ಬೆಂಗಳೂರು: ವಾಹನಗಳ ಹೈಬೀಮ್ ಲೈಟ್ ಬಳಸುವ ವಾಹನ ಸವಾರರಿಗೆ ರಾಜ್ಯ ಪೊಲೀಸರು ಬಿಸಿ ಮುಟ್ಟಿಸಿದ್ದು, ಕಳೆದ ಮೂರು ದಿನಗಳಲ್ಲಿ ಐದು ಸಾವಿರ ಪ್ರಕರಣ ದಾಖಲು ಮಾಡಿದ್ದಾರೆ.
ಹೈಬೀಮ್ ಲೈಟ್ ಬಳಕೆಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿತ್ತು. ಎಡಿಜಿಪಿ ಅಲೋಕ್ ಕುಮಾರ್ ವಾಹನ ಸವಾರರಿಗೆ ಎಚ್ಚರಿಕೆ ನೀಡಿದ್ದರು. ಇದೀಗ ಮೂರು ದಿನಗಳಿಂದ ಕಾರ್ಯಾನಡೆಸುತ್ತಿದ್ದು, ಐದು ಸಾವಿರ ಕೇಸ್ ದಾಖಲು ಮಾಡಿದ್ದಾರೆ.
ಲಾರಿ, ಟ್ರಕ್, ಬಸ್ , ಆಟೋ, ಲಾರಿ ಸೇರಿದಂತೆ ವಿವಿಧ ವಾಹನಗಳಲ್ಲಿ ಹೈಬೀಮ್ ಬಳಕೆ ಮಾಡುವುದರಿಂದ ಮುಂದೆ ಬರುವ ವಾಹನ ಚಾಲಕರಿಗೆ ತೊಂದರೆಯಾಗುತ್ತಿದ್ದು, ಇದರ ತಡೆಗೆ ಸಂಬಂಧಿಸಿ ಹೈಬೀಮ್ ಲೈಟ್ ಬಳಕೆಯನ್ನು ತಪ್ಪಿಸಬೇಕು ಎಂದು ಸೂಚನೆ ನೀಡಲಾಗಿತ್ತು.
ಇದೀಗ ಇಂತಹ ನಿಯಮ ಉಲ್ಲಂಘನೆ ಮಾಡಿದ ಬೆಂಗಳೂರಿನಲ್ಲಿ 2153, ಮೈಸೂರಿನಲ್ಲಿ302, ತುಮಕೂರು237, ಉತ್ತರ ಕನ್ನಡ 236, ರಾಯಚೂರು 260, ವಿಜಯನಗರ 182 ಪ್ರಕರಣಗಳು ಸೇರಿದಂತೆ ಜುಲೈ 4 ರವರೆಗೆ ಐದು ಸಾವಿರ ಪ್ರಕರಣ ದಾಖಲಾಗಿವೆ.
ನಿಯಮ ಉಲ್ಲಂಘನೆ ಮಾಡಿದವರಿಗೆ ಮೊದಲ ಬಾರಿಗೆ 500 ರುಪಾಯಿ ದಂಡ ವಿಧಿಸಲಾಗುತ್ತದೆ. ಇದು ಮತ್ತೇ ಮರುಕಳಿಸಿದರೆ, ಒಂದು ಸಾವಿರ ದಂಡ ವಿಧಿಸಲಾಗುತ್ತದೆ ಎಂದು ಸಂಚಾರ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.