ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ
ದೆಹಲಿ: ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸಿ ಸಂತಸ ವ್ಯಕ್ತಪಡಿಸಿದರು. ಜನತೆಗೆ ಈ ಸೌಲಭ್ಯವು ಹೇಗೆ ಸಹಾಯವಾಗುತ್ತಿದೆ ಎಂದು ಮಾಹಿತಿ ಪಡೆದಿದ್ದೇನೆ ಎಂದು ತಿಳಿಸಿದರು.
1996 ರಿಂದ 1997 ರ ವರೆಗೆ ನಾನು ದೇಶದ ಪ್ರಧಾನಿಯಾಗಿದ್ದೆ. ಆಗಿನ ದೆಹಲಿ ಮುಖ್ಯಮಂತ್ರಿ, ಲಿಫ್ಟಿನೆಂಟ್ ಗವರ್ನರ್, ಹಾಗೂ ಕೇಂದ್ರ ಸರ್ಕಾರದ ನೆರವಿನಿಂದ ಯೋಜನೆಗೆ ಚಾಲನೆ ನೀಡಲಾಗಿತ್ತು ಎಂದು ತಿಳಿಸಿದರು.
ಈಗ ಪ್ರತಿನಿತ್ಯ 65 ಲಕ್ಷ ಜನರು ಸಂಚರಿಸುತ್ತಿದ್ದಾರೆ. ಸರ್ಕಾರದ ನೆರೆವಿನಂದ ಮೆಟ್ರೋ ಮಾರ್ಗವು ಇನ್ನಷ್ಟು ವಿಸ್ತರಣೆಯಾಗಲಿ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಹಲವು ವರ್ಷಗಳಿಂದ ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸಬೇಕೆಂಬುದು ನನ್ನ ಆಸೆಯಾಗಿತ್ತು. ಅದು ಇಂದು ನೆರವೇರಿತು.
ನಾನು 19996 ರಲ್ಲಿ ಪ್ರಧಾನ ಮಂತ್ರಿಯಾಗಿ ನನ್ನ ಕ್ಯಾಬಿನೆಟ್ ಮತ್ತು ಹೊರಗಿನ ಪ್ರತಿರೋಧದ ನಡುವೆ ಯೋಜನೆಗೆ ಆರ್ಥಿಕ ನೆರವು ನೀಡಿದ್ದೆ. ಮುಂದೆ ಹೋಗಲು ದೇವರು ನನಗೆ ಧೈರ್ಯ ಕೊಟ್ಟಿದ್ದಕ್ಕೆ ನನಗೆ ಸಂತೋಷವಾಗಿದೆ. ಇದು ಜನರಿಗೆ ಸಹಾಯ ಮಾಡಿದೆ ಎಂದು ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.


