ಬೆಂಗಳೂರು: ಮಹರ್ಷಿ ವಾಲ್ಮೀಕಿ ನಿಗಮದ 187.33 ಅನುದಾನ ಹಗರಣದ ಬಗ್ಗೆ ಕೇಂದ್ರ ಜಾರಿ ನಿರ್ದೇಶನಾಲಯ ಮಾಜಿ ಸಚಿವ ಬಿ.ನಾಗೇಂದ್ರ ಮತ್ತು ವಾಲ್ಮೀಕಿ ನಿಗಮದ ಅಧ್ಯಕ್ಷರಾಗಿರುವ ಶಾಸಕ ಬಸನಗೌಡ ದದ್ದಲ್ ಅವರ ನಿವಾಸಿಗಳ ಮೇಲೆ ಇಡಿ ದಾಳಿ ಗುರುವಾರ ನಸುಕಿನ ಜಾವ 5 ಗಂಟೆಯಿಂದಲೇ ಶುರುವಾಗಿದೆ.
ನಾಗೇಂದ್ರ ಅವರ ಬೆಂಗಳೂರು, ಬಳ್ಳಾರಿ ನಿವಾಸಗಳು ಹಾಗೂ ಬಸನಗೌಡ ದದ್ದಲ್ ಅವರ ಬೆಂಗಳೂರಿನ ಯಲಹಂಕ ನಿವಾಸ ಇಡಿ ದಾಳಿಗೆ ಒಳಗಾಗಿವೆ.
ಮಾಜಿ ಸಚಿವ ಬಿ.ನಾಗೇಂದ್ರ ಅರೆಸ್ಟ್?
ಹೌದು, ನಿನ್ನೆಯಿಂದ ಇಡಿ ಯಾವಾಗ ಮಾಜಿ ಸಚಿವ ಬಿ.ನಾಗೇಂದ್ರ ಅವರ ನಿವಾಸಗಳ ಮೇಲೆ ದಾಳಿ ಆರಂಭಿಸಿತೊ ಆಗಲೇ ನಾಗೇಂದ್ರ ಅವರಿಗೆ ಬಂಧನ ಭೀತಿ ಶುರುವಾಯಿತು.
ಇದೀಗ ಮತ್ತೆ ಇಡಿ ದಾಳಿ ನಾಗೇಂದ್ರ ಅವರ ನಿವಾಸಗಳ ಮೇಲೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಇಡಿ ನಾಗೇಂದ್ರ ಅವರನ್ನು ಯಾವುದೇ ಕ್ಷಣದಲ್ಲಿ ಬಂಧಿಸಿ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ ಎಂದು ಬಲ್ಲಮೂಲಗಳು ತಿಳಿಸಿವೆ.
