ಬೆಂಗಳೂರು: ನಮ್ಮ ಮೆಟ್ರೋ ಮತ್ತೊಂದು ದಾಖಲೆಯನ್ನು ತನ್ನದಾಗಿಸಿಕೊಂಡಿದ್ದು, ಮಂಗಳವಾರ ಒಂದೇ ದಿನ ಮೆಟ್ರೋದಲ್ಲಿ 8.26 ಲಕ್ಷ ಜನ ಪ್ರಯಾಣ ಮಾಡಿದ್ದಾರೆ.
ನಮ್ಮ ಮೆಟ್ರೋ ರೈಲಿನಲ್ಲಿ ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಮಂಗಳವಾರ ಒಂದೇ ದಿನ 8.26 ಲಕ್ಷ ಜನ ಸಂಚರಿಸಿದ್ದಾರೆ. ಈ ಮೂಲಕ ಹಿಂದಿನ ದಾಖಲೆಗಳನ್ನು ಮೀರಿಸಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ಮೆಟ್ರೋ ಪ್ರಯಾಣದ ಮೂಲಕ ದಾಖಲೆ ಬರೆದ ಮತ್ತು ವಾಯುಮಾಲಿನ್ಯ ತಗ್ಗಿಸುವ ನಿಟ್ಟಿನಲ್ಲಿ ಸಾಮಾಹಿಕ ಸಾರಿಗೆಗೆ ಒತ್ತು ನೀಡುತ್ತಿರುವ ಬೆಂಗಳೂರಿನ ಜನತೆಗೆ ಧನ್ಯವಾದಗಳು ಎಂದು ನಮ್ಮ ಮೆಟ್ರೋ ತಿಳಿಸಿದೆ.