ರಾಜಕೀಯ ಸುದ್ದಿ

ಹರೀಶ್(ಪಾರ್ಥ) ಮುಂದಾಳುತ್ವದಲ್ಲಿ ಬಾಗಲಗುಂಟೆ ಯುವಕರ ತಂಡ ಕಾಂಗ್ರೆಸ್ಸಿಗೆ ಸೇರ್ಪಡೆ

Share It

ಪೀಣ್ಯ ದಾಸರಹಳ್ಳಿ: ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ನಾಗಸಂದ್ರ ಮೆಟ್ರೋ ಬಳಿಯ ಕಾಂಗ್ರೆಸ್ ಕಛೇರಿಯಲ್ಲಿ ಹರೀಶ್(ಪಾರ್ಥ) ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಸಿದ್ಧಾಂತ ಹಾಗೂ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ರವರ ನಾಯಕತ್ವವನ್ನು ಮೆಚ್ಚಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಬಾಗಲಗುಂಟೆಯ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರನ್ನು ದಾಸರಹಳ್ಳಿ ಮಾಜಿ ಶಾಸಕ ಆರ್.ಮಂಜುನಾಥ್ ಕಾಂಗ್ರೆಸ್ ಪಕ್ಷದ ಶಾಲು ಹಾಕಿ ಬರಮಾಡಿಕೊಂಡರು.

ಇದೇ ವೇಳೆ ಅಂಬೇಡ್ಕರ್ ದಿನಾಚರಣೆಯ ಪ್ರಯುಕ್ತ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವ ನಮನ ಸಲ್ಲಿಸಿ ಅಂಬೇಡ್ಕರ್ ರವರ ಸಾಧನೆಗಳನ್ನು ಕೊಂಡಾಡಿದರು.
ಈ ವೇಳೆ ಮಾತನಾಡಿದ ಮಾಜಿ ಶಾಸಕ ಆರ್. ಮಂಜುನಾಥ್,’ ಮೋದಿ ಗ್ಯಾರಂಟಿಗಳು ಪತ್ರಿಕೆಯಲ್ಲೇ ಉಳಿಯುತ್ತವೆ, ಆದರೆ ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳು ಮನೆ ಮನೆಗೆ ತಲುಪುತ್ತವೆ. ಹಾಗಾಗಿ ಅರ್ಥಶಾಸ್ತ್ರಜ್ಞರು ಹಾಗೂ ಬುದ್ಧಿಜೀವಿಗಳಾದ ಪ್ರೊ. ರಾಜೀವ್ ಗೌಡರವರನ್ನು ಗೆಲ್ಲಿಸಿಕೊಂಡು ಬರಬೇಕಾಗಿದೆ’, ಎಂದು ಕಾಂಗ್ರೆಸ್ ಸೇರ್ಪಡೆಗೊಂಡ ಮುಖಂಡರಿಗೆ ಕರೆ ನೀಡಿದರು.

ಬಾಗಲಗುಂಟೆ ವಾರ್ಡ್ ನ ಕಾಂಗ್ರೆಸ್ ಮುಖಂಡರಾದ ಹರೀಶ್(ಪಾರ್ಥ) ಮಾತನಾಡಿ, ‘ಜಾತಿ ಧರ್ಮ ಬಿಟ್ಟು ನಮ್ಮೊಳಗಿರುವ ವೈಷಮ್ಯಗಳನ್ನು ಬಿಟ್ಟು ಕಾಂಗ್ರೆಸ್ ಪಕ್ಷವನ್ನು ಕಟ್ಟೋಣ’, ಹಾಗೂ ದಾಸರಹಳ್ಳಿಯಲ್ಲಿ ಶೋಭಕ್ಕನ ವಿರುದ್ಧ ‘ಗೋ ಬ್ಯಾಕ್ ಶೋಭಕ್ಕ’ ಎಂದು ಬಿಜೆಪಿಯವರೇ ಧ್ವನಿ ಎತ್ತಿರುವ ಹಿನ್ನೆಲೆ ಇನ್ನು ನಾವು ಕಾಂಗ್ರೆಸ್ಸಿನವರು ಚುನಾವಣೆ ಮೂಲಕ ಶೋಭಕ್ಕನನ್ನ ಮನೆಗೆ ಕಳುಹಿಸುತ್ತೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ನಗರಸಭಾ ಅಧ್ಯಕ್ಷರಾದ ಕೆ.ಸಿ.ಅಶೋಕ್, ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್ ಕಮಿಟಿ ಉಪಾಧ್ಯಕ್ಷರಾದ ಡಾ. ಎಸ್ ಮಂಜುನಾಥ್(ಎಬಿಬಿ ಮಂಜಣ್ಣ), ಗ್ಯಾರಂಟಿ ಯೋಜನೆಯ ದಾಸರಹಳ್ಳಿಯ ಅಧ್ಯಕ್ಷರಾದ ಕೆ.ಸಿ.ವೆಂಕಟೇಶ್ (ದೇವೇಗೌಡ), ಬಷೀರ್, ಬಿ.ಎಂ ಜಗದೀಶ್, ನರಸಿಂಹ ನಾಯಕ್, ಅನುಭವ ಜಗದೀಶ್, ಮೋಹನ್, ಮಾಜಿ ನಗರಸಭಾ ಸದಸ್ಯ ನರಸಿಂಹಾಚಾರಿ, ಹನುಮಂತರಾಜು, ಕೇಶವಾಚಾರಿ, ಹನುಮಂತರಾಜು, ಸಿದ್ದರಾಜು, ಸಲೀಂ, ಸದಾಶಿವ, ಚಂದ್ರಶೇಖರ್, ರಾಮಾಂಜಿಗೌಡ ಸೇರಿದಂತೆ ಹಲವಾರು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.


Share It

You cannot copy content of this page