ಬೆಂಗಳೂರು: ಸ್ಟಾರ್ ಆಟಗಾರ ವಿರಾಟ್ ಕೋಹ್ಲಿ ಒಡೆತನದ ಬೆಂಗಳೂರಿನ ಒನ್-8 ಪಬ್ ವಿರುದ್ಧ ಬೆಂಗಳೂರು ಪೊಲೀಸರು ಎಫ್ ಐಆರ್ ದಾಖಲು ಮಾಡಿದ್ದಾರೆ.
ಬೆಂಗಳೂರಿನ ಎಂ.ಜಿ.ರಸ್ತೆಯಲ್ಲಿರುವ ಒನ್-8 ಕ್ಲಬ್ ವಿರಾಟ್ ಕೋಹ್ಲಿ ಅವರ ಒಡೆತನದಲ್ಲಿ ನಡೆಯುತ್ತಿದೆ. ಕೆಲ ಪಾಲುದಾರರ ಜತೆಗೆ ಕೋಹ್ಲಿ ಈ ಉದ್ದಿಮೆ ನಡೆಸುತ್ತಿದ್ದು, ಕೋಹ್ಲಿ ಹೆಸರಿನಲ್ಲಿರುವ ಕಾರಣಕ್ಕೆ ಫೇಮಸ್ ಆಗಿದೆ.
ಸೋಮವಾರ ರಾತ್ರಿ ಅವಧಿ ಮೀರಿ ತೆರೆದಿದ್ದ ಕಾರಣಕ್ಕೆ ಕ್ಲಬ್ ವಿರುದ್ಧ ಪೊಲೀಸರು ಎಫ್ ಐಆರ್ ದಾಖಲು ಮಾಡಿದ್ದಾರೆ. ಬೆಂಗಳೂರು ಸೆಂಟ್ರಲ್ ಡಿಸಿಪಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆ ನಡೆಸಿ, ಎಫ್ಐಆರ್ ದಾಖಲಿಸಲಾಗಿದೆ ಎಂದು ದೃಢಪಡಿಸಿದ್ದಾರೆ.