ಬೆಂಗಳೂರು: ಬಿಜೆಪಿ ದಲಿತ ವಿರೋಧಿ, ಇಲ್ಲಿ ಆ್ ಎಸ್ ಎಸ್ ಮತ್ತು ಬಿಜೆಪಿ ದಲಿತರನ್ನು ಅಧಿಕಾರದಿಂದ ದೂರಯಿಡುವ ಕೆಲಸ ಮಾಡುತ್ತವೆ ಎಂಬುದು ಸಾಮಾನ್ಯವಾಗಿ ಕಾಂಗ್ರೆಸ್ ನಾಯಕರ ಆಕ್ರೋಶ. ಆದರೆ, ಬಿಜೆಪಿಯಿಂದಲೇ ಏಳು ಬಾರಿ ಸಂಸದರಾಗಿ ಆಯ್ಕೆಯಾದ ರಮೇಶ್ ಜಿಗಜಿಣಗಿ ಅದೇ ಆರೋಪ ಮಾಡಿದ್ದಾರೆ.
ರಮೇಶ್ ಜಿಗಜಿಣಗಿ ಬಿಜೆಪಿಯಲ್ಲಿ ಸತತ ಏಳು ಬಾರಿ ಗೆಲುವು ಸಾಧಿಸಿದ್ದಾರೆ. ದಕ್ಷಿಣ ಭಾರತದಲ್ಲಿ ಸತತವಾಗಿ ಗೆಲುವು ಸಾಧಿಸಿದ ಸಂಸದರಾಗಿದ್ದಾರೆ. ಹೀಗಾಗಿ, ಅವರಿಗೆ ಮಂತ್ರಿ ಸ್ಥಾನ ಸಿಕ್ಕೇ ಸಿಗುತ್ತದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಕೇಂದ್ರ ಸಂಪುಟದಲ್ಲಿ ಜಿಗಜಿಣಗಿ ಅವರಿಗೆ ಮಂತ್ರಿ ಸ್ಥಾನ ಸಿಕ್ಕಿಲ್ಲ. ಹೀಗಾಗಿ, ಅವರು ಆಕ್ರೋಶ ಹೊರಹಾಕಿದ್ದಾರೆ.
ನಮ್ಮ ಸಮುದಾಯದ ಅನೇಕ ದಲಿತ ನಾಯಕರು ನನ್ನ ಜತೆಗೆ ವಾದ ಮಾಡಿದ್ದರು. ಬಿಜೆಪಿ ಎಂದಿಗೂ ದಲಿತರಿಗೆ ಅಧಿಕಾರ ಕೊಡುವುದಿಲ. ನೀವ್ಯಾಕೆ ಅಲ್ಲಿ ಹೋಗ್ತೀರಾ ಅಂತ. ಆದರೆ, ನಾನು ಬಿಜೆಪಿಯಲ್ಲಿಯೇ ಇದ್ದುಕೊಂಡು ಸತತ ಏಳು ಬಾರಿ ಗೆದ್ದು ಬಂದಿದ್ದೇನೆ. ಆದರೆ, ಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಿಲ್ಲ. ಇದು ಸಹಜವಾಗಿಯೇ ನಮ್ಮ ಸಮುದಾಯಕ್ಕೆ ಬೇಸರವಾಗಿದೆ ಎಂದಿದ್ದಾರೆ.
ರಾಜ್ಯದಿಂದ ಅತಿಹೆಚ್ಚು ಬಾರಿ ಗೆದ್ದವರ ಪೈಕಿ ರಮೇಶ್ ಜಿಗಜಿಣಗಿ ಮೊದಲ ಸ್ಥಾನದಲ್ಲಿದ್ದಾರೆ. ಶೋಭಾ ಕರಂದ್ಲಾಜೆ, ಪ್ರಹ್ಲಾದ್ ಜೋಷಿ, ವಿ.ಸೋಮಣ್ಣ, ನಿರ್ಮಲಾ ಸೀತಾರಾಮನ್ ಅವರಿಗೆ ಸಿಕ್ಕ ಅವಕಾಶ ದಲಿತ ಸಮುದಾಯದಿಂದ ಬಂದ ನನಗೇಕೆ ಸಿಗಲಿಲ್ಲ ಎಂದು ಬಹಿರಂಗವಾಗಿ ಆಕ್ರೋಶ ಹೊರಹಾಕಿದ್ದಾರೆ.
