ಸುದ್ದಿ

ಕನ್ನಡರಥಕ್ಕೆ ಹೊಸಕೋಟೆಯಲ್ಲಿ ಅದ್ಧೂರಿ ಸ್ವಾಗತ

Share It

ಸುವರ್ಣ ವರ್ಷಾಚರಣೆಗೆ ‘ಹೆಸರಾಯಿತು ಕನ್ನಡ-ಉಸಿರಾಗಲಿ ಕನ್ನಡ’ ರಥಯಾತ್ರೆ

ಹೊಸಕೋಟೆ : ಕರ್ನಾಟಕ ರಾಜ್ಯವೆಂದು ನಾಮಕರಣಗೊಂಡು 50ನೇ ವರ್ಷದ ಹೊಸ್ತಿಲಲ್ಲಿರುವ ಕಾರಣ ಸುವರ್ಣ ವರ್ಷಾಚರಣೆ ಹೆಸರಿನಲ್ಲಿ ‘ಹೆಸರಾಯಿತು ಕನ್ನಡ-ಉಸಿರಾಗಲಿ ಕನ್ನಡ’ ಎಂದು ರಾಜ್ಯಾದ್ಯಂತ ರಥಯಾತ್ರೆ ಮಾಡಲಾಗುತ್ತಿದೆ ಎಂದು ಕಸಾಪ ತಾಲೂಕು ಅಧ್ಯಕ್ಷ ರಾಜಾ ಆರ್ಟ್ ಮುನಿರಾಜು ಹೇಳಿದರು.

ನಗರದಲ್ಲಿ ರಥಯಾತ್ರೆ ವೇಳೆ ಮಾತನಾಡಿ, ಮೈಸೂರು ರಾಜ್ಯ ಕರ್ನಾಟಕ ಎಂದು ಮರು ನಾಮಕರಣವಾಗಿ 2023ರ ನವೆಂಬ‌ರ್ 1ಕ್ಕೆ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸರ್ಕಾರದ ವತಿಯಿಂದ ‘ಹೆಸರಾ ಯಿತು ಕರ್ನಾಟಕ-ಉಸಿರಾಗಲಿ ಕನ್ನಡ’ ಎಂಬ ಹೆಸರಿನಲ್ಲಿ ವರ್ಷ ಪೂರ್ತಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಕರ್ನಾಟಕದ ಇತಿಹಾಸ, ಕ ಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ನಾಡು ನುಡಿಗೆ ಸಂಬಂಧಿಸಿದಂತೆ ಯು ವಜನತೆಯಲ್ಲಿ ಕನ್ನಡ ನಾಡಿನ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬ ಕನ್ನಡಿಗರು ಪಾಲ್ಗೊಳ್ಳಬೇಕು ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾ ನಿರ್ದೇಶಕ ರವಿಕುಮಾರ್ ಮಾತನಾಡಿ, ಸರ್ಕಾರದ ಆದೇಶದನ್ವಯ ರಥವು ರಾಜ್ಯಾದ್ಯಂತ ಸಂಚಾರ ಮಾಡಲಿದ್ದು ಕನ್ನಡ ನಾಡಿನ ಜಾಗೃತಿ ಮೂಡಿಸಲಿದೆ ಎಂದು ಹೇಳಿದರು. ಕೋಲಾರ ಜಿಲ್ಲೆ, ಮಾಲೂರಿನಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಗೆ ರಥ ಆಗಮಿಸಿದ ಸಂದರ್ಭದಲ್ಲಿ ಜಡಿಗೇನಹಳ್ಳಿ ಹೋಬಳಿಯ ಕಟ್ಟಿಗೆನಹಳ್ಳಿ ಗಡಿಯಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು.

ಬಿಎಂಆರ್‌ಡಿಎ ಸದಸ್ಯ ಎಚ್.ಎಂ.ಸುಬ್ಬರಾಜು, ಕಸಾಪ ಜಿಲ್ಲಾ ಪ್ರತಿನಿಧಿ ಜಿ.ಶ್ರೀನಿವಾಸ್, ನಿವೃತ ರಾಜಸ್ವ ನಿರೀಕ್ಷಕ ಎನ್. ವೆಂಕಟರಾಮಪ್ಪ, ಕಸಾಪ ಪ್ರತಿನಿಧಿ ಸತ್ಯವಾರ ಲಕ್ಷ್ಮೀಶ, ಮುಖಂಡರಾದ ಗುಟ್ಟಳ್ಳಿ ನಾಗರಾಜ್, ತಾಲೂಕು ಆಡಳಿತದ ಎಲ್ಲಾ ಅಧಿಕಾರಿ ವರ್ಗ ಹಾಜರಿದ್ದರು.


Share It

You cannot copy content of this page