ಉಪಯುಕ್ತ ಸುದ್ದಿ

Job alert: ಫಿಜಿಯೋಥೆರಪಿಸ್ಟ್ ಹುದ್ದೆಗೆ ಅರ್ಜಿ ಆಹ್ವಾನ

Share It

ತುಮಕೂರು : ಶಾಲಾ ಶಿಕ್ಷಣ ಇಲಾಖೆಯ ಸಮಗ್ರ ಶಿಕ್ಷಣ ಕರ್ನಾಟಕ ಕಾರ್ಯಕ್ರಮದಡಿ ಸಮನ್ವಯ ಶಿಕ್ಷಣ ಚಟುವಟಿಕೆಗಳಲ್ಲಿ ತುಮಕೂರು (ದ) ಜಿಲ್ಲಾ ವ್ಯಾಪ್ತಿಯ ಚಿ.ನಾ.ಹಳ್ಳಿ, ಗುಬ್ಬಿ, ಕುಣಿಗಲ್, ತಿಪಟೂರು, ತುಮಕೂರು, ತುರುವೇಕೆರೆ ತಾಲ್ಲೂಕುಗಳ ಶಾಲಾ ಸಿದ್ದತಾ ಕೇಂದ್ರಗಳಲ್ಲಿ ವಿಶೇಷಚೇತನ ವಿದ್ಯಾರ್ಥಿಗಳಿಗೆ ಥೆರಪಿ ಸೇವೆಯನ್ನು ನೀಡಲು ಫಿಜಿಯೋಥೆರಪಿಸ್ಟ್ ಹುದ್ದೆಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಈ ಹುದ್ದೆಯು 2025 ರ ಮಾರ್ಚ್ 31 ರವರೆಗೆ ತಾತ್ಕಾಲಿಕವಾಗಿ ನೇರಗುತ್ತಿಗೆ ಅಡಿ ದಿನದ ಅವಧಿ ಆಧಾರದಲ್ಲಿ ಪ್ರತಿ ತಾಲ್ಲೂಕಿನಲ್ಲಿ ವಾರದಲ್ಲಿ ಎರಡು ದಿನ ಕಾರ್ಯನಿರ್ವಹಿಸಲು ನೇಮಿಸಿಕೊಳ್ಳಲಾಗುವುದು.

ವಿದ್ಯಾರ್ಹತೆ

ಡಿಪ್ಲೋಮೋ ಇನ್ ಫಿಜಿಯೋಥೆರಪಿ ಅಥವಾ ಬ್ಯಾಚುಲರ್ ಆಫ್ ಫಿಜಿಯೋಥೆರಪಿ ಅಥವಾ ಮಾಸ್ಟರ್ ಆಪ್ ಫಿಜಿಯೋಥೆರಪಿ .

ಅರ್ಹ ಅಭ್ಯರ್ಥಿಗಳು ಜುಲೈ 16ರೊಳಗೆ ಆರ್ಜಿಯನ್ನು ಉಪನಿರ್ದೇಶಕರು ಹಾಗೂ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳ ಕಛೇರಿ, ಶಾಲಾ ಶಿಕ್ಷಣ ಇಲಾಖೆ, ಡಾ. ರಾಧಾಕೃಷ್ಣನ್ ರಸ್ತೆ, ಎಸ್.ಎಸ್ ಪುರಂ, ಇವರಿಗೆ ಸಲ್ಲಿಸಬೇಕು.

ಸ್ವ-ವಿವರವುಳ್ಳ ಮಾಹಿತಿ ಮತ್ತು ವಿದ್ಯಾರ್ಹತೆಯ ಎಲ್ಲಾ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ:೯೪೪೮೯೯೯೪೦೭ನ್ನು ಸಂಪರ್ಕಿಸಬೇಕೆಂದು ತಿಳಿಸಲಾಗಿದೆ.


Share It

You cannot copy content of this page