ಬೆಂಗಳೂರು: ಕೇಂದ್ರ ಸರ್ಕಾರವು ಜೂನ್ 25 ರಂದು ಸಂವಿಧಾನ ಹತ್ಯೆ ದಿನವನ್ನಾಗಿ ಆಚರಿಸುವ ಅಧಿಸೂಚನೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಪಿಐಎಲ್ ಅನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದೆ.
ಯಾವುದೇ ಸಂದರ್ಭದಲ್ಲೂ ಕೇಂದ್ರ ಸರ್ಕಾರದ ಸಂವಿಧಾನ ಹತ್ಯೆ ದಿನವನ್ನಾಗಿ ಆಚರಿಸುವ ಅಧಿಸೂಚನೆಯನ್ನು ಸಂವಿಧಾನಕ್ಕೆ ಅವಮಾನ ಎಂದು ಕರೆಯಲಾಗುವುದಿಲ್ಲ ಎಂದು ದೆಹಲಿ ಹೈಕೋರ್ಟ್ ತೀರ್ಪಿನಲ್ಲಿ ತಿಳಿಸಿದೆ.
1975ರಲ್ಲಿ ಅಂದಿನ ಕೇಂದ್ರದ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರವು ದೇಶದಲ್ಲಿ ಹೇರಿದ್ದ ತುರ್ತುಸ್ಥಿತಿಯಲ್ಲಿ ಪ್ರಾಣ ಕಳೆದುಕೊಂಡವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಜೂನ್ 25 ದಿನವನ್ನು ಸಂವಿಧಾನ ಹತ್ಯೆ ದಿನವನ್ನಾಗಿ ಆಚರಿಸಲು ಅಧಿಸೂಚನೆ ಹೊರಡಿಸಿತ್ತು. ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದವು.
