಆಸನವಾಗಿದ್ದು. ನಮ್ಮ ಮೂಲೆಗಳನ್ನು ಇದರಲ್ಲಿ ತೊಡಗಿಸಿಕೊಳ್ಳುತ್ತದೆ. ನಮ್ಮ ಬುಜವನ್ನು ನೆಲದ ಮೇಲೆ ಊರಿ. ಬಳಿಕ ಪಾದದಿಂದ ತಲೆಯವರೆಗೆ ನೇರವಾಗಿ ನಿಲ್ಲಿ. ನಿಮ್ಮ ಬೆನ್ನು ಮೂಳೆಯ
ಕಡೆಗೆ ಹೊಟ್ಟೆಯನ್ನು ಎಳೆದುಕೊಂಡು ಕೆಲ ಸೆಕೆಂಡುಗಳ ಕಾಲ ಹಾಗೆ ಇದ್ದು ಬಳಿಕ ವಿಶ್ರಾಂತ್ರಕ್ಕೆ ಬನ್ನಿ.
ಇವುಗಳ ಜೊತೆ ಇತರ ಆಸನಗಳನ್ನು ಮಾಡುವುದರಿಂದ ನಮ್ಮ ದೇಹದ ಬೊಜ್ಜನ್ನು ಕರಗಿಸಬಹುದು.

