ಸದ್ಯಕ್ಕೆ ಗ್ಲೇನ್ ಮಾಕ್ಸ್ವೆಲ್ ವಿಚಾರ ಎಲ್ಲಾ ಕಡೆ ಸದ್ದು ಮಾಡುತ್ತಿದೆ. ಏನಪ್ಪಾ ಅಂದ್ರೆ ಮ್ಯಾಕ್ಸ್ ವೆಲ್ ಇನ್‌ಸ್ಟಾ ಗ್ರಾಮ್‌ನಲ್ಲಿ ಆರ್‌ಸಿಬಿಯನ್ನ ಅನ್ ಫಾಲೋ ಮಾಡಿದ್ದಾರೆ ಎಂಬುದು ಆ ಸುದ್ದಿ. ನಿನ್ನೆ ನೆಡೆದ ಬಿಸಿಸಿಐ ಮತ್ತು ಪ್ರಾಂಚೈಸಿಗಳ ನಡುವಿನ ಸಭೆಯಲ್ಲಿ ಆಟಗಾರರ ರಿಟೈನ್ ಮಾಡಿಕೊಳ್ಳುವ ವಿಚಾರದಲ್ಲಿ ಮಾಕ್ಸ್ವೆಲ್ ಕೈ ಅವರಿಗೆ ಬೆಸರವಾಗಿದೆ ಎನ್ನಲಾಗಿದೆ.
ಆರ್‌ಸಿಬಿ ಎಂಟು ಆಟಗಾರರನ್ನು ರಿಟೈನ್ ಮಾಡಲು ನಿರ್ಧರಿಸಿದೆ. ಪ್ರಮುಖ ಆಟಗಾರರಾದ ವಿರಾಟ್ ಕೋಹ್ಲಿ, ರಜಿತ್ ಪಟಿದಾರ್, ಕ್ಯಾಮರನ್ ಗ್ರೀನ್ ಅಥವಾ ವಿಲ್ ಜಾಕ್ಸ್, ಬೌಲರ್ ಸಿರಾಜ್‌ನನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ. ಆರ್‌ಸಿಬಿ ಟೀಮ್ ಕಾಂಬೀನೇಷನ್ ಚಿಂತನೆಯಲ್ಲಿ ಗ್ಲೇನ್ ಮಾಕ್ಸ್ವೆಲ್ ಅವರಗೆ ಸ್ಥಾನವಿಲ್ಲ ಎಂಬುದು ಖಚಿತವಾಗಿದೆ.
ಆರ್‌ಸಿಬಿ ಕಡೆಯಿಂದಲೂ ಗ್ಲೇನ್ ಮಾಕ್ಸ್ವೆಲ್ ಅವರಿಗೆ ಸೂಚನೆ ನೀಡಲಾಗಿದೆ ಎಂಬುದು ತಿಳಿದುಬಂದಿದೆ. ಇದರ ಬೆನ್ನಲ್ಲೇ ಆರ್‌ಸಿಬಿಯನ್ನು ಅನ್ ಫಾಲೋ ಮಾಡಿದ್ದಾರೆ. ಆರ್ ಸಿಬಿಯಿಂದ ಮತ್ತೊಬ್ಬ ಸ್ಟಾರ್ ಆಟಗಾರ ಪಾಪ್ ಡುಪ್ಲೆಸ್ಸಿ ಅವರನ್ನು ಸಹ ಕೈ ಬಿಡುವ ನಿರ್ಧಾರ ಮಾಡಲಾಗಿದೆ ಎಂಬುದು ತಿಳಿದುಬಂದಿದೆ.