ಅಪರಾಧ ಸುದ್ದಿ

ಹೆತ್ತ ತಾಯಿಯನ್ನೇ ತಲೆ ಹೊಡೆದು ಕೊಂದ ಪಾಪಿ ಮಗ

Share It

ಬೆಳಗಾವಿ: ಬೈಲಹೊಂಗಲ ತಾಲೂಕು ಉಡಿಕೇರಿ ಗ್ರಾಮದಲ್ಲಿ ಶನಿವಾರ ರಾತ್ರಿ ಸಾರಾಯಿ ಕುಡಿದ ಅಮಲಿನಲ್ಲಿ ಹೆತ್ತ ತಾಯಿಯನ್ನೇ ಮಗ ಕೊಲೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.

ಮಹಾದೇವಿ ಗುರಪ್ಪ ತೋಲಗಿ (70) ಕೊಲೆಯಾದವರು. ಈರಣ್ಣ ಗುರಪ್ಪ ತೋಲಗಿ(34) ಕೊಲೆಗೈದ ಆರೋಪಿ. ಜಮೀನು ವಿಚಾರವಾಗಿ ಮಗ ಪ್ರತಿದಿನ ಸಾರಾಯಿ ಕುಡಿದು ಬಂದು ತಾಯಿಯೊಂದಿಗೆ ಜಗಳ ಮಾಡುತ್ತಿದ್ದ.

ಶನಿವಾರ ರಾತ್ರಿ ಇದೇ ವಿಚಾರಕ್ಕೆ ಗಲಾಟೆ ಮಾಡಿ ಮನೆಯಲ್ಲಿ ನೀರು ಕಾಯಿಸುವ ಒಲೆಯಲ್ಲಿದ್ದ ಅರ್ಧ ಸುಟ್ಟಿದ್ದ ಕಟ್ಟಿಗೆ ತೆಗೆದು ತಾಯಿಯ ತಲೆಗೆ ಹೊಡೆದಿದ್ದಾನೆ. ಗಂಭೀರ ಗಾಯಗೊಂಡ ತಾಯಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ದೊಡವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share It

You cannot copy content of this page