ನವದೆಹಲಿ: ದೇಶದ ಜನರು, ಅದರಲ್ಲೂ ಮಧ್ಯಮ ವರ್ಗದ ಜನರು ನರೇಂದ್ರ ಮೋದಿ ಅವರ ಮೇಲೆ ನಂಬಿಕೆಯಿಟ್ಟಿದ್ದರು. ಮೋದಿ ಅವರು ಹೇಳಿದಂತೆಲ್ಲ ಕೇಳುತ್ತಿದ್ದರು. ಆದರೆ, ಮೋದಿ ಅವರು ಬಜೆಟ್ ನಲ್ಲಿ ಮಧ್ಯಮವರ್ಗದ ಜನರ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಗುಡುಗಿದ್ದಾರೆ.
ಬಜೆಟ್ ಮೇಲಿನ ಚರ್ಚೆಯಲ್ಲಿ ಸುದೀರ್ಘ ಚರ್ಚೆ ಮಾಡಿದ ರಾಹುಲ್ ಗಾಂಧಿ, ದೇಶದಲ್ಲಿ ಶೇ. 76 ರಷ್ಟು ದಲಿತರು ಮತ್ತು ಹಿಂದುಳಿದ ವರ್ಗದ ಜನರಿದ್ದಾರೆ. ಅವರೆಲ್ಲ ಅಭಿವೃದ್ಧಿ ದೃಷ್ಟಿಯಿಂದ ಜಾತಿ ಗಣತಿ ನಡೆಸಿದರೆ, ಅವರ ಅಭಿವೃದ್ಧಿ ಗೆ ಪೂರಕವಾದ ಯೋಜನೆಗಳ ಜಾರಿ ಸಾಧ್ಯ. ಆದರೆ, ಬಿಜೆಪಿಗೆ ಜಾತಿಗಣತಿ ನಡೆಸುವ ಮನಸ್ಸಿಲ್ಲ ಎಂದಿದ್ದಾರೆ.
ಬಜೆಟ್ ನಲ್ಲಿ ಏನಿದು ಎಂದು ದೇಶದ ಜನ ಹುಡುಕಾಟ ನಡೆಸುತ್ತಿದ್ದಾರೆ. ಜನರಿಗೆ ಬೇಕಾದ ಯಾವ ಅಂಶಗಳು ಬಜೆಟ್ ನಲ್ಲಿ ಕಾಣುತ್ತಿಲ್ಲ. ಹೀಗಾಗಿ, ಜನ ಬೇಸತ್ತಿದ್ದಾರೆ. ದೇಶದ ಮಧ್ಯಮವರ್ಗದ ಜನತೆ ನರೇಂದ್ರ ಮೋದಿ ಅವರ ಪ್ರತಿ ಮಾತನ್ನು ನಂಬುತ್ತಿತ್ತು. ಇವರು ಹೇಲೀದಂತೆಲ್ಲ ಕೇಳುತ್ತಿತ್ತು. ಆದರೆ, ಮೋದಿ ಬಜೆಟ್ ಅವರ ಬೆನ್ನಿಗೆ ಚೂರಿ ಹಾಕಿದೆ ಎಂದು ಟೀಕಿಸಿದರು.
ಬಜೆಟ್ ನ ಪ್ರತಿ ಅಂಶವನ್ನು ಇಡಿಇಡಿಯಾಗಿ ವಿಶ್ಲೇಷಣೆ ಮಾಡಿ ಮಾತನಾಡಿದ ರಾಹುಲ್ ಗಾಂಧಿ ಸದನದ ಗಮನ ಸೆಳೆದರು. ಅನೇಕ ಸಲ ಬಿಜೆಪಿಯನ್ನು ತೀಕ್ಷ್ಣವಾಗಿ ತಿವಿಯುತ್ತಲೇ, ಬಜೆಟ್ ಮೇಲೆ ಚರ್ಚೆ ನಡೆಸಿದರು. ಬಜೆಟ್ ಅನುಷ್ಠಾನ ಕೂಡ ಬೇಕಾಬಿಟ್ಟಿ ಆಗುವುದನ್ನು ತಡೆಯಿರಿ ಎಂದು ಸಲಹೆ ನೀಡಿದರು.
