ಉಪಯುಕ್ತ ಸುದ್ದಿ

ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ:ಶಾಸಕರಿಂದ ಪರಿಶೀಲನೆ, ಸ್ಥಳದಲ್ಲೇ ಪರಿಹಾರ

Share It


ಬೆಂಗಳೂರು: ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶೆಟ್ಟಿಹಳ್ಳಿ ವಾರ್ಡ್ ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಕುಡಿಯುನ ನೀರಿನ ಸಮಸ್ಯೆಯಿದ್ದು, ಸಾರ್ವಜನಿಕರ ಸಮಸ್ಯೆ ಆಲಿಸಿದ ಶಾಸಕ ಎಸ್. ಮುನಿರಾಜು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು.

ಶೆಟ್ಟಿಹಳ್ಳಿ ವಾರ್ಡ್ ವಾಪ್ತಿಯ ಚಿಕ್ಕಸಂದ್ರ ಭಾಗದ ಅನೇಕ ಬಡವಾಣೆಗಳಿಗೆ ಸರಿಯಾಗಿ ಕುಡಿಯುನ ನೀರಿನ ಸರಬರಾಜು ಆಗುತ್ತಿಲ್ಲ. ಸಿಎಂಸಿ ಬೋರ್ ವೆಲ್ ಗಳೆಲ್ಲವೂ ಬತ್ತಿ ಹೋಗಿವೆ. ಕಾವೇರಿ ನೀರಿನ ಸರಬರಾಜಂತೂ ದೂರದ ಮಾತು. ಇನ್ನು ಬಿಬಿಎಂಪಿ ಒದಗಿಸುವ ಟ್ಯಾಂಕರ್ ನೀರಿನಿಂದ ಜನರ ನೀರಿನ ಬವಣೆ ತೀರುವುದಿಲ್ಲ. ಹೀಗಾಗಿ, ಸ್ಥಳೀಯ ನಿವಾಸಿಗಳು ಶಾಸಕರಿಗೆ ಮನವಿ ಮಾಡಿದ್ದರು.

ಸ್ಥಳೀಯರ ಮನವಿಗೆ ಸ್ಪಂದಿಸಿದ ಶಾಸಕ ಎಸ್. ಮುನಿರಾಜು, ಸ್ಥಳಕ್ಕಾಗಮಿಸಿ ಅಧಿಕಾರಿಗಳನ್ನು ಕರೆಸಿಕೊಂಡು ಮಾಹಿತಿ ಪಡೆದುಕೊಂಡರು. ಅಧಿಕಾರಿಗಳು ಲಭ್ಯತೆ ಆಧಾರದಲ್ಲಿ ಬಿಬಿಎಂಪಿ ಟ್ಯಾಂಕರ್ ಒದಗಿಸುವ ಭರವಸೆ ನೀಡಿದರು. ಆದರೆ, ಕೂಲಿ ಕಾರ್ಮಿಕರೇ ಹೆಚ್ಚಾಗಿರುವ ಬಡಾವಣೆಗಳಲ್ಲಿ ಟ್ಯಾಂಕರ್ ಬರುವುದನ್ನು ಕಾಯಲು ಸಾಧ್ಯವಿಲ್ಲ. ಹೀಗಾಗಿ, ಪರ್ಯಾಯ ವ್ಯವಸ್ಥೆ ಮಾಡಲು ಸೂಚಿಸಿದರು.

ಹೀಗಾಗಿ, ಪ್ರತಿ ಎರಡು ಮೂರು ಮನೆಗಳಿಗೆ ಸಿಂಟೆಕ್ಸ್ ಅಳವಡಿಕೆ ಮಾಡುವ ಮೂಲಕ ಬಿಬಿಎಂಪಿ, ಸಿಎಂಸಿ ನೀರು ಬಿಟ್ಟಾಗ, ಅಲ್ಲಿ ಸಂಗ್ರಹ ಮಾಡಿಕೊಂಡು, ನಂತರ ಬಳಕೆ ಮಾಡಲು ಅನುಕೂಲ ಕಲ್ಪಿಸಿಕೊಡುವಂತೆ ಸೂಚಿಸಿದರು. ಅಂತೆಯೇ ಬಡಾವಣೆಗೆ ಸಿಂಟೆಕ್ಸ್ ಗಳ ಅಳವಡಿಕೆಗೆ ಅಧಿಕಾರಿಗಳು ಒಪ್ಪಿಗೆ ಸೂಚಿಸಿದರು.

ಅನಂತರ ಸ್ಥಳೀಯರ ಬೇಡಿಕೆಗೆ ಮಣಿದು ಒಂದು ಬೋರ್ ವೆಲ್ ಕೊರೆಯುವ ಕೆಲಸಕ್ಕೆ ಮುಂದಾದರು. ಆ ಬೋರ್ ವೆಲ್ ಮೂಲಕ ಸ್ಥಳೀಯ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಅಗತ್ಯವಿರುವ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಈ ವೇಳೆ ಶೆಟ್ಟಿಹಳ್ಳಿ ವಾರ್ಡ್ ಅಧ್ಯಕ್ಷ ಬಿ. ಸುರೇಶ್, ಶಾಸಕರಿಗೆ ಸ್ಥಳೀಯರ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಟ್ಟರು. ಬಿಬಿಎಂಪಿ ಮತ್ತು ಜಲಮಂಡಳಿ ಅಧಿಕಾರಿಗಳು, ಮುಖಂಡರು ಜತೆಗಿದ್ದರು.


Share It

You cannot copy content of this page