ಶಾಸಕ ಶರತ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಟೌನ್‌ಶಿಪ್ ಬೇಡ ವೆಂದ ರೈತರು, ಮುಖಂಡರು
ಹೊಸಕೋಟೆ : ತಾಲೂಕಿನನಂದಗುಡಿಹಾಗೂಸೂಲಿಬೆಲೆ ಹೋಬಳಿ ವ್ಯಾಪ್ತಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಟೌನ್ ಶಿಪ್ ಯೋಜನೆಗೆ ಭೂಮಿ ಬಿಟ್ಟುಕೊಡಲು ರೈತರು ತೀವ್ರ ವಿರೋಧವ್ಯಕ್ತಪಡಿಸಿ, ಯೋಜನೆ ಕೈ ಬಿಡುವಂತೆ ಒತ್ತಾಯಿಸಿರುವ ಹಿನ್ನೆಲೆಯಲ್ಲಿ ಅಭಿಪ್ರಾಯ ಸಂಗ್ರಹಿಸಲು ಶಾಸಕ ಶರತ್ ಬಚ್ಚೇಗೌಡನೇತೃತ್ವದಲ್ಲಿ 32 ಗ್ರಾಮಗಳ ರೈತರ ಸಭೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ಶಾಸಕ ಶರತ್ ಬಚ್ಚೇಗೌಡ, ನಂದಗುಡಿ ಮತ್ತು ಸೂಲಿಬೆಲೆ ಹೋಬ ಳಿಯ ಆರೇಳು ಗ್ರಾಮಗಳು ಒಳಗೊಂಡಂತೆ 18,500 ಎಕರೆ ಪ್ರದೇಶದಲ್ಲಿ ಟೌನ್‌ಶಿಪ್ ಯೋಜನೆ ಸಿದ್ದಪಡಿಸಲಾಗಿದೆ. ಇದರಲ್ಲಿ4ಸಾವಿರ ಎಕರೆ ಸರ್ಕಾರಿ ಜಾಗವಿದೆ. ಟೌನ್‌ಶಿಪ್‌ನಿಂದ ಈ ಭಾಗದ ಗ್ರಾಮಗಳು ಸಾಕಷ್ಟು ಅಭಿವೃದ್ಧಿಯಾಗಲಿದೆ. ಟೌನ್‌ಶಿಪ್ ಅಂದರೆ ಕೇವಲ ಕೈಗಾರಿಕೆಗಳ ಸ್ಥಾಪನೆ ಮಾತ್ರವಲ್ಲ. ಬದಲಾಗಿ ಸುಸಜ್ಜಿತ ಶಾಲೆ, ಆಸ್ಪತ್ರೆ, ಶಾಪಿಂಗ್ ಮಾಲ್ ಸೇರಿದಂತೆ ಅಗತ್ಯ ಎಲ್ಲಾ ಸೌಲಭ್ಯಗಳು ಕಲ್ಪಿಸಲಾಗುವುದು ಎಂದರು.

ಸರ್ಕಾರ ಭೂಮಿ ಕೊಡುವ ರೈತರಿಗೆ ಹಣ ಅಥವಾ ಎಕರೆ ಅಭಿವೃದ್ಧಿ ಪಡಿಸಿದ 10 ಸಾವಿರ ಅಡಿ ಭೂಮಿ ಕೊಡಬಹುದು. ಅಭಿವೃದ್ಧಿ ಕಾಲಕಾಲಕ್ಕೆ ಬದಲಾಗಬೇಕು. ಆದರೆ ರೈತರು ಭೂಮಿ ಜೊತೆ ಭಾವನಾತ್ಮಕ ಸಂಬಂಧ ಹೊಂದಿರುತ್ತಾರೆ. ಆದ್ದರಿಂದಲೆ ಅಭಿಪ್ರಾಯ ಸಂಗ್ರಹಿ ಸರ್ಕಾರದ ಗಮನಕ್ಕೆ ತರಲು ಸಭೆ ಆಯೋಜಿಸಿದೆ ಎಂದರು.
ವೃಷಭಾವತಿ ಯೋಜನೆ: ನಂದಗುಡಿ ಹಾಗೂ ಸೂಲಿಬೆಲೆ ಹೋಬಳಿ ಕೆರೆಗಳಗೆ ನೀರು ತುಂಬಿಸುವ ಉದ್ದೇಶದಿಂದ 60 ಎಂಎಲ್‌ಡಿ ನೀರನ್ನು ಹೊರಮಾವು ಬಳಿಯಿಂದ ಬೆಟ್ಟಕೋಟೆ ಮಾರ್ಗವಾಗಿ ನಂದಗುಡಿ ಹಾಗೂ ಸೂಲಿಬೆಲೆ ಭಾಗದ 59 ಕೆರೆಗೆ ನೀರು ಹರಿಸಲು ಡಿಪಿಆರ್ ತಯಾರಾಗಿದೆ. 150 ಕೋಟಿ ವೆಚ್ಚದಲ್ಲಿ ವೃಷಭಾವತಿ ಯೋಜನೆಯಿಂದ ನೀರು ತುಂಬಿಸಲು ಯೋಜನೆ ಸಿದ್ಧಪಡಿಸಲಾಗಿದೆ ಎಂದರು.
ಮಾಜಿ ತಾಪಂ ಅಧ್ಯಕ್ಷ ಕೆಂಚೇಗೌಡ ಮಾತನಾಡಿ 2006ರಲ್ಲಿ ಕೇಂದ್ರ ಸರ್ಕಾರದಿಂದ ನಂದಗುಡಿಯಲ್ಲಿ ವಿಶೇಷ ವಿತ್ತ ವಲಯ ಮಾಡಲು 36 ಹಳ್ಳಿಗಳ ವ್ಯಾಪ್ತಿಯಲ್ಲಿ 12 ಸಾವಿರ ಎಕರೆ ಪ್ರದೇಶದ ಭೂಸ್ವಾಧೀನಕ್ಕೆ ಮುಂದಾಗಿದ್ದ ವೇಳೆ ರಾಜಭವನ ಚಲೋ ಮೂಲಕ ತಡೆ ಹಿಡಿದಿದ್ದೆವು. ಈಗ ಕೂಡ ಅದೇ ಪರಿಸ್ಥಿತಿ ಬಂದಿದೆ ಎಂದರು.
ರಾಜ್ಯ ಒಕ್ಕಲಿಗರ ಸಂಘದ ಕಾರ್ಯದರ್ಶಿ ರಾಜಶೇಖರಗೌಡ, ಟಿಎಪಿಸಿಎಂಎಸ್ ಉಪಾಧ್ಯಕ್ಷ ರವೀಂದ್ರ, ಜಿಪಂ ಮಾಜಿ ಸದಸ್ಯ ಕಲ್ಲಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಧರ್ಮೇಶ್, ತಾಪಂ ಮಾಜಿ ಸದಸ್ಯರಾದ ಬೀರಪ್ಪ, ರುದ್ರೇಗೌಡ, ಎಸ್‌ಎಫ್ ಸಿಎಸ್ ಅಧ್ಯಕ್ಷ ಕೆ.ಮಂಜುನಾಥ್, ಸಮಾಜ ಸೇವಕರಾದ ಕಲ್ಕೆರೆ ಮಹದೇವಯ್ಯ, ಮಂದೀಪ್ ಗೌಡ ಇತರರು ಪಾಲ್ಗೊಂಡಿದ್ದರು.
- ನಂದಗುಡಿ ಹೋಬಳಿಯಲ್ಲಿ ಹೈನುಗಾರಿಕೆ, ತರಕಾರಿ, ಹೂವು, ರೇಷ್ಮೆ ಬೆಳೆಯುತ್ತಾರೆ. ಟೌನ್ ಶಿಪ್‌ನಿಂದ ರೈತರು ಭೂಮಿ ಕಳೆದುಕೊಂಡು, ಬರುವ ಹಣವನ್ನೂ ಖರ್ಚು ಮಾಡಿಕೊಂಡು ಬರಿಗೈಯಲ್ಲಿ ಕೂರಬೇಕಾಗುತ್ತದೆ. ಆದರಿಂದ ನಾವ ಆದ್ದರಿಂದ ನಾವು ನಮ್ಮ ಭೂಮಿಯಲ್ಲಿ ಏನೇ ಬೆಳೆದರೂ, ಯಾವುದೇ ಸಾಲ ಮಾಡಿಕೊಂಡರೂ ನಾವು ಮಾತ್ರ ನಮ್ಮ ಭೂಮಿ ಬಿಡೋಲ್ಲ.
- ದೇವೇಗೌಡ, ಪ್ರಗತಿಪರ ರೈತ, ಇಟ್ಟಸಂದ್ರ
- ಸಾಕಷ್ಟು ರೈತರಿಗೆ ಜಮೀನು ಕೊಡುವ ಇಂಗಿತ ಇರಬಹುದು. ಆದರೆ, ಮುಂದಿನ ಪೀಳಿಗೆಗೆ ಜಮೀನನ್ನು ಕಾಪಾಡಿಕೊಂಡು ಒಕ್ಕಲುತನ ಮುಂದುವರೆಸಬೇಕು. ಆದ್ದರಿಂದ ಶಾಸಕರು ಕೆರೆಗಳಿಗೆ ನೀರು ತುಂಬಿಸುವ ಮೂಲಕ ಕೃಷಿ ಚಟುವಟಿಕೆ ಮಾಡಲು ಸಹಕಾರ ನೀಡಬೇಕು. ಹೀಗೆ ಭೂಸ್ವಾಧಿನಕ್ಕೆ ಭೂಮಿ ಬಿಟ್ಟುಕೊಡಬಾರದು.
- ಅಕ್ಟೇಗೌಡ, ಅಧ್ಯಕ್ಷ, ತಾಲೂಕು ರೈತ ಸಂಘ, ಹಸಿರು ಸೇನೆ
ವರದಿ: ನಾರಾಯಣಸ್ವಾಮಿ ಸಿ.ಎಸ್ ಹೊಸಕೋಟೆ
