ಸಿನಿಮಾ ಸುದ್ದಿ

ಶ್ರೇಷ್ಠ ನರ್ತಕಿ ಯಾಮಿನಿ ಕೃಷ್ಣ ಮೂರ್ತಿ ಇನ್ನಿಲ್ಲ !!!

Share It

ನವ ದೆಹಲಿ : ಭಾರತದ ಶ್ರೇಷ್ಠ ಪದ್ಮ ವಿಭೂಷಣ ಪುರಸ್ಕೃತ ಯಾಮಿನಿ ಕೃಷ್ಣ ಮೂರ್ತಿಯವರು ಶನಿವಾರ (ಅಗಸ್ಟ್ ೩) ರಂದು ವಯೋ ಸಹಜವಾಗಿ ಮೃತ ಪಟ್ಟಿದ್ದಾರೆ. 84 ವರ್ಷದ ಯಾಮಿನಿ ಯವರು ದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿ ಕಳೆದ 7 ತಿಂಗಳಿನಿಂದಲೂ ಐಸಿಯು ನಲ್ಲಿ ಇದ್ದುಕೊಂಡು ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ ವಯೋ ಸಹಜ ಖಾಯಿಲೆ ಇದ್ದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ಯಾಮಿನಿ ಕೃಷ್ಣ ಮೂರ್ತಿಯವರು ಮೆನೇಜರ್ ಪಿಟಿಐ ಗೆ ಮಾಹಿತಿ ನೀಡಿದ್ದಾರೆ.

ಸದ್ಯಕ್ಕೆ ಬಂದಿರು ಮಾಹಿತಿಯ ಪ್ರಕಾರ ನಾಳೆ ಬೆಳಗ್ಗೆ (ಭಾನುವಾರ) 9 ಗಂಟೆಗೆ ಅವರ ಯಾಮಿನಿ ಸ್ಕೂಲ್ ಆಫ್ ಡಾನ್ಸ್ ಇನ್‌ಸ್ಟಿಟ್ಯೂಟ್‌ಗೆ ಕೃಷ್ಣ ಮೂರ್ತಿಯವರು ಪಾರ್ಥೀವ ಶರೀರವನ್ನು ತರಲಾಗುತ್ತದೆ. ಅಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಲಾಗಿದೆ ಎಂದು ಹೇಳಲಾಗಿದೆ.

ಯಾಮಿನಿ ಕೃಷ್ಣ ಮೂರ್ತಿಯವರು ನಿಧನಕ್ಕೆ ಹಲವಾರು ಸಂತಾಪ ಸೂಚಿಸಿದ್ದಾರೆ. “ಆಂಧ್ರ ಪ್ರದೇಶದವರಾದ ಕೃಷ್ಣ ಮೂರ್ತಿಯವರಿಗೆ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಹಾಗೂ ಅವರ ಸಹ ಚರರು ದುಃಖ ವ್ಯಕ್ತ ಪಡಿಸಿದ್ದಾರೆ. ಭರತ ನಾಟ್ಯ ದ ಜೊತೆಗೆ ಕೂಚಿಪಡಿಯಲ್ಲೂ ತನ್ನ ಛಾಪನ್ನು ಮೂಡಿಸಿರುವ ಕಾಮಿನಿ ಸಾವು ದುಃಖ ತಂದಿದೆ” ಎಂದು ಪೋಸ್ಟ್ ಮಾಡಿದ್ದಾರೆ. ಹಾಗೇ ಕೇಂದ್ರ ಸಾಂಸ್ಕೃತಿಕ ಸಚಿವಾಲಯದ ಸಂಗೀತ ನಾಟಕ ಅಕಾಡೆಮಿ ಕೂಡ ಸಂತಾಪ ವ್ಯಕ್ತಪಡಿಸಿದೆ.

ಇವರ ಅಭೂತ ಪೂರ್ವ ಕಲೆಗೆ 1968 ರಲ್ಲಿ ಪದ್ಮಶ್ರೀ ಪ್ರಶಸ್ತಿ, 2001 ರಲ್ಲಿ ಪದ್ಮಭೂಷಣ ಹಾಗೂ 2016 1968ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿಯನ್ನು ಮೂಡಿಗೇರಿಸಿಕೊಂಡರು. ಇವರು ಎ ಪ್ಯಾಷನ್ ಫಾರ್ ಡಾನ್ಸ್ ಎಂಬ ಪುಸ್ತಕವನ್ನು ಬರೆದಿದ್ದಾರೆ. ತಿರುಪತಿ ತಿಮ್ಮಪ್ಪನ ಆಸ್ಥಾನ ನರ್ತಕಿಯಾಗಿ ಗುರುತಿಸಿ ಕೊಂಡಿದ್ದಾರೆ. ತಮ್ಮ ನೃತ್ಯ ಶಾಲೆಯ ಮೂಲಕ ಸಾವಿರಾರು ಮಕ್ಕಳಿಗೆ ಮಾರ್ಗದರ್ಶನ ಮಾಡಿದ್ದಾರೆ.


Share It

You cannot copy content of this page