ರಾಜಕೀಯ ಸುದ್ದಿ

ಆಧುನಿಕ ತಂತ್ರಜ್ಞಾನ ಗುಣಮಟ್ಟದ ಶಿಕ್ಷಣಕ್ಕೆ ಸಹಕಾರಿ ಶರತ್ ಬಚ್ಚೇಗೌಡ

Share It

ಹೊಸಕೋಟೆ : ಆಧುನಿಕ ತಂತ್ರಜ್ಞಾನವನ್ನು ಶಿಕ್ಷಣ ಕ್ಷೇತ್ರದಲ್ಲಿ ಆಳವಡಿಸಿಕೊಳ್ಳುವುದರಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಹಕಾರಿಯಾಗಲಿದೆ. ಬದಲಾಗುತ್ತಿರುವ ವ್ಯವಸ್ಥೆಗೆ ತಕ್ಕಂತೆ ಶಿಕ್ಷಣ ಕ್ಷೇತ್ರದಲ್ಲಿ ಡಿಜಿಟಲ್ ಅವಶ್ಯಕವಾಗಿದೆ. ತಾಲೂಕಿನಲ್ಲಿ 120 ಸರಕಾರಿ ಶಾಲೆಗಳಲ್ಲಿ ಡಿಜಿಟಲ್ ತಂತ್ರಜ್ಞಾನದ ಅಡಿ ಕಲಿಕೆಗೆ ಶಿಕ್ಷಣ ಫೌಂಡೇಷನ್ ಹಾಗೂ ಬ್ರಿಲಿಯೊ ಸಂಸ್ಥೆ ಮುಂದಾಗಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ನಗರದ ಜಿಕೆಬಿಎಂಎಸ್ ಶಾಲೆಯಲ್ಲಿ ಶಿಕ್ಷಣ ಫೌಂಡೇಷನ್ ಹಾಗೂ ಬ್ರಿಲಿಯೊ ಸಂಸ್ಥೆ ವತಿಯಿಂದ ತಾಲೂಕಿನ 120 ಶಾಲೆಯ ಶಿಕ್ಷಕರಿಗೆ ಹಾಗೂ ವಿಧ್ಯಾರ್ಥಿಗಳಿಗೆ ಡಿಜಿಟಲ್ ಸ್ಕಿಲ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕಟ್ಟಡಕ್ಕೆ ಹೇಗೆ ಅಡಿಪಾಯ ಮುಖ್ಯವೋ ಹಾಗೇ ಪ್ರಾಥಮಿಕ ಶಾಲೆ ಶಿಕ್ಷಣ ಹಂತದಲ್ಲೂ ಮಕ್ಕಳ ಕಲಿಕೆಗೆ ಉತ್ತಮ ಕಲಿಕಾ ಅಡಿಪಾಯ ಮುಖ್ಯ. ಮಕ್ಕಳ ಕಲಿಕೆಯಲ್ಲಿ ಹಿಂದುಳಿಯಲು ಕಾರಣಗಳಿದ್ದರೂ ಕಲಿಕೆಗೆ ಪೂರಕ ವಾಗಿರುವ ವ್ಯವಸ್ಥೆ ಮಾಡಿಕೊಡುವುದರಿಂದ ಕಲಿಕೆಯಲ್ಲಿ ಸುಧಾರಣೆ ಹೊಂದಲು ಸಾಧ್ಯವಾಗಲಿದೆ. 4ನೇ ತರಗತಿಯಿಂದ ಡಿಜಿಟಲ್ ತಂತ್ರಜ್ಞಾನ ಅಳವಡಿಸಿಕೊಳ್ಳುವುದರಿಂದ ಉತ್ತಮ ಗುಣಾತ್ಮಕ ಶಿಕ್ಷಣ ಮಕ್ಕಳಿಗೆ ದೊರೆತು ಉತ್ತಮ ಫಲಿತಾಂಶದ ಜತೆ ಮುಂದಿನ ಕಾಲೇಜು ವಿದ್ಯಾಭ್ಯಾಸಕ್ಕೆ ಡಿಜಿಟಲ್ ವ್ಯವಸ್ಥೆಗೆ ಪರಿಪೂರ್ಣತೆ ಹೊಂದಿರುತ್ತಾರೆ.

ತಾಲೂಕಿನಲ್ಲಿ ಡಿಜಿಟಲ್ ಸ್ಕಿಲ್ ಕಲಿಕಾ ವಿಧಾನ ಆಳವಡಿಕೆಗೆ ಪ್ರಾಯೋಗಿಕವಾಗಿ 120 ಶಾಲೆಗಳನ್ನು ಆಯ್ಕೆ ಮಾಡಲಾಗಿದೆ. 2012ರಲ್ಲಿ ಶಿಕ್ಷಣ ಫೌಂಡೇಷನ್ ತಾಲೂಕಿನಲ್ಲಿ ಪ್ರೇರಣಾ ಕಾರ್ಯಕ್ರಮ ಯಶಸ್ವಿಯಾಗಿ ಮಾಡಿದ್ದರ ಪರಿಣಾಮ ಸರಕಾರ ರಾಜ್ಯಾ ದ್ಯಂತ ಈ ಕ್ರಮವನ್ನು ಎಲ್ಲ ಸರಕಾರಿ ಶಾಲೆಗಳಲ್ಲಿ ಆಳವಡಿಸಿತ್ತು. ಡಿಜಿಟಲ್ ಹೊಸ ಪ್ರಯತ್ನವನ್ನು ತಾಲೂಕಿನಲ್ಲಿ ಪ್ರಾಯೋಗಿ ಕವಾಗಿ ಮಾಡಲಾಗುತ್ತಿದ್ದು, ಯಶಸ್ವಿಗೊಳಿಸೋಣ ಎಂದರು.

ಶಿಕ್ಷಣ ಫೌಂಡೇಷನ್ ಸಿಇಒ ಪ್ರಸನ್ನ ಒಡೆಯರ್ ಮಾತನಾಡಿ, ಮಕ್ಕಳಿಗೆ ಸರಳ ಪದ್ಧತಿಯಲ್ಲಿ ಮನ ಮುಟ್ಟುವಂತಹ ಶಿಕ್ಷಣದ ಆಗತ್ಯವಿದ್ದು, ಡಿಜಿಟಲ್ ಕಲಿಕಾ ವಿಧಾನವನ್ನು ಅನಾವರಣ ಮಾಡಲಾಗುತ್ತಿದೆ. ಇದರ ಜತೆಗೆ ಮುಂದಿನ ದಿನಗಳಲ್ಲಿ ಎಐ (ಆರ್ಟಿಪಿಷಿ ಯಲ್ ಇಂಟಲಿಜನ್ಸ್) ಪದ್ಧತಿ ಅಳವಡಿಕೆಗೆ ಈಗಾಗಲೆ ಶಿಕ್ಷಕರ ಆಯ್ಕೆ ಪ್ರಕ್ರಿಯೆ ಶುರು ವಾಗಿದ್ದು, ರಾಜ್ಯಾದ್ಯಂತ ಒಂದು ಸಾವಿರಶಿಕ್ಷಕರನ್ನು ತರಬೇತಿಗೆ ಆಯ್ಕೆ ಮಾಡಲಾಗಿದೆ. ಹೊಸಕೋಟೆ ತಾಲೂಕಿನ ಶಾಲಾ ಶಿಕ್ಷಕರೂ ಆಯ್ಕೆಯಾಗಿದ್ದು, ಮುಂದಿನ ದಿನಗಳಲ್ಲಿ ಮಕ್ಕಳು ಶಾಲಾ ಸಮಯದ ನಂತರ ಯಾರ ಸಹಾಯವಿಲ್ಲದೆ ఎఐ ಪದ್ಧತಿಯಲ್ಲಿ ಕಲಿಕೆಯನ್ನು ಮುಂದುವರಿಸಬಹುದಾಗಿದೆ ಎಂದರು.

ಬ್ರಿಲಿಯೊ ಸಂಸ್ಥೆಯ ಮುಖ್ಯಸ್ಥ ಅಭಿಷೇಕ್ ರಂಜನ್ ಮಾತನಾಡಿ, ನಮ್ಮಸಂಸ್ಥೆ 10 ಸಾವಿರ ಸರಕಾರಿ ಶಾಲಾ ಮಕ್ಕಳ ಭವಿಷ್ಯ ಉತ್ತಮಗೊಳಿಸುವ ನಿಟ್ಟಿನಲ್ಲಿ ಕಾರ್ಯ ಮಾಡುತ್ತಿದ್ದು, 2030ನೇ ಇಸವಿ ವೇಳೆಗೆ 20 ಲಕ್ಷ ಮಕ್ಕಳ ಭವಿಷ್ಯ ಉಜ್ವಲಗೊಳಿಸುವ ಗುರಿ ಹೊಂದಲಾಗಿದೆ ಎಂದರು.

ಇದೇ ಸಮಯದಲ್ಲಿ ಮಕ್ಕಳಿಗೆ ಡಿಜಿಟಲ್ ಕಲಿಕಾ ಪುಸ್ತಕ ವಿತರಿಸಲಾಯಿತು. ಬಿಇಒ ಪದ್ಮನಾಭ್, ಶಾಲಾ ಅಭಿವೃದ್ಧಿ ಸಂಸ್ಥೆ ಗೌರವಾಧ್ಯಕ್ಷ ಡಿ.ಎಸ್ ರಾಜ್ ಕುಮಾರ್, ಟಿಎಪಿಸಿಎಂಎಸ್ ಅಧ್ಯಕ್ಷ ಬಾಬು ರೆಡ್ಡಿ, ರೋಟರಿ ಅಧ್ಯಕ್ಷ ಮುನಿರಾಜ್, ಜಿಪಂ ಮಾಜಿ ಅಧ್ಯಕ್ಷ ಸಿ.ಮುನಿಯಪ್ಪ, ಮುಖಂಡ ರಾದ ವಿಜಯ್ ಕುಮಾರ್, ನಿಸಾರ್ ಅಹ ಮದ್, ಅಬ್ದುಲ್ಲಾ ಸಾಬ್, ವಾಸುದೇವಯ್ಯ, ಸೋಮಸುಂದ‌ರ್, ಕವಿತಾ, ಇಂಬ್ರಾನ್, ರಾಕೇಶ್ ಸೇರಿ ಹಲವರು ಹಾಜರಿದ್ದರು.


Share It

You cannot copy content of this page