ಅಪ್ಪ ಮಕ್ಕಳ ವಿರುದ್ದವೇ ನನ್ನ ಹೋರಾಟ : ಶಾಸಕ ಯತ್ನಾಳ್
ಕುಮಾರ್ ಬಂಗಾರಪ್ಪನವರ ನಿವಾಸಕ್ಕೆ ಬಂದಿದ್ದ ರೆಬಲ್ ಶಾಸಕ ಯತ್ನಾಳ್ ಯಡಿಯೂರಪ್ಪ, ವಿಜಯೇಂದ್ರ ವಿರುದ್ದ ಗುಡುಗಿದರು. ಮಾಧ್ಯಮದವರೊಂದಿಗೆ ಮಾತಾನಾಡಿದ ವಿಜಯಪುರದ ಶಾಸಕ ಯತ್ನಾಳ್ ನಾವು ಯಾವುದೇ ಪಾದಯಾತ್ರೆಯಲ್ಲಿ ಭಾಗವಹಿಸುವುದಿಲ್ಲ ಎಂದು ನೇರವಾಗಿ ಹೇಳಿದರು.
ಮುಂದುವರೆದು ಪಕ್ಷದೊಳಗೆ ಅಪ್ಪ ಮಕ್ಕಳು ಮಾಡುತ್ತಿರುವ ಅನೈತಿಕ ಚಟುವಟಿಕೆಗಳ ವಿರುದ್ದ ಹೈಕಮಾಂಡ್‌ಗೆ ದೂರು ನೀಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು. ಬಿಜೆಪಿಯಲ್ಲಿ ಇಷ್ಟೊಂದು ಅಸಮಾಧಾನ ಇದೆ ಎಂದು ತಿಳಿದಿರಲಿಲ್ಲ ಎಂದು ಅಚ್ಚರಿ ಹೇಳಿಕೆಯನ್ನು ನೀಡಿದರು.
ಮುಡಾ ಹಗರಣದಲ್ಲಿ ಯಡಿಯೂರಪ್ಪನವರು ಸಹ ಭಾಗಿಯಾಗಿದ್ದಾರೆ. ಮತ್ತು ವಿಜಯೇಂದ್ರನ ಛೇಲಾಗಳು ಸಿಡಿ ಫ್ಯಾಕ್ಟರಿ ನೆಡೆಸುತ್ತಿದ್ದಾರೆ ಎಂದು ಆರೋಪಿಸಿದರು. ಇನ್ನು ಒಂದು ವಾರದಲ್ಲಿ ಪಕ್ಷದ ಸಮಾನ ಮನಸ್ಕರ ಸಭೆ ಕರೆದು ಅಪ್ಪ ಮಕ್ಕಳ ಪಕ್ಷದ್ರೋಹ ಕೆಲಸವನ್ನು ಹೈಕಮಾಂಡ್‌ಗೆ ತಿಳಿಸಬೇಕು ಎಂದು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.
ಕುಮಾರ್ ಬಂಗಾರಪ್ಪನವರ ನಿವಾಸದಲ್ಲಿ ಯತ್ನಾಳ್ ಜೊತೆ ರಮೇಶ್ ಜಾರಕಿಹೊಳೆ, ಪ್ರತಾಪ್ ಸಿಂಹ ಸಹ ಉಪಸ್ಥಿತಿ ಇದ್ದರು.


