ಅಪರಾಧ ಸುದ್ದಿ

ಅಪ್ರಾಪ್ತೆ ಶವ ಪತ್ತೆ: ಬೆಳಗಾವಿ ಮೂಲದ ಇಬ್ಬರ ಬಂಧನ

Share It

ಬೆಳಗಾವಿ: ಮಂಗಳೂರಿನ ಜೋಕಟ್ಟೆಯಲ್ಲಿ ಬಾಡಿಗೆ ಮನೆಯ ತನ್ನ ದೊಡ್ಡಪ್ಪನ ಜೊತೆ ವಾಸವಾಗಿದ್ದ 13 ವರ್ಷದ ಅಪ್ರಾಪ್ತ ಬಾಲಕಿಯ ಕತ್ತು ಹಿಸುಕಿ ಕೊಲೆಗೈಯಲಾಗಿದೆ.

ಕೊಲೆಯಾದ ಬಾಲಕಿ ಬೆಳಗಾವಿ ಜಿಲ್ಲೆಯವಳಾಗಿದ್ದು, ಸದ್ಯ ಮಂಗಳೂರು ಜೋಕಟ್ಟೆಯಲ್ಲಿ ವಾಸವಾಗಿರುವ ಹನುಮಂತ ಎಂಬುವರ ಸಹೋದರನ ಮಗಳು ಎಂದು ಗೊತ್ತಾಗಿದೆ. ಬಾಲಕಿ ಕೊಲೆಗೆ ಸಂಬಂಧಪಟ್ಟಂತೆ ಬೆಳಗಾವಿ ಮೂಲದವರೇ ಆಗಿರುವ ಹಾಲಿ ಜೋಕಟ್ಟೆಯಲ್ಲಿ ವಾಸವಾಗಿರುವ ಫಕೀರಪ್ಪ(50) ಮತ್ತು ಶಾಂತಪ್ಪ ಎಂಬುವವರನ್ನು ಮಂಗಳೂರು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ.

ಬಾಲಕಿಯ ದೊಡ್ಡಪ್ಪ ಹಾಗೂ ಫಕೀರಪ್ಪ ಅವರ ಹೇಳಿಕೆಗಳನ್ನು ದಾಖಲಿಸಿಕೊಂಡ ಪೊಲೀಸರು ಅವರ ಹೇಳಿಕೆಗಳಲ್ಲಿ ಅನುಮಾನಗೊಂಡು ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಪಣಂಬೂರು ಪೊಲೀಸರು ಮತ್ತು ಫಾರೆನ್ಸಿಕ್ ವಿಭಾಗದ ಸಿಬ್ಬಂದಿ ಭೇಟಿ ನೀಡಿದ್ದಾರೆ. ಪಣಂಬೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


Share It

You cannot copy content of this page