ನಾಲತವಾಡ : ಮೊಹರಂ ಎಂದರೆ ಮಹಮದಿಯರ ಮೊದಲ ತಿಂಗಳು. ಇಲ್ಲಿಂದ ಇಸ್ಲಾಂ ವರ್ಷ ಆರಂಭವಾಗುತ್ತದೆ. ಈ ಹಬ್ಬಕ್ಕೆ ಚಾರಿತ್ರಿಕ ಮತ್ತು ಧಾರ್ಮಿಕ ಹಿನ್ನೆಲೆಯೂ ಇದೆ.ಇದು ಹಿಂದೂ ಮುಸ್ಲಿಮರ ಭಾವೈಕ್ಯತೆಯ ಹಬ್ಬಗಳಲ್ಲಿ ಪ್ರಮುಖವಾದದ್ದು ಮೊಹರಂ. ಯಾವುದೇ ತಾರತಮ್ಯ ಇಲ್ಲದಂತೆ ಈ ಹಬ್ಬದಲ್ಲಿ ಹಿಂದೂಗಳು ಪಾಲ್ಗೊಳ್ಳುತ್ತಾರೆ. ಮುಖ್ಯವಾಗಿ ಗ್ರಾಮೀಣ ಭಾಗದಲ್ಲಿ ಮೊಹರಂ ಹಬ್ಬವನ್ನು ಎಲ್ಲರೂ ಸಂಭ್ರಮದಿಂದ ಆಚರಿಸುತ್ತಾರೆ.
ಮೊದಲ ಹಂತದಲ್ಲಿ ಪಟ್ಟಣದ ವಿವಿಧ ಮಸೀದಿಗಳಲ್ಲಿ ಅಲಾಯಿ ದೇವರ ಪ್ರತಿಷ್ಠಾಪನೆಯ ಪೂರ್ವಭಾವಿಯಾಗಿ ಸೋಮವಾರ ದೇವರ ಪಂಜಾ ತರುವ ಕಾರ್ಯ ಅತ್ಯಂತ ಭಕ್ತಿ ಭಾವದಿಂದ ಅರಳಿಕಟ್ಟಿಯಿಂದ ಪೂಜೆಸಿ ತರಲಾಗುತ್ತಿರು ದೃಶ್ಯ ಸಾಮಾನ್ಯವಾಗಿತ್ತು.
ಕೆಳಗಿನ ಮಸೀದಿಯ ಅಲಾಯಿ ದೇವರ ಪಂಜಾ ದೇಶಮುಖರ ಓಣಿ ಹಾಗೂ ರೆಡ್ಡೇರ ಪೇಟೆ, ತಳಗಿನ ಮಸುತಿ ಗುರು ಹಿರಿಯರು. ಪಾಲ್ಗೊಂಡಿದ್ದರು ಓಣಿಯ ಹಿಂದು ಹಾಗೂ ಮುಸ್ಲಿಮ್ ಯುವಕರು,ಭಕ್ತರು ಪಾಲ್ಗೊಂಡಿದ್ದರು.
