ವಯನಾಡ್ ದುರಂತ:ತಜ್ಞರ ಅಭಿಪ್ರಾಯಕ್ಕೆ ಕೇರಳ ಸರಕಾರ ಕಡಿವಾಣ
ತಿರುವನಂತಪುರ: ಕೇರಳದ ವಯನಾಡ್ ದುರಂತದ ಬಗ್ಗೆ ತಜ್ಞರು ಸರಕಾರದ ಅನುಮತಿಯಿಲ್ಲದೆ ಯಾವುದೇ ಅಭಿಪ್ರಾಯ ಹಂಚಿಕೊಳ್ಳುವಂತಿಲ್ಲ ಎಂದು ಕೇರಳ ಸರಕಾರ ಆದೇಶ ನೀಡಿದೆ.
ಅನೇಕ ವಿಜ್ಞಾನಿಗಳು ವಯನಾಡಿನ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದಾರೆ ಮತ್ತು ಅದರ ಬಗ್ಗೆ ತಮಗೆ ತೋಚಿದ ಹೇಳಿಕೆ ನೀಡುತ್ತಿದ್ದಾರೆ. ಹೀಗಾಗಿ, ಯಾವುದೇ ವೈಜ್ಞಾನಿಕ ವರದಿಯನ್ನು ಸರಕಾರದ ಅನುಮತಿಯಿಲ್ಲದೆ ಹಂಚಿಕೊಳ್ಳುವಂತಿಲ್ಲ ಎಂದು ಆದೇಶ ನೀಡಿದೆ ಎಂದು ಮೂಲಗಳು ತಿಳಿಸಿವೆ.
ವಿಪತ್ತು ಪೀಡಿತ ಪ್ರದೇಶದಲ್ಲಿ ಯಾವುದೇ ಅಧ್ಯಯನವನ್ನು ಕೈಗೊಳ್ಳಬೇಕಾದರೆ, ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯಬೇಕಾಗುತ್ತದೆ ಎಂದು ಕೂಡ ಷರತ್ತು ವಿಧಿಸಲಾಗಿದೆ.
ಅನೇಕ ತಜ್ಞರು ಗುಡ್ಡವಕಿಅತದ ಕಾರಣಗಳನ್ನು ಬಿಚ್ಚಿಡುತ್ತಾ, ಸರಕಾರದ ನೀತಿಗಳು, ಅವೈಜ್ಞಾನಿಕ ವಸತಿ ಪ್ರದೇಶದ ಬೆಳವಣಿಗೆ ಮೊದಲಾದ ಕಾರಣಕ್ಕೆ ಇಂತಹ ವಿಪತ್ತು ಸಂಭವಿಸಿದೆ ಎಂದು ಹೇಳಿದ್ದರು. ಹೀಗಾಗಿ, ಕೇರಳ ಸರಕಾರ ಇಂತಹದ್ದೊಂದು ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.


