ಕ್ರೀಡೆ ಸುದ್ದಿ

ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಭಾರತ ತಂಡ ಕಪ್ಪು ಪಟ್ಟಿ ಧರಿಸಿದ್ದೇಕೆ ?

Share It

ಶುಕ್ರವಾರ ನೆಡೆದ ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾದ ಎಲ್ಲಾ ಆಟಗಾರರು ತಮ್ಮ ಕೈ ತೋಳುಗಳಿಗೆ ಕಪ್ಪು ಪಟ್ಟಿಯನ್ನು ಧರಿಸಿ ಆಟವಾಡಿದರು. ಇದಕ್ಕೆ ಕಾರಣವೇನೆಂದರೆ ಭಾರತದ ಮಾಜಿ ಕ್ರಿಕೆಟಿಗ ಅಂಶುಮನ್ ಗಾಯಕ್ವಡ್ ಇಹಲೋಕ ತ್ಯಜಿಸಿದ್ದು.

ಅಂಶುಮನ್ ಗಾಯಕ್ವಡ್ ಭಾರತ ತಂಡದ ಮಾಜಿ ಕ್ರಿಕೆಟಿಗ, ಮತ್ತು ಮಾಜಿ ಕೋಚ್ ಆಗಿ ಟೀಮ್ ಇಂಡಿಯಕ್ಕೆ ತಮ್ಮದೇ ಆದಂತಹ ಕೊಡುಗೆ ನೀಡಿದ್ದಾರೆ. ಇವರು 1970 ಮತ್ತು 1980 ರ ದಶಕದಲ್ಲಿ ಭಾರತದ ಪರ ಆಟವದಿದ್ದರು. ಈ ಸಮಯದಲ್ಲಿ ಇವರು ಆಡಿರುವ ಬರೋಬ್ಬರಿ 40 ಟೆಸ್ಟ್ ಪಂದ್ಯಗಳಲ್ಲಿ 30ರ ಸರಾಸರಿಯಲ್ಲಿ 1985 ರನ್ ಗಳಿಸಿದ್ದಾರೆ ಇದರಲ್ಲಿ 2 ಶತಕಗಳು ಒಂದು ದ್ವಿಶತಕ ಮತ್ತು 10 ಅರ್ಥ ಶತಕ ಬಾರಿಸಿದ್ದಾರೆ.

ಇದಲ್ಲದೆ ಗಾಯಕ್ವಡ್ ಅವರು 1982-83 ರಲ್ಲಿ ಪಾಕಿಸ್ತಾನದ ವಿರುದ್ಧ ನೆಡೆದ ಟೆಸ್ಟ್ ಪಂದ್ಯವೊಂದರಲ್ಲಿ ಬರೋಬ್ಬರಿ 201ರನ್ ಗಳ ದ್ವಿಶತಕ ಬಾರಿಸುವುದರ ದಾಖಲೆ ಸೃಷ್ಟಿಸಿದ್ದರು.ನಂತರ1997 ರಿಂದ 2000 ರ ವರೆಗೆ ಟೀಮ್ ಇಂಡಿಯಾದ ಕೋಚ್ ಆಗಿಯೂ ಸಹ ಕಾರ್ಯನಿರ್ವಹಿಸಿದ್ದಾರೆ.

ಜುಲೈ 31 ರಂದು ಗಾಯಕ್ವಡ್ ರವರು ಬ್ಲಡ್ ಕ್ಯಾನ್ಸರ್ ನಿಂದ ನಿರಂತರವಾಗಿ ಹೋರಾಡಿ ಇಹಲೋಕ ತ್ಯಜಿಸಿದರು. ಈ ಕಾರಣದಿಂದ ಟೀಮ್ ಇಂಡಿಯಾದ ಎಲ್ಲಾ ಆಟಗಾರರು ಗಾಯಕ್ವಡ್ ಅವರಿಗೆ ನಮನ ಸಲ್ಲಿಸುವ ಸಲುವಾಗಿ ತಮ್ಮ ಕೈ ತೋಳುಗಳಿಗೆ ಕಪ್ಪು ಪಟ್ಟಿ ಧರಿಸಿ ಶ್ರೀಲಂಕಾ ವಿರುದ್ಧದ ಕಳೆದ ಏಕದಿನ ಪಂದ್ಯದಲ್ಲಿ ಆಟವಾಡಿದರು.


Share It

You cannot copy content of this page