ಪೊಲೀಸರ ಕೈ ಸೇರಿದೆ ಎಫ್ ಎಸ್ಎಲ್ ವರದಿ: ಪ್ರಜ್ವಲ್ ರೇವಣ್ಣ ಪ್ರಕರಣದ ವಿಡಿಯೋಗಳೆಲ್ಲ ಅಸಲಿ
ಬೆಂಗಳೂರು: ಈಗಾಗಲೇ ಬಂಧನಕ್ಕೊಳಗಾಗಿರುವ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಹರಿದಾಡಿದ ವಿಡಿಯೋಗಳು ನಕಲಿಯಲ್ಲ, ಅಸಲಿ ಎಂದು ಎಫ್ ಎಸ್ ಎಲ್ ವರದಿಯಲ್ಲಿ ಬಹಿರಂಗಗೊಂಡಿದೆ.
ಅಧಿಕೃತ ಮೂಲಗಳ ಪ್ರಕಾರ ಎಫ್ ಎಸ್ ಎಲ್ ವರದಿ ಎಸ್ಐಟಿ ಅಧಿಕಾರಿಗಳ ಕೈಸೇರಿದ್ದು, ವಿಡಿಯೋಗಳು ಅಸಲಿಯಾಗಿದ್ದು, ಯಾವುದೇ ಮಾರ್ಪ್ ಮಾಡಿದ ಅಥವಾ ನಕಲಿ ವಿಡಿಯೋಗಳಲ್ಲ ಎಂದು ದೃಢಪಟ್ಟಿದೆ.
ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಬಂಧನ ಮಾಡಿದಾಗ, ಅವರ ಕುಟುಂಬ ಸದಸ್ಯರು ಹಾಗೂ ಬಿಜೆಪಿ ಮತ್ತು ಜೆಡಿಎಸದ ನಾಯಕರು ವಿಡಿಯೋ ನಕಲಿಯಾಗಿದ್ದು, ತೇಜೋವಧೆ ಮಾಡಲು ವಿಡಿಯೋ ಬಿಡುಗಡೆ ಮಾಡಲಾಗಿದೆ ಎಂದು ಆರೋಪಿಸಿದ್ದರು.
ತನಿಖೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳಿಗೆ ಇದೀಗ ವಿಡಿಯೋಗಳು ಅಸಲಿ ಎಂಬ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿದ್ದು, ವಿಡಿಯೋದಲ್ಲಿ ಇರುವ ವ್ಯಕ್ತಿ ಬಂಧನಕ್ಕೊಳಗಾಗಿರುವ ಪ್ರಜ್ವಲ್ ರೇವಣ್ಣನೇ ಎನ್ನುವ ಬಗ್ಗೆ ಅಧಿಕೃತವಾಗಬೇಕಿದೆ.


