ಏಕದಿನ ಸರಣಿ ಆಡಲು ಶ್ರೀಲಂಕಾ ತಲುಪಿದ ಸ್ಟಾರ್ ಆಟಗಾರರು.
ಈಗಾಗಲೇ ಶ್ರೀಲಂಕಾದ ವಿರುದ್ಧದ ಮೂರು ಟಿ 20 ಪಂದ್ಯಗಳ ಸರಣಿಯಲ್ಲಿ ಎರಡು ಪಂದ್ಯಗಳು ಮುಗಿದಿದ್ದು, ಎರಡೂ ಪಂದ್ಯಗಳಲ್ಲೂ ಸಹ ಟೀಮ್ ಇಂಡಿಯಾದ ಯುವ ಪಡೆ ಗೆದ್ದು ಬೀಗಿದೆ. ಇನ್ನೊಂದು ಕೊನೆ ಪಂದ್ಯ ಉಳಿದಿದ್ದರೂ ಸಹ ಸರಣಿ ಟೀಮ್ ಇಂಡಿಯಾದ ಕೈ ವಶವಾಗಿದೆ.
ಈ ಬೆನ್ನಲ್ಲೇ ಶ್ರೀಲಂಕಾದ ವಿರುದ್ಧ ಏಕದಿನ ಸರಣಿಗೆ 15 ಜನರ ತಂಡವನ್ನು ಪ್ರಕಟಿಸಲಾಗಿತ್ತು, ಆ ಆಟಗಾರರ ಪೈಕಿ ಕೆಲವು ಆಟಗಾರರು ಈಗಾಗಲೇ ಟಿ 20 ಪಂದ್ಯವನ್ನು ಆಡುತ್ತಿದ್ದಾರೆ. ಇನ್ನು ಟಿ 20 ವಿಶ್ವ ಕಪ್ ಮುಗಿದ ಬಳಿಕ ನಾಯಕ ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬೂಮ್ರ ಶ್ರೀಲಂಕಾದ ವಿರುದ್ದದ ಸರಣಿಗೆ ವಿಶ್ರಾಂತಿ ಪಡೆಯುವುದಾಗಿ ಹೇಳಿದ್ದರು.
ಆದರೆ ಈಗ ನೇಮಕವಾಗಿರುವ ಟೀಮ್ ಇಂಡಿಯಾದ ಹೊಸ ಹೆಡ್ ಕೋಚ್ ಗೌತಮ್ ಗಂಭೀರ್ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ ಅವರನ್ನು ಸರಣಿ ಆಡುವುದಾಗಿ ಮನಹೋಲಿಸಿದ್ದರು. ಈಗಾಗಿ ಆಗಸ್ಟ್ 3ರಂದು ನಡೆಯಲಿರುವ ಮೊದಲ ಏಕದಿನ ಪಂದ್ಯಾವನ್ನು ಆಡಲು ನಾಯಕ ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್, ಶ್ರೇಯಸ್ ಐಯ್ಯರ್, ಕುಲ್ದೀಪ್ ಯಾದವ್, ಹರ್ಷಿತ್ ರಾಣ ಶ್ರೀಲಂಕಾದ ಕೋಲಂಬಿಯ ಮೈದಾನದಲ್ಲಿ ಅಭ್ಯಾಸ ಮಾಡುತ್ತಿರುವ ಫೋಟೋ ವೀಡಿಯೊಗಳು ಸೋಶಿಯಲ್ ಮೀಡಿಯಾದೆಲ್ಲೆಡೆ ವೈರಲ್ ಆಗುತ್ತಿವೆ.
ಏಕದಿನ ಸರಣಿಗೆ ಪ್ರಕಟವಾಗಿರುವಂತಹ ತಂಡ ಹೀಗಿದೆ.
ರೋಹಿತ್ ಶರ್ಮ (ನಾಯಕ ), ಶುಭ್ಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಕೆ. ಎಲ್ ರಾಹುಲ್, (ವಿಕೆಟ್ ಕೀಪರ್), ರಿಷಬ್ ಪಂತ್ (ವಿಕೆಟ್ ಕೀಪರ್), ಶ್ರೇಯಸ್ ಐಯ್ಯರ್, ಶಿವಂ ದುಬೆ, ರಿಯಾನ್ ಪರಾಗ್, ಅಕ್ಷರ್ ಪಟೇಲ್, ಕೂಲ್ದೀಪ್ ಯಾದವ್, ವಾಷಿಂಗ್ಟನ್ ಸುಂದರ್, ಮೊಹಮದ್ ಸಿರಾಜ್, ಅರ್ಶದೀಪ್ ಸಿಂಗ್, ಖಲೀಲ್ ಅಹಮದ್, ಹರ್ಷಿತ್ ರಾಣ,


