ನವಲಗುಂದ: ಸತತವಾಗಿ ಸುರಿದ ಮಳೆಯಿಂದ ಶಾನವಾಡ- ಹಾಳಕುಸುಗಲ್ಲ- ಬಳ್ಳೂರ ರಸ್ತೆ ಹಾಗೂ ಗುಡಿಸಾಗರ-ನಾಗನೂರ-ತಡಹಾಳ ರಸ್ತೆಗಳು ಸಾರ್ವಜನಿಕ ಸಂಪರ್ಕವೇ ಕಡಿತಗೊಂಡಿದ್ದು ಮಳೆ ನಿಂತ ತಕ್ಷಣವೇ ದುರಸ್ಥಿ ಮಾಡಿ ಸಂಚಾರಕ್ಕೆ ಅನುಕೂಲ ಮಾಡುತ್ತೇವೆ ಎಂದು ಶಾಸಕ ಎನ್.ಹೆಚ್. ಕೋನರಡ್ಡಿ ಹೇಳಿದರು.
ಅವರು ಶನಿವಾರ ದಿವಸ ಶ್ಯಾನವಾಡ-ಹಾಳಕುಸುಗಲ್ಲ-ಬಳ್ಳೂರ ಹಾಗೂ ಗುಡಿಸಾಗರ, ನಾಗನೂರ, ಸೊಟಕನಾಳ, ಕಡದಳ್ಳಿ ರಸ್ತೆಗಳನ್ನು ಅಧಿಕಾರಿಗಳೊಂದಿಗೆ ವೀಕ್ಷಣೆ ಮಾಡಿ ಮಾತನಾಡಿದ ಅವರು ಕಳೆದ 10 ದಿನಗಳಿಂದ ಸತತವಾಗಿ ಸುರಿದ ಮಳೆಯಿಂದ ಯರಿಮಣ್ಣಿನ ಪ್ರದೇಶವಾಗಿರುವದರಿಂದ ರಸ್ತೆಗಳು ಮಳೆಯಿಂದ ನೆನೆದು ಹಾಳಾಗಿ ಬಸ್ ಸಂಚಾರ ಹಾಗೂ ಸಾರ್ವಜನಿಕರಿಗೆ ಸಂಪರ್ಕ ಕಡಿತಗೊಂಡು ಶಾಲಾ ಮಕ್ಕಳಿಗೆ ತೊಂದರೆಯಾಗಿದೆ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜುಗಳಿಗೆ ಹೋಗಿ ಬರಲು ತಾತ್ಕಾಲಿಕವಾಗಿ ಖಾಸಗಿ ವಾಹನದ ವ್ಯವಸ್ಥೆ ಮಾಡಿದರು.
ರೈತರು ಬೆಳೆದ ಹೆಸರು ಮತ್ತು ಇತರೆ ಮಳೆಯಿಂದ ಬೆಳೆಗಳು ಹಳದಿ ಬಣ್ಣಕ್ಕೆ ತಿರುಗಿ ಹಾನಿಯಾಗುತ್ತಿವೆ. ಗ್ರಾಮಗಳಲ್ಲಿ ಅಲ್ಲಲ್ಲಿ ನೀರು ನಿಂತಿರುವದರಿಂದ ತೊಂದರೆಯಾಗಿದೆ ಈಗಾಗಲೇ ತಾಲ್ಲೂಕಿನಲ್ಲಿ 194ಮಿಲಿ ಮಿಟರ್ ಮಳೆಯಾಗಿದ್ದು ಅಲ್ಪ ಸ್ವಲ್ಪ ದುರಸ್ಥಿಮಾಡಿ ಮಳೆ ನಿಂತ ನಂತರ ರಸ್ತೆ ದುರಸ್ಥಿ ಕಾಮಗಾರಿಯನ್ನು ಕೈಗೊಳ್ಳಬೇಕು ಎಂದು ಲೋಕೋಪಯೋಗಿ ಹಾಗೂ ಸಂಬಂಧಸಿದ ಅಧಿಕಾರಿಗಳಿಗೆ ಸೂಚಿಸಿದರು.
ನವಲಗುಂದ ತಾಲ್ಲೂಕಿನ ಅರಭಾವಿ-ಚಳ್ಳಕೆರಿ ರಾ.ಹೆ-45ರ ಕಿ.ಮೀ 95.95 ರಿಂದ 97.00ರ ವರೆಗೆ ರಸ್ತೆ ಸುಧಾರಣೆ ಕಾಮಗಾರಿ ನರಗುಂದ ಶಲವಡಿ ರಸ್ತೆ ನಡುವೆ ಇರುವ ತಡಹಾಳ ಗ್ರಾಮದ ಹತ್ತಿರ ಸೇತುವೆ ಕೊಚ್ಚಿ ಹೋಗಿದ್ದು. ಗುಡಿಸಾಗರ-ನಾಗನೂರ- ಸೊಟಕನಾಳ-ಕಡದಳ್ಳಿ-ತಡಹಾಳ-ಕೊಂಗವಾಡ ಜಿ.ಮು.ರ ರಸ್ತೆಯ ಕಡದಳ್ಳಿ ಹಾಗೂ ಸೊಟಕನಾಳ ಗ್ರಾಮ ವ್ಯಾಪ್ತಿಯಲ್ಲಿ ರಸ್ತೆ ಸಂಪೂರ್ಣ ಹಾಳಾಗಿದ್ದು ಅಣ್ಣಿಗೇರಿ ತಾಲ್ಲೂಕಿನ ನವಲಗುಂದ-ಇಬ್ರಾಹಿಂಪೂರ-ನಾವಳ್ಳಿ-ತುಪ್ಪದಕುರಹಟ್ಟಿ ಜಿ.ಮು.ರ ರಸ್ತೆಯ ಮಳೆಯಿಂದ ಹಾಳಾದ ರಸ್ತೆ ಕಿತ್ತುಹೋಗಿದ್ದು ಅನುದಾನ ಬಿಡುಗಡೆ ಮಾಡಿಸಿ (ನಾವಳ್ಳಿ-ತುಪ್ಪದಕುರಹಟ್ಟಿ ಕ್ರಾಸ್ ವರೆಗೆ) ಕಾಮಗಾರಿ ಕೈಗೊಳ್ಳುವುದಾಗಿ ಕೋನರಡ್ಡಿ ಹೇಳಿದರು.
ಈ ಸಂದರ್ಭದಲ್ಲಿ ನವಲಗುಂದ ತಹಶೀಲ್ದಾರ ಸುಧೀರ ಸಾವಕಾರ, ಪಿ.ಡಬ್ಲು.ಡಿ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ, ಎಸ್.ಎನ್.ಸಿದ್ದಾಪೂರ, ಆರ್.ಡಬ್ಲು.ಎಸ್ ಸಹಾಯ ಕಾರ್ಯನಿರ್ವಾಹಕ ಇಂಜಿನಿಯರ, ಲಂಗೂಟಿ, ಪಿ.ಡಬ್ಲು.ಡಿ ಸಹಾಯಕ ಇಂಜಿನೀಯರ, ಎನ್.ಎಸ್. ಭರಡಿಶಟ್ಟರ, ತಾ.ಪಂ ಎ.ಡಿ ಜಗದೀಶ ಹಡಪದ, ಕೃಷಿ ಸಹಾಯಕ ನಿರ್ದೇಶಕ, ತಿಪ್ಪೇಸ್ವಾಮಿ ಬಿ. ನೀರು ಬಳಕೆದಾರರ ಸಂಘದ ಅಧ್ಯಕ್ಷ ಸದುಗೌಡ ಪಾಟೀಲ, ಮುಖಂಡರುಗಳಾದ ಲಕ್ಷ್ಮಣ ನಿಡವಣಿ, ಬಾಶುಸಾಬ ವಲ್ಲೆಪ್ಪನವರ, ಪ್ರಕಾಶ ತಿರ್ಲಾಪೂರ, ಕಲ್ಲಪ್ಪ ಹುಬ್ಬಳ್ಳಿ, ಬಾಬು ಚಾನಕೋಟಿ, ಹಸನಸಾಬ ಖುದ್ದಣ್ಣವರ, ನಿಂಗಪ್ಪ ಕಿರೆಸೂರ, ಶಿವಾನಂದ ತಿರ್ಲಾಪೂರ, ನಿಜಗುಣಿ ಗಡಾದ, ಸುರೇಶ ನಿಡವಣಿ, ಮಲ್ಲನಗೌಡ ಚನ್ನವೀರಗೌಡ್ರ, ಮಂಜುನಾಥ ವೀರಪ್ಪನವರ, ಸತೀಶ ಮಮಟಗೇರಿ, ನಿಂಗಪ್ಪ ಮರಿನಾಯ್ಕರ ಹಾಗೂ ಗ್ರಾಮಸ್ಥರು ಹಾಜರಿದ್ದರು.
