ರಾಜಕೀಯ ಸುದ್ದಿ

ವಾಲ್ಮೀಕಿ ನಿಗಮದ ಹಗರಣ: ಬಂಧಿತ ನಾಗೇಂದ್ರ ವಿರುದ್ಧದ ಆರೋಪಗಳಿಗೆ ಸಿಕ್ಕಿದೆ ಮಹತ್ವದ ಸಾಕ್ಷ್ಯಾಧಾರಗಳು!

Share It

ಬೆಂಗಳೂರು : ಕರ್ನಾಟಕ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಿಗಮ ಹಗರಣದಲ್ಲಿ ಮಾಜಿ ಸಚಿವ, ಶಾಸಕ‌ ಬಿ.ನಾಗೇಂದ್ರ ವಿರುದ್ದ ತನಿಖಾ ಸಂಸ್ಥೆಗಳಿಗೆ ಅನೇಕ‌ ಸಾಕ್ಷ್ಯಗಳು ಸಿಕ್ಕಿವೆ ಎಂಬುದು ತಿಳಿದುಬಂದಿದೆ.

ಹಗರಣದ ತನಿಖೆ ನಡೆಸುತ್ತಿರುವ ಎಸ್​ಐಟಿ, ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ನಾಗೇಂದ್ರ ವಿರುದ್ಧ ಸಾಕಷ್ಟು ಸಾಕ್ಷ್ಯ ಕಲೆ ಹಾಕಿದ್ದಾರೆ. ಈ ಪೈಕಿ ಅನೇಕ ಸಂಗತಿಗಳು ಹಗರಣದಲ್ಲಿ ನಾಗೇಂದ್ರ ಪಾತ್ರ ಇದೆ ಎಂಬುದನ್ನು ಪುಷ್ಟೀಕರಿಸಿವೆ.

ಈ ಸಾಕ್ಷ್ಯಗಳ ಆಧಾರದಲ್ಲೇ ಇ.ಡಿ 3 ಬಾರಿ ನಾಗೇಂದ್ರಗೆ ವಿಚಾರಣೆಗೆ ಬುಲಾವ್ ನೀಡಿತ್ತು ಮತ್ತು ಈಗ ವಶಕ್ಕೆ ಪಡೆಡುಕೊಂಡಿದೆ. ಬೆಂಗಳೂರಿನ ಶಾಂಗ್ರಿಲಾ ಹೋಟೆಲ್‌ನಲ್ಲಿ ನಡೆದ ಸಭೆಯೇ ನಾಗೇಂದ್ರ ವಿರುದ್ಧದ ಮೊದಲ ಹಾಗೂ ಪ್ರಮುಖ ಸಾಕ್ಷಿ ಎನ್ನಲಾಗಿದೆ.

ನಾಗೇಂದ್ರ ವಿರುದ್ಧದ ಸಾಕ್ಷ್ಯಗಳು…

ಆರೋಪಿ ಪದ್ಮನಾಭ್ ವಿಚಾರಣೆಯಲ್ಲಿ ನಾಗೇಂದ್ರ ಸೂಚನೆಯಂತೆ ಅಕೌಂಟ್ ಓಪನ್ ಎಂಬ ಹೇಳಿಕೆ.
ಶಾಂಗ್ರಿಲಾ ಹೋಟೆಲ್ ಮೀಟಿಂಗ್ ಗೆ ನಾಗೇಂದ್ರ ಬಂದು ಹೋಗಿರೋ ಸಿಸಿಟಿವಿ ದೃಶ್ಯಾವಳಿಗಳು.
ಹೋಟೆಲ್​​ನಲ್ಲಿ‌ ನಡೆದ ಮಹಜರು ಪ್ರಕ್ರಿಯೆ ತಿಂದ ಅನೇಕ ಸಾಕ್ಷಿ ಲಭ್ಯವಾಗಿದೆ.

ನಾಗೇಂದ್ರ ಪಿಎ ದೇವೆಂದ್ರಪ್ಪ, ಆಪ್ತ ನೆಕ್ಕುಂಟಿ ನಾಗರಾಜ್, ಸಂಬಂಧಿ ನಾಗೇಶ್ವರ್ ರಾವ್ ಈ ಸಭೆಯಲ್ಲಿ ಭಾಗಿಯಾಗಿದ್ದು.
ಈ ಆರೋಪಿಗಳು ಕೂಡ ತನಿಖೆಯಲ್ಲಿ ನಾಗೇಂದ್ರ ಸೂಚನೆಯಂತೆ ಹಗರಣದಲ್ಲಿ ಭಾಗಿ ಎಂಬ ಹೇಳಿಕೆಗಳು
ಮೃತ ಅಧಿಕಾರಿ ಚಂದ್ರಶೇಖರ್ ಡೆತ್ ನೋಟ್​​ನಲ್ಲಿ “ಸಚಿವ” ಎಂಬುದು ಉಲ್ಲೇಖವಾಗಿರೋದು.

ಪದ್ಮನಾಭ್ ಅವರು ನಾಗೇಂದ್ರ ಆಪ್ತ ಹರೀಶ್ ಗೆ 25 ಲಕ್ಷ ರೂ. ನೀಡಿರೋದು.
ಹರೀಶ್ ವಿಚಾರಣೆಯಲ್ಲಿ ನಾಗೇಂದ್ರ ಸೂಚನೆಯಂತೆ ಹಣ ಪಡೆದಿರೋ ಬಗ್ಗೆ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

ಬಂಧಿತ ಇತರೆ ಆರೋಪಿಗಳ ಹೇಳಿಕೆಗಳು.
ಇ.ಡಿಯ 40 ಗಂಟೆಗಳ ಮೆಗಾ ದಾಳಿ. ದಾಳಿಯಲ್ಲಿ ಅಕ್ರಮ ಹಣ ವರ್ಗಾವಣೆ ಸಂಬಂಧ ಅನೇಕ ದಾಖಲೆ ಸಿಕ್ಕಿರೋದು.
ಇ.ಡಿಯಿಂದ ನಾಗೇಂದ್ರ ಆಪ್ತ ಕಾರ್ಯದರ್ಶಿ ದೇವೆಂದ್ರಪ್ಪ ಹಾಗೂ ಪಿಎ ಹರೀಶ್ ವಿಚಾರಣೆ ಹೇಳಿಕೆಗಳು.

ಈ ಮಧ್ಯೆ, ಬಹುಕೋಟಿ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 3 ದಿನಗಳಿಂದ ತನಿಖೆ ನಡೆಸುತ್ತಿರುವ ಇಡಿ ಅಧಿಕಾರಿಗಳು ಮಾಜಿ ಸಚಿವ, ಬಳ್ಳಾರಿ ಗ್ರಾಮಾಂತರ ಕಾಂಗ್ರೆಸ್ ಶಾಸಕ ನಾಗೇಂದ್ರ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.


Share It

You cannot copy content of this page