ಐಟಿಐ, ಬಿಟೆಕ್, ಬಿಇ ಮುಗಿಸಿದವರಿಗೆ ಉದ್ಯೋಗಾವಕಾಶ!!

Share It

ಬೆಂಗಳೂರು : ಎಲೆಕ್ಟ್ರಾನಿಕ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ ಕಂಪನಿಯು ಐಟಿಐ, ಬಿಟೆಕ್ ಮತ್ತು ಬಿಇ ಮುಗಿಸಿದವರನ್ನು ಕೆಲಸಕ್ಕೆ ಅರ್ಜಿಯನ್ನು ಆಹ್ವಾನಿಸಿದೆ. ಉದ್ಯೋಗದಲ್ಲಿ ಪ್ರಾಜೆಕ್ಟ್ ಇಂಜಿನಿಯರಿಂಗ್ , ಟೆಕ್ನಿಕಲ್ ಆಫೀಸಸರ್ ಒಳಗೊಂಡಂತೆ ಒಟ್ಟು 115 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಕರೆಯಲಾಗಿದೆ. ದೇಶದ ಎಲ್ಲ ಕಡೆಗಳಲ್ಲೂ ಕೆಲಸ ಮಾಡುವ ಅಭ್ಯರ್ಥಿಗಳು ಆಗಸ್ಟ್ 8 ರೊಳಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ಕುರಿತಂತೆ ಹೆಚ್ಚಿನ ಮಾಹಿತಿ ಇಲ್ಲಿದೆ!

ಹುದ್ದೆಗಳ ವಿವರ ಮತ್ತು ಅರ್ಹತೆ:

ಪ್ರಾಜೆಕ್ಟ್ ಎಂಜಿನಿಯರ್ – 20 ಹುದ್ದೆಗಳು. ಅರ್ಹತೆ, ಬಿಇ ಅಥವಾ ಬಿಟೆಕ್.

ಟೆಕ್ನಿಕಲ್ ಆಫೀಸರ್ – 53 ಹುದ್ದೆಗಳು. ಅರ್ಹತೆ, ಬಿಇ ಅಥವಾ ಬಿಟೆಕ್.

ಜೂನಿಯರ್ ಟೆಕ್ನಿಷಿಯನ್- 42 ಹುದ್ದೆಗಳು. ಅರ್ಹತೆ, ಐಟಿಐ

ವಯಸ್ಸು

ಪ್ರಾಜೆಕ್ಟ್ ಎಂಜಿನಿಯರ್ ಗರಿಷ್ಠ 33 ವರ್ಷ.
ಟೆಕ್ನಿಕಲ್ ಆಫೀಸರ್ ಗರಿಷ್ಠ 33 ವರ್ಷ
ಜೂನಿಯರ್ ಟೆಕ್ನಿಷಿಯನ್ ಗರಿಷ್ಠ 30 ವರ್ಷ.
ಮೀಸಲಾತಿಗೆ ಅನುಗುಣವಾಗಿ ಒಬಿಸಿಗೆ 2 ವರ್ಷ, ಎಸ್ ಟಿ ಮತ್ತು ಎಸ್ ಸಿ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಪಿಡಬ್ಲ್ಯುಬಿಡಿ ಅವರಿಗೆ 10 ವರ್ಷ ಸಡಿಲಿಕೆ ಇದೆ.

ಅರ್ಜಿಗೆ ಯಾವುದೇ ಶುಲ್ಕ ಇರುವುದಿಲ್ಲ . ಸಂದರ್ಶನ ಹಾಗೂ ಅನುಭವ ಅರ್ಹತೆಯ ಮೇಲೆ ಆಯ್ಕೆ ಮಾಡಲಾಗುತ್ತದೆ.

ವೇತನ

40,000 – 55,000ಪ್ರಾಜೆಕ್ಟ್ ಎಂಜಿನಿಯರ್
25,000- 31,000 ಟೆಕ್ನಿಕಲ್ ಆಫೀಸರ್
22,412 – 27,258 ಜೂನಿಯರ್ ಟೆಕ್ನಿಷಿಯನ್

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ಕಿಸಿ

https://www.ecil.co.in/job_details_17_2024.php


Share It

You May Have Missed

You cannot copy content of this page