ಅಪರಾಧ ಸುದ್ದಿ

ಎಸ್ ಸಿ/ಎಸ್ .ಟಿ ಟೆಂಡರ್ ಗೆ ನಕಲಿ ದಾಖಲೆ ಸೃಷ್ಟಿಸಿ ಅರ್ಜಿ ಸಲ್ಲಿಸಿದ್ದ ವ್ಯಕ್ತಿ ವಿರುದ್ಧ ಪ್ರಕರಣ ದಾಖಲು

Share It

ಬೆಳಗಾವಿ: ಧಾರವಾಡ ಮೂಲದ ಬಾಲಕೃಷ್ಣ ಬಸವರಾಜ ಚೋಳಚಗುಡ್ಡ ಎಂಬುವರ ವಿರುದ್ಧ ನಕಲಿ ದಾಖಲೆ ಸೃಷ್ಟಿಸಿ ಟೆಂಡರ್ ಗೆ ಅರ್ಜಿ ಸಲ್ಲಿಕೆ ಮಾಡಿದ ಬಗ್ಗೆ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪರಿಶಿಷ್ಟ ಜಾತಿಯ ಗುತ್ತಿಗೆದಾರನೆಂದು ನಕಲಿ ದಾಖಲೆ ಮೂಲಕ ಇವರು ಟೆಂಡರ್ ಗೆ ಅರ್ಜಿ ಸಲ್ಲಿಸಿದ್ದರು. ಚಿಕ್ಕೋಡಿ ಉಪವಿಭಾಗದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಪಾಂಡುರಂಗ ರಾವ್ ಆಗಸ್ಟ್ ನಾಲ್ಕರಂದು ನೀಡಿದ್ದ ದೂರಿನಂತೆ ಚಿಕ್ಕೋಡಿ ಪಿಎಸ್ ಐ ಬಸಗೌಡ ನೇರ್ಲಿ ಅವರು ಪ್ರಕರಣ ದಾಖಲು ಮಾಡಿಕೊಂಡಿದ್ದರು.

ಈ ಬಗ್ಗೆ ಬೆಳಗಾವಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು, ಚಿಕ್ಕೋಡಿ ವಿಭಾಗ ಗ್ರಾಮೀಣ ಕುಡಿಯುವ ನೀರು ಪೂರೈಕೆ ಮತ್ತು ನೈರ್ಮಲ್ಯ ವಿಭಾಗದ ಕಾರ್ಯಕಾರಿ ಎಂಜಿನಿಯರ್, ತಾಲೂಕು ಪಂಚಾಯಿತಿ ಕಚೇರಿ, ರಾಯಬಾಗ ತಹಸೀಲ್ದಾರರ ನೇತೃತ್ವದಲ್ಲಿ ರಚಿಸಿದ ತನಿಖಾ ತಂಡ ನೀಡಿರುವ ವರದಿಯಂತೆ ಬಾಲಕೃಷ್ಣ ಅವರು ನಕಲಿ ದಾಖಲೆ ಸೃಷ್ಟಿಸಿ ಟೆಂಡರ್ ಸಲ್ಲಿಸಿರುವುದು ಬೆಳಕಿಗೆ ಬಂದಿದೆ.

ಪ್ರಕರಣ ಏನು ?: ಚಿಕ್ಕೋಡಿ ವಿಭಾಗ ವ್ಯಾಪ್ತಿಯಲ್ಲಿ ಜಲಜೀವನ ಮಿಷನ್ ಯೋಜನೆಯಡಿ ಮನೆಗಳಿಗೆ ನೀರು ಪೂರೈಸಲು ನಲ್ಲಿ ಕೂಡಿಸುವ ಸಲುವಾಗಿ ಅಳಗವಾಡಿಯಲ್ಲಿ 29.2 ಲಕ್ಷ ₹ ಮತ್ತು ಅಲಖನೂರಿನಲ್ಲಿ 17.90 ಲಕ್ಷ ₹ ಕಾಮಗಾರಿಗೆ ಗುತ್ತಿಗೆದಾರರಿಂದ ಟೆಂಡರ್ ಕರೆಯಲಾಗಿತ್ತು. ಅದರಲ್ಲೂ ಪರಿಶಿಷ್ಟ ಜಾತಿಯ ಗುತ್ತಿಗೆದಾರರಿಂದ ಈ ಟೆಂಡರ್ ಕರೆಯಲಾಗಿತ್ತು. ಬಾಲಕೃಷ್ಣ ಚೋಳಚಗುಡ್ಡ ತಾನು ಪರಿಶಿಷ್ಟ ವರ್ಗಕ್ಕೆ ಸೇರಿದವನೆಂದು ಟೆಂಡರ್ ಗೆ ಪ್ರಮಾಣ ಪತ್ರದೊಂದಿಗೆ ಅರ್ಜಿ ಸಲ್ಲಿಸಿದ್ದರು.


Share It

You cannot copy content of this page