ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೆಲಸ ಮಾಡಬೇಕು ಎಂದು ಆಸಕ್ತಿ ಇರುವವರಿಗೆ ಒಳ್ಳೆ ಅವಕಾಶ ದೊರೆತಿದೆ. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತವು ಖಾಲಿ ಇರುವ ಹುದ್ದೆಗಳಾದ ಜೂನಿಯರ್ ಅಸಿಸ್ಟಂಟ್, ಚಾಲಕ ಸೇರಿದಂತೆ ಒಟ್ಟು 39 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಇದೇ ಜುಲೈ 26 ಕೊನೆಯ ದಿನಾಂಕ ವಾಗಿದೆ. SSLC ಹಾಗೂ PUC ತೇರ್ಗಡೆ ಹೊಂದಿದ್ದರೆ ಸಾಕು ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿಯನ್ನು ಆಫ್ ಲೈನ್ ನಲ್ಲಿಯೇ ನೀಡಬೇಕು.
ಹುದ್ದೆಗಳ ವಿವರ
ಚಾರ್ಟರ್ಡ್ ಅಕೌಂಟೆಂಟ್, ಕಾನೂನು ಅಧಿಕಾರಿ 2 ಹುದ್ದೆ, ಎಚ್ಆರ್ ಆಫೀಸರ್ 1 ಹುದ್ದೆ, ಟೈಪಿಸ್ಟ್ & ಸ್ಟೆನೊ 2 ಹುದ್ದೆಸಹಾಯಕರು 8 ಹುದ್ದೆ, ವಿದ್ಯಾರ್ಹತೆಫ್ರೆಂಡ್ಲಿ ಡೆವಲಪ್ಮೆಂಟ್ ಆಫೀಸರ್ತರಬೇತಿ ಅಧಿಕಾರಿ 1 ಹುದ್ದೆ, ಡೆಪ್ಯುಟಿ ಸ್ಟಾಫ್ & ವೆಹಿಕಲ್ ಡ್ರೈವರ್ 2, ಜೂನಿಯರ್ ಅಸಿಸ್ಟೆಂಟ್ 11 ಹುದ್ದೆ,
ವಯೋಮಿತಿ
25 ರಿಂದ 35 ವರ್ಷದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಸಹಾಯಕರು, ಟೈಪಿಸ್ಟ್ ಮತ್ತು ಸ್ಟೆನೋ, ಜೂನಿಯರ್ ಅಸಿಸ್ಟೆಂಟ್, ಡೆಪ್ಯುಟಿ ಸ್ಟಾಫ್ ಮತ್ತು ವೆಹಿಕಲ್ ಡ್ರೈವರ್ ಹುದ್ದೆಗಳಿಗೆ 300ರೂ ಅರ್ಜಿಯ ಶುಲ್ಕ. ಹಾಗೂ ಚಾರ್ಟರ್ಡ್ ಅಕೌಂಟೆಂಟ್, ಲಾ ಆಫೀಸರ್, ಎಚ್ಆರ್ ಆಫೀಸರ್, ಟ್ರೈನಿಂಗ್ ಆಫೀಸರ್, ಫ್ರೆಂಡ್ಲಿ ಡೆವಲಪ್ಮೆಂಟ್ ಆಫೀಸರ್ ಹುದ್ದೆಗಳಿಗೆ 500 ರೂ ಅರ್ಜಿಯ ಶುಲ್ಕವನ್ನು ಪಾವತಿ ಮಾಡಬೇಕು.
ಆಯ್ಕೆ ಮತ್ತು ವೇತನ
ಸಂದರ್ಶನ ಮತ್ತು ಲಿಖಿತ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ. ಹುದ್ದೆಗೆ ಅನುಗುಣವಾಗಿ 17,000 ದಿಂದ 70,000 ವರೆಗೆ ವೇತನ ನೀಡಲಾಗುವುದು.
ಅರ್ಜಿ ಸಲ್ಲಿಕೆ
ಅರ್ಜಿ ನಮೂನೆಗಾಗಿ ಇಲ್ಲಿ ಕ್ಲಿಕ್ ಮಾಡಿ
https://www.souharda.coop/2024/Recruitment/June2024/Application_Form.pdf
Souharda Sahakari Soudha”, #68, First Floor, 18th Cross Road,
Margosa Road, Malleswaram, Bengaluru-560055.
ಹೆಚ್ಚಿನ ಮಾಹಿತಿಗಾಗಿ souharda.coop ನಲ್ಲಿ ಪಡೆಯಿರಿ.