ಕ್ರೀಡೆ ಸುದ್ದಿ

ಸರಣಿಯ ಮೊದಲ ಪಂದ್ಯದಲ್ಲೇ ಗಿಲ್ ಪಡೆಗೆ ತೀವ್ರ ಮುಖಭಂಗ !

Share It

ಶಿವರಾಜು. ವೈ. ಪಿ
ಎಲೆರಾಂಪುರ.

ಹರಾರೆ (ಜಿಂಬಾಂಬೆ) : ವಿಶ್ವ ಕಪ್ ಗೆದ್ದ ಬೆನ್ನಲ್ಲೇ ಟೀಮ್ ಇಂಡಿಯಾಗೆ ಬಾರಿ ಮುಖಭಂಗವಾಗಿದೆ. ಶುಭ್ಮನ್ ಗಿಲ್ ನಾಯಕತ್ವದ ಯುವ ಆಟಗಾರರ ತಂಡ ಐದು ಪಂದ್ಯಗಳ ಟಿ 20 ಸರಣಿಗೆಂದು ಜಿಂಬಾಂಬೆ ಪ್ರವಾಸ ಕೈಗೊಂಡಿತ್ತು. ಈ ಸರಣಿಯನ್ನು ಗೆಲ್ಲಲು ಫೆವರೇಟ್ ತಂಡ ಅನಿಸಿಕೊಂಡಿದ್ದ ಟೀಮ್ ಇಂಡಿಯಾಗೆ ಮೊದಲ ಪಂದ್ಯದಲ್ಲೇ ಮುಖಭಂಗವಾಗಿದೆ.

ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಟೀಮ್ ಇಂಡಿಯಾ ತನ್ನ ಬೌಲಿಂಗ್ ದಾಳಿಯಿಂದ 115ಕ್ಕೆ ಆತಿಥೇಯ ರಾಷ್ಟ್ರವನ್ನು ಕಟ್ಟಿಹಾಕಲು ಯಶ್ವಸ್ವಿಯಾಯಿತು. ಭಾರತದ ಪರ ಬೌಲ್ ಮಾಡಿದ ರವಿ ಬಿಷ್ನೋಯಿ 4 ವಿಕೆಟ್ ಕಬಳಿಸಿ ಮಿಂಚಿದರು. ವಾಷಿಂಗ್ಟನ್ ಸುಂದರ್ ಗೆ 2, ಮುಕೇಶ್ ಕುಮಾರ್ ಹಾಗೂ ಅವೇಶ್ ಖಾನ್ ತಲಾ ಒಂದು ವಿಕೆಟ್ ಪಡೆದರು.

ಇನ್ನೂ ಎರಡನೇ ಇನ್ನಿಂಗ್ಸ್ ಆರಂಭದ ಮೊದಲ ಓವರ್ ನಲ್ಲಿಯೇ ಜಿಂಬಾಂಬೆಯ ಬ್ರೈನ್ ಬೆನ್ನೆಟ್ ಅಭಿಷೇಕ್ ಶರ್ಮನನ್ನು ಸೊನ್ನೆಗೆ ಔಟ್ ಮಾಡುವ ಮೂಲಕ ಟೀಮ್ ಇಂಡಿಯಾಗೆ ಆಘಾತ ನೀಡಿದರು. ನಂತರ ಶುಭ್ಮನ್ ಗಿಲ್ 29 ಬಾಲ್ ನಲ್ಲಿ 31 ರನ್ ಕಲೆಹಾಕಿ ಪೆವಿಲಿಯೆನ್ ಸೇರಿದರು. ನಂತರ ಬಂದ ಗಾಯಕ್ವಾಡ್, ಪರಾಗ್, ರಿಂಕು ಸಿಂಗ್, ಜೂರೆಲ್ ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲಿಲ್ಲ.

ಕೊನೆಯಲ್ಲಿ ಬಂದ ಆಲ್-ರೌಂಡರ್ ವಾಷಿಂಗ್ಟನ್ ಸುಂದರ್ ಕೊನೆಯ ಮೂರು ಓವರ್ ಗಳಲ್ಲಿ 30 ರನ್ ಹೊಡೆಯಲು ವಿಫಲರಾದರು. ಬಳಿಕ ಜಿಂಬಾಂಬೆ 13 ರನ್ ಗಳ ರೋಚಕ ಜಯಗಳಿಸಿತು. ಜಿಂಬಾಂಬೆ ಪರ ಬೌಲ್ ಮಾಡಿದ ನಾಯಕ್ ಸಿಕಂದರ್ ರಾಝಾ ಹಾಗೂ ಟೆಂದೈ ಚತರ ತಲಾ ಮೂರು ವಿಕೆಟ್ ಪಡೆದು ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿದರು.


Share It

You cannot copy content of this page