Actor Darshan: ಜೈಲಿನ ಊಟ ನಂಗೆ ಇಷ್ಟ ಆಯ್ತು, ದರ್ಶನ್ ಗೆ ಯಾಕ್ ಕಷ್ಟ ಆಗ್ತಿದೆ?
ಬೆಂಗಳೂರು : ಸದಾ ವಿವಾದದ ಹೇಳಿಕೆಯನ್ನು ಕೊಡುವುದರಲ್ಲೇ ಸುದ್ದಿಯಾಗುವ ನಟ ಅಹಿಂಸಾ ಚೇತನ್ ದರ್ಶನ್ ಬಗ್ಗೆ ಮಾತನಾಡಿದ್ದಾರೆ. ಅದರಲ್ಲೂ ದರ್ಶನ್ ಜೈಲಿನ ಊಟ ಸರಿ ಇಲ್ಲ ಎಂಬ ಮಾತಿಗೆ ಚೇತನ್ ಪ್ರತಿಕ್ರಿಯೆ ನೀಡಿದ್ದಾರೆ. ಚೇತನ್ ಸಹ ಎರಡು ಬಾರಿ ಜೈಲಿಗೆ ಹೋಗಿ ಬಂದಿರುವುದರಿಂದ ಈ ಬಗ್ಗೆ ಮಾತನಾಡಿದ್ದಾರೆ.
“ದರ್ಶನ ಒಳ್ಳೆಯ ನಟ. ಅವರನ್ನು ನಾನು ಅನೇಕ ಬಾರಿ ಭೇಟಿ ಮಾಡಿದ್ದೀನಿ. ಅವರ ಸಿನಿಮಾಗಳು ಕೋಟಿಯನ್ನು ಗಳಿಸುವ ಸಾಮರ್ಥ್ಯ ಹೊಂದಿವೆ. ಸಿನಿಮಾದಲ್ಲಿ ಇರುವ ನಡವಳಿಕೆ, ಆಲೋಚನೆ, ಪ್ರತಿಭೆ ಇವುಗಳು ಯಾವುದು ಲೆಕ್ಕಕ್ಕೆ ಬರುವುದಿಲ್ಲ. ದುಡ್ಡು ಇದ್ದಾರೆ ಸಾಕು. ಸುಮ್ಮನೆ ಪೊಲೀಸರು ಬಂಧಿಸಲು ಸಾದ್ಯವಿಲ್ಲ. ದರ್ಶನ್ ಇನ್ನು ಆರೋಪಿ ಅಷ್ಟೇ . ನೋಡೋಣ ಕೇಸ್ ಏನಾಗುತ್ತದೆ ಎಂದು ಚೇತನ್ ಹೇಳಿದ್ದಾರೆ.
ಯಾವುದೇ ಸ್ಟಾರ್ ನಟರು ತಮ್ಮ ಸಿನಿಮಾಗಳಿಗೆ ಸಂಭಾವನೆ ಪಡೆದುಕೊಳ್ಳುತ್ತಾರೆ. ಅವರ ಸ್ಮಾರಕವನ್ನು ಅವರೇ ಕಟ್ಟಿಕೊಳ್ಳಲಿ. ರೇಣುಕಾ ಸ್ವಾಮೀ ಅಶ್ಲೀಲವಾಗಿ ಮೆಸೇಜ್ ಮಾಡಿರುವುದನ್ನು ನಂಬುತ್ತೇವೆ. ಆದರೆ ದರ್ಶನ್ ಆರೋಪಿ ಎಂದು ನಂಬಲು ಸಾಧ್ಯವಿಲ್ಲ. ನಮ್ಮನ್ನು ನಾವು ಅವಲೋಕನ ಮಾಡಿಕೊಳ್ಳಬೇಕು ಎಂದರು.
ನಾನು ಹೋರಾಟದ ಮೇಲೆ ಎರಡು ಬಾರಿ ಜೈಲಿಗೆ ಹೋಗಿದ್ದೇನೆ. ನನಗೆ ಜೈಲಿನ ಊಟ ತುಂಬ ಇಷ್ಟವಾಗಿದೆ. ಯಾವುದೇ ತೊಂದರೆ ನನಗೆ ಆಗಿಲ್ಲ. ನನ್ನ 39ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದೇನೆ. ಅಂದು ಪೋಳಿಯೋಗರೆ ಮಾಡಿದ್ದರು. ದರ್ಶನ್ ಗೆ ಜೈಲಿನ ಊಟ ಯಾಕೆ ಅಡ್ಜಸ್ಟ ಆಗ್ತಿಲ್ಲ ಅಂತ ಗೊತ್ತಾಗುತ್ತಿಲ್ಲ ಎಂದು ಹೇಳಿದ್ದಾರೆ.


