ಉಪಯುಕ್ತ ಸುದ್ದಿ

ಬೆಂಗಳೂರಿನ 205 ಕೆರೆಗಳ ನಿರ್ವಹಣೆಯ ಹೊಣೆ ಖಾಸಗಿ ಸಂಸ್ಥೆಗಳ ಪಾಲು !

Share It

ಬೆಂಗಳೂರು: ನಗರದ 205 ಕೆರೆಗಳನ್ನು ಇನ್ನು ಮುಂದೆ ಖಾಸಗಿ ಸಂಘ ಸಂಸ್ಥೆಗಳು ನಿರ್ವಹಣೆ ಮಾಡಲಿದ್ದು, ಈ ಸಂಬಂಧ ಸರಕಾರ ಹೊಸ ನೀತಿಯೊಂದನ್ನು ಜಾರಿಗೆ ತರಲು ಮುಂದಾಗಿದೆ.

ನಗರದಲ್ಲಿನ ಕೆರೆಗಳ ನಿರ್ವಹಣೆಯಲ್ಲಿ ಬಿಡಿಎ, ಬಿಬಿಎಂಪಿ ಜಲಮಂಡಳಿ ಸಂಸ್ಥೆಗಳು ವಿಫಲವಾದ ಹಿನ್ನಲೆಯಲ್ಲಿ ಇಂತಹದ್ದೊಂದು ನಿರ್ಧಾರ ತೆಗೆದುಕೊಂಡಿರುವುದು ಗಮನಾರ್ಹ ಅಂಶವಾಗಿದೆ.

ಕೆರೆಗಳ ನಿರ್ವಹಣೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಕೆರೆಗಳ ನಿರ್ವಹಣೆ ವೈಫಲ್ಯದ ಬಗ್ಗೆ ವ್ಯಾಪಕ ಆಕ್ಷೇಪವಿದೆ. ಈ ಹಿನ್ನೆಲೆಯಲ್ಲಿ ಸರಕಾರ ಇಂತಹದ್ದೊಂದು ಸುಧಾರಣಾ ಕ್ರಮಬತೆಗೆದುಕೊಳ್ಳಲು ಮುಂದಾಗಿದೆ. ಈ ಮಾಹಿತಿಯನ್ನು ನ್ಯಾಯಾಲಯದ ಮುಂದೆ ಹಂಚಿಕೊಂಡಿದೆ.

ರಾಜಕಾಲುವೆ ಒತ್ತುವರಿ ತೆರವಿಗೆ ಸಂಬಂಧಿಸಿದ ವಿಚಾರಣೆ ವೇಳೆ ಕೆರೆಗಳ ನಿರ್ವಹಣೆಯನ್ನು ಖಾಸಗಿ ಸಂಘ, ಸಂಸ್ಥೆಗಳಿಗೆ ವಹಿಸುವ ವಿಚಾರ ಸರಕಾರ ಬಹಿರಂಗಪಡಿಸಿದೆ. ಆ ಮೂಲಕ ಖಾಸಗಿ ಸಂಘ ಸಂಸ್ಥೆಗಳು ಇನ್ಮುಂದೆ ಬೆಂಗಳೂರಿನ ಕೆರೆಗಳ ನಿರ್ವಹಣಾ ಪಾಲುದಾರರಾಗಲಿದ್ದಾರೆ.

ಸರಕಾರದ ನಡೆಗೆ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ಕೆ.ವಿ.ಅರವಿಂದ್ ಅವರ ಪೀಠ, ನಿರ್ವಹಣೆಯ ಹೊಣೆಯೇ ಖಾಸಗೀಕರಣ ಮಾಡುವ ಮಾರ್ಗವಾಗಬಾರದು. ಅಗತ್ಯವಿರುವ ಕೆರೆಗಳ ಸ್ವಚ್ಚತಾ ಕಾರ್ಯ ನಡೆಯಬೇಕು ಎಂದು ಸಲಹೆ ನೀಡಿತು.

ಬಿಬಿಎಂಪಿ ಕೆರೆಗಳ ನಿರ್ವಹಣೆಗೆ ವಾರ್ಷಿಕ 30 ಕೋಟಿ ರು. ಖರ್ಚು ಮಾಡುತ್ತಿದೆ. ಹೀಗಾಗಿ, ಸಂಘ ಸಂಸ್ಥೆಗಳಿಗೆ ನಿರ್ವಹಣೆ ಹೊಣೆ ನೀಡಲಿದ್ದು, ಈ ನೀತಿಯು ಸಾರ್ವಜನಿಕ ಹಿತಾಸಕ್ತಿ ಹೊಂದಿದೆ. ಆದರೆ, ಕೆರೆಗಳ ಮಾಲೀಕತ್ವ ಬಿಬಿಎಂಪಿ ಮತ್ತು ಸರಕಾರದ ಬಳಿಯೇ ಇರಲಿದೆ ಎಂದು ನ್ಯಾಯಾಲಯಕ್ಕೆ ಸರಕಾರ ಮಾಹಿತಿ ನೀಡಿದೆ.


Share It

You cannot copy content of this page