ಜುಲೈ 26 ರಿಂದ ಪ್ರಾರಂಭವಾದ ಪ್ಯಾರೀಸ್ ಒಲಂಪಿಕ್ಸ್ನಲ್ಲಿ ಭಾರತ ಇದುವರೆಗೆ ಕೇವಲ 3 ಪದಕಗಳನ್ನು ಗೆದ್ದಿದೆ. ಈಗಾಗಲೇ ಭಾಗಶಃ ಕ್ರೀಡೆಗಳು ಮುಗಿದಿರುವುದರಿಂದ ಭಾರತಕ್ಕೆ ಚಿನ್ನದ ಪದಕದ ಭರವಸೆಯಾಗಿ ಉಳಿದಿರುವುದು ನೀರಜ್ ಚೋಪ್ರಾ ಮಾತ್ರ.

ಹೀಗಾಗಿ ಪ್ಯಾರೀಸ್ ಒಲಂಪಿಕ್ಸ್ನಲ್ಲಿ ನೀರಜ್ ಚೋಪ್ರಾ ಸ್ಪರ್ಧೆ ಯಾವಾಗ ನೆಡೆಯಲಿದೆ ಎಂಬ ಕುತೂಹಲ ಎಲ್ಲರಿಗೂ ಇದೆ. ಆಗಸ್ಟ್ ೬ ರಂದು ಮಧ್ಯಾಹ್ನ1.50 ಕ್ಕೆ ಆರಂಭವಾಗಲಿರುವ ಗ್ರೊಪ್-ಎ ಅರ್ಹತಾ ಪಂದ್ಯಗಳಲ್ಲಿ ನೀರಜ್ ಚೋಪ್ರಾ ತಮ್ಮ ಮೊದಲ ಪಂದ್ಯವನ್ನು ಆಡಲಿದ್ದಾರೆ.
ಅದೆ ದಿನ ಗ್ರೊಪ್-ಬಿ ಅರ್ಹತಾ ಸುತ್ತಿನ ಪಂದ್ಯಗಳು ಮಧ್ಯಾಹ್ನ 3.20 ಕ್ಕೆ ಆರಂಭವಾಗಲಿವೆ. ನೀರಜ್ ಚೋಪ್ರಾ ಫೈನಲ್ ತಲುಪಲು ಅರ್ಹತಾ ಸುತ್ತಿನಲ್ಲಿ ಗೆಲ್ಲಲೇಬೇಕು. ಆಗಸ್ಟ್ 8 ರಂದು ನೆಡೆಯುವ ಜಾವೆಲಿನ್ ಎಸೆತದ ಫೈನಲ್ ಪಂದ್ಯದಲ್ಲಿ ಚಿನ್ನದ ಪದಕದ ನಿರೀಕ್ಷೆ ನಿರ್ಧಾರವಾಗಲಿದೆ.